ಜಿತೇಂದ್ರನಾಥರ ಆಪ್ತ ವಲಯದಲ್ಲಿ ಕಾಣಸಿಗುವ ಮತ್ತೊಬ್ಬ ಕ್ರಾಂತಿಕಾರಿ ಎಂದರೆ ಬರೀಂದ್ರಕುಮಾರ್ ಘೋಷನ್ ಇವರನ್ನು ಬರೀನ್ ಘೋಷ್ ಎಂದು ಕರೆಯುತ್ತಿದ್ದರು. ಜಿತಿನ್ ಜತೆಗೂಡಿ ಕ್ರಾಂತಿಕಾರಿ ಗುಂಪುಗಳನ್ನು ಸಂಘಟಿಸುತ್ತಿದ್ದ ಬರೀನ್ ಅನುಶೀಲನಾ ಸಮಿತಿಯ ಸಹಾಯದಿಂದ ಜುಗಾಂತರ್ ವಾರ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬಳಿಕ ಸಶಸ್ತ್ರ ಹೋರಾಟ ಚಟುವಟಿಕೆಗಳಿಗೆ ನಾಂದಿ ಹಾಡಿದರು. ಕೋಲ್ಕತ್ತಾ ಸೇರಿದಂತೆ ವಿವಿಧೆಡೆ ರಹಸ್ಯ ಶಸ್ತ್ರಾಸ್ತ್ರಗಳ ತಯಾರಿಕೆಗೆ ಮುಂದಾದರು. ಅಲಿಪೋರ್ ಸ್ಫೋಟ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಯಿತು.
Advertisement
ಚಿತ್ತರಂಜನ್‌ದಾಸ್ ಅವರ ಹೋರಾಟದಿಂದ ಮರಣದಂಡನೆ ಜೀವಾವಧಿ ಶಿಕ್ಷೆಗೆ ಇಳಿಯಿತು. ಬರೀನ್ ಅವರು 12 ವರ್ಷ ಜೀವಾವಧಿ ಶಿಕ್ಷೆಯನ್ನು ಅಂಡಮಾನ್ ಸೆಲ್ಯೂಲಾರ್ ಜೈಲಿನಲ್ಲಿ ಕಳೆಯಬೇಕಾಯಿತು. ಬಳಿಕ ಅಲ್ಲಿಂದ ಮರಳಿದ ಅವರು ಅರವಿಂದ ಆಶ್ರಮದಲ್ಲಿ ಕೊನೆದಿನಗಳನ್ನು ಕಳೆದರು.
ಮೊದಲ ಬಾರಿಗೆ ಫ್ರಾನ್ಸ್‌ಗೆ ತೆರಳಿ ಬಾಂಬ್ ತಯಾರಿಸುವುದು, ಸೈನಿಕ ತರಬೇತಿ ಪಡೆದು ಬಂದ ಕ್ರಾಂತಿಕಾರಿ ಹೇಮಚಂದ್ರ ಕನುಂಗೋ, ಬಂಗಾಳದ ರಾಷ್ಟ್ರೀಯವಾದಿ ಚಿಂತಕರಾಗಿದ್ದರು. ಕೊಲ್ಕತ್ತಾದಲ್ಲಿ ಅನುಶೀಲನಾ ಸಮಿತಿಯ ಸಹಾಯದಿಂದ ಬಾಂಬ್ ತಯಾರಿಕಾ ಘಟಕವನ್ನು ಸ್ಥಾಪಿಸಿದರು. ನಿತಿನ್, ಬರೀನ್, ಅರವಿಂದರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಅನೇಕ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಬಳಕೆ, ಸ್ಫೋಟಕಗಳ ತಯಾರಿಕೆಯ ತರಬೇತಿ ನೀಡುತ್ತಿದ್ದರು. ಅಲಿಪೊರ್ ಸ್ಫೋಟದ ಕೇಸಿನಲ್ಲಿ ಆರೋಪಿಯಾಗಿ ಕಂಡುಬರುತ್ತಾರೆ. ಖುದೀರಾಮ್ ಬೋಸ್ (1889- 1908)
1908ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬವನ್ನೇರಿದ ಯುವಕ ಖುದೀರಾಮ್ ಬೋಸ್. ಕಿಂಗ್ಸ್ ಪೋರ್ಡ್ ಎಂಬ ಬ್ರಿಟಿಷ್ ಅಧಿಕಾರಿ ಕ್ರಾಂತಿಕಾರಿಗಳು ಭೀಕರವಾದ ಶಿಕ್ಷೆಗಳನ್ನು ವಿಧಿಸುತ್ತಿದ್ದ. ಇವನ್ನು ಕೊಲ್ಲಬೇಕು ಎಂದು ಕ್ರಾಂತಿಕಾರಿ ತಂಡ ನಿರ್ಧರಿಸಿತು. ಖುದೀರಾಮ್, ಸತ್ಯೇಂದ್ರನಾಥ ಬೋಸ್ ಮತ್ತು ಪ್ರಫುಲ್ಚಾಕಿ ಮೂವರು ಮುಜಾಪುರದಲ್ಲಿ ಕಿಂಗ್ಸ್‌ಪೋರ್ಡ್ ಚಲನವಲಗಳನ್ನು ಗಮನಿಸತೊಡಗಿದರು. ಒಮ್ಮೆ ಕ್ಲಬ್‌ನಿಂದ ಹೊರಬಂದು ತನ್ನ ಕಾರಿನಲ್ಲಿ ತೆರಳುವಾಗ ಕ್ರಾಂತಿಕಾರರ ತಂಡ ಕಾರನ್ನು ಸ್ಫೋಟಿಸಿತು. ಆದರೆ ಆ ವಾಹದಲ್ಲಿ ಫೋರ್ಡ್ ಇರಲಿಲ್ಲ. ಇಬ್ಬರು ಯುವತಿಯರು ಸಾವಿಗೀಡಾಗಿದ್ದರು. ಈ ಮುಜಾಪುರ ಸ್ಫೋಟ ಬ್ರಿಟಿಷರ ನಿದ್ದೆಗೆಡಿಸಿತು. ಬಳಿಕ ಖುದೀರಾಮ್‌ನನ್ನು ಬಂಧಿಸಿ ನೇಣಿಗೇರಿಸಲಾಯಿತು.