ನವಿಮುಂಬಯಿ: ನೆರೂಲ್ ಪೂರ್ವ, ನೆರೂಲ್ ಬಸ್ ಡಿಪೋ ಸಮೀಪದ, ಫೇಸ್-1, ಸೆಕ್ಟರ್-29, ಫ್ಲಾಟ್ ನಂಬರ್ 16ರಲ್ಲಿರುವ ತುಳು-ಕನ್ನಡಿಗರ ಪ್ರತಿಷ್ಠಿತ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ ನೆರೂಲ್ ಇದರ 5ನೇ ವಾರ್ಷಿಕೋತ್ಸವ ಮತ್ತು ಧರ್ಮಶಾಸ್ತದ 32ನೇ ಅಯ್ಯಪ್ಪ ಮಂಡಲ ಪೂಜೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ. 17ರಂದು ಮುಂಜಾನೆಯಿಂದ ಅದ್ದೂರಿಯಾಗಿ ನಡೆಯಿತು.
ತಂತ್ರಿಗಳಾದ ರಾಮಚಂದ್ರ ಬಾಯಾರ್, ಪ್ರಧಾನ ಅರ್ಚಕ ಶ್ರೀಧರ ಭಟ್ ನೇತೃತ್ವದಲ್ಲಿ ಹಾಗೂ ಆಗಮೋಕ್ತರ ಸಹಕಾರದೊಂದಿಗೆ ಪೂಜಾ ಕಾರ್ಯಗಳು ನೆರವೇರಿದ್ದು, ಡಿ. 17ರಂದು ಬೆಳಗ್ಗೆ 9ರಿಂದ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಪುಣ್ಯಾಹವಾಚನ, ತೋರಣ ಸ್ಥಾಪನೆ, ಉಗ್ರಾಣ ಮುಹೂರ್ತ, ದ್ವಾದಶ ನಾಳಿಕೇರ ಅಷ್ಟದ್ರವ್ಯ ಮಹಾಗಣಪತಿ ಹೋಮ, ಶ್ರೀ ಸೂಕ್ತ ಹೋಮ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಅನ್ನಪ್ರಸಾದ ನಡೆಯಿತು. ಸಂಜೆ 5.30ರಿಂದ ಭೂಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜೆ, ವಾಸ್ತು ಬಲಿ, ದಿಕಾ³ಲ ಬಲಿ, ವಾಸ್ತುರಕ್ಷೆ, ರಾತ್ರಿಪೂಜೆ, ರಾತ್ರಿ 9ರಿಂದ ಮಹಾಪೂಜೆ ಇನ್ನಿತರ ಪೂಜಾ ಕಾರ್ಯ ಕ್ರಮಗಳು ನಡೆದವು.
ಈ ವೇಳೆ ಮಂದಿರದ ಕಾರ್ಯಾಧ್ಯಕ್ಷ ರವಿ ಆರ್. ಶೆಟ್ಟಿ, ಅಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಉಪಾಧ್ಯಕ್ಷರಾದ ದಾಮೋದರ ಎಸ್. ಶೆಟ್ಟಿ, ಹರಿ ಎಲ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್ ಕೆ. ರೈ, ಗೌರವ ಕೋಶಾಧಿಕಾರಿ ಸುರೇಶ್ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಸದಾಶಿವ ಎನ್. ಶೆಟ್ಟಿ, ಜತೆ ಕೋಶಾಧಿಕಾರಿ ಅಣ್ಣಪ್ಪ ರಾಜು ಕೋಟೆಕಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾವತಿ ವಿ. ಶೆಟ್ಟಿ, ಗುರುಸ್ವಾಮಿ ಮತ್ತು ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಎನ್. ಶೆಟ್ಟಿ, ಟ್ರಸ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಇಂದಿರಾ ಎಸ್. ಶೆಟ್ಟಿ, ಟ್ರಸ್ಟಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ. ಡಿ. ಶೆಟ್ಟಿ, ಸಂಜೀವ ಎನ್. ಶೆಟ್ಟಿ, ಮಹೇಶ್ ಡಿ. ಪಾಟಿಲ್, ಭಾಸ್ಕರ್ ವೈ. ಶೆಟ್ಟಿ, ರಾಜೇಂದ್ರ ಪ್ರಸಾದ್ ಮಾಡಾ, ಪ್ರಕಾಶ್ ಮಹಾಡಿಕ್, ಡಾ| ಶಿವ ಮೂಡಿಗೆರೆ, ರಾಮಕೃಷ್ಣ ಎಸ್. ಶೆಟ್ಟಿ, ನಿತ್ಯಾನಂದ ವಿ. ಶೆಟ್ಟಿ, ಸುರೇಂದ್ರ ಆರ್. ಶೆಟ್ಟಿ, ಮೇಘರಾಜ್ ಎಸ್. ಶೆಟ್ಟಿ, ತಂತ್ರಿಗಳಾದ ರಾಮಚಂದ್ರ ಬಾಯಾರಿ, ಮುಖ್ಯ ಅರ್ಚಕ ಶ್ರೀಧರ ಭಟ್, ನೆರೂಲ್ ಶ್ರೀ ಮಣಿಕಂಠ ಸೇವಾ ಸಂಘಂ, ಧರ್ಮಶಾಸ್ತ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ಕೊಂಡು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಡು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.
ಡಿ.18 ಮತ್ತು 19ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಹಾ ಅನ್ನಸಂತರ್ಪಣೆ ಜರಗಲಿದೆ. ಈ ವೇಳೆ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ ತಿಳಿಸಿದೆ.