Advertisement

ಮುಂದಿನ ಚಿತ್ರ ಘೋಷಿಸಿದ ಆಯುಷ್ಮಾನ್ ಖುರಾನಾ

05:46 PM Oct 09, 2021 | Team Udayavani |

ಮುಂಬೈ: ಆಯುಷ್ಮಾನ್ ಖುರಾನಾ ಅವರು ತಮ್ಮ ಮುಂದಿನ ಚಿತ್ರವನ್ನು ಶನಿವಾರ ಘೋಷಿಸಿದ್ದಾರೆ. ಆನಂದ್ ಎಲ್ ರಾಯ್ ಅವರೊಂದಿಗೆ ಮತ್ತೊಂದು ಬಾರಿ ಕೆಲಸ ಮಾಡುವ ಅವಕಾಶ ಲಭಿಸಿದೆ. ಈ ಹಿಂದೆ ಶುಭಮಂಗಲ್ ಹೀರೊ ಸಾವಧಾನ್ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಇದೀಗ “ಆ್ಯಕ್ಷನ್ ಹಿರೋ” ಎಂಬ ಚಿತ್ರದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ.

Advertisement

ಟಿ-ಸೀರಿಸ್ ಮುಖ್ಯಸ್ಥ ಭೂಷಣ್ ಕುಮಾರ್ ಚಿತ್ರವನ್ನು ನಿರ್ಮಿಸಲಿದ್ದು, ಅನಿರುದ್ಧ್ ಐಯ್ಯರ್ ನಿರ್ದೇಶಿಸಲಿದ್ದಾರೆ.

ಆಯುಷ್ಮಾನ್ ಖುರಾನಾ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ, ”ಈ ಚಿತ್ರದಲ್ಲಿ ಫೈಟ್ ಮಾಡುತ್ತಿದ್ದೇನೆ ಆದರೆ ನಿಜವಾಗಿ ಪೈಟ್ ಮಾಡುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಆಯುಷ್ಮಾನ್ ಖುರಾನಾ ಮಾತನಾಡಿ, ನಾನು ಆನಂದ್ ಎಲ್ ರಾಯ್ ಅವರೊಂದಿಗೆ ಮೂರನೇ ಬಾರಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.  ಹೀರೊ ಚಿತ್ರ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತದೆ ಎಂದು ಅಂದುಕೊಂಡಿದ್ದೇವೆ. ಭೂಷಣ್ ಜೊತೆ ಮತ್ತೆ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೇನೆ.  ಕಲರ್ ಎಲ್ಲೋ ಮತ್ತು ಟಿ-ಸೀರಿಸ್ ನನ್ನ ಎರಡನೇ ಮನೆ ಇದ್ದಂತೆ. ಆ್ಯಕ್ಷನ್ ಹಿರೋ ಚಿತ್ರದ ಸ್ಕ್ರಿಪ್ಟ್ ಬಹಳ ಮೆಚ್ಚುಗೆಯಾಗಿದೆ ಅದಕ್ಕಾಗಿಯೇ ಮತ್ತೊಮ್ಮೆ ನಾನು ಈ ತಂಡದ ಜೊತೆ ಕೆಲಸ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

Advertisement

ಚಿತ್ರದ ಬಗ್ಗೆ ನಿರ್ಮಾಪಕ ಆನಂದ್ ರಾಯ್ ಮಾತನಾಡಿ, ಈ ಚಿತ್ರವನ್ನು ಇಂದಿನ ತಲೆಮಾರಿಗಾಗಿ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದ್ದು, ಮೂರನೇ ಬಾರಿ ಆಯುಷ್ಮಾನ್ ಖುರಾನಾ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅವರೊಂದಿಗೆ ಕೆಲಸ ಮಾಡಲು ಬಹಳ ಖುಷಿಯಾಗುತ್ತಿದೆ. ಈ ಚಿತ್ರ ತೆರೆಯ ಮೇಲೆ ಬರುವುದನ್ನು ಎದುರು ನೋಡುತ್ತಿದ್ದೇನೆ.

ನಿರ್ದೇಶಕ ಅನಿರುದ್ಧ್ ಐಯ್ಯರ್ ಹಾಗೂ ಆನಂದ್ ಎಲ್ ರಾಯ್ ಅವರು ಈ ಹಿಂದೆ ಝೀರೋ ಮತ್ತು ತನು ವೆಡ್ಸ್ ಮನು ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.

ಈ ಚಿತ್ರವನ್ನು ದೊಡ್ಡ ಬಜೆಟ್‍ನಲ್ಲಿ ನಿರ್ಮಾಣ ಮಾಡಲಿದ್ದು, ಬಹುಪಾಲು ಚಿತ್ರೀಕರಣವನ್ನು ಅಮೇರಿಕಾದಲ್ಲಿ ಮಾಡಲಾಗುತ್ತಿದೆ ಎಂದು ಚಿತ್ರ ತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next