Advertisement

ಆಯುಷ್ಮಾನ್‌ ಭಾರತ್‌ ಅರ್ಜಿಗೆ ಜನಜಂಗುಳಿ

10:35 PM Mar 28, 2019 | Sriram |

ಕಾರ್ಕಳ: ಸಾರ್ವಜನಿಕ ತಾಲೂಕು ಆಸ್ಪತ್ರೆ ಕೌಂಟರ್‌ ಮುಂದೆ ಆಯುಷ್ಮಾನ್‌ ಭಾರತ್‌ ವಿಮೆ ಅರ್ಜಿ ಪಡೆಯಲು ಬಹುದೊಡ್ಡ ಸರತಿ ಸಾಲು ಉಂಟಾದ ಪರಿಣಾಮ ಹೊರರೋಗಿಗಳು ರಶೀದಿ ಪಡೆಯಲು, ರೋಗಿಗಳ ದಾಖಲಾತಿ, ಡಿಸಾcರ್ಜ್‌ ಸಂಬಂಧಿಸಿದ ಕಾರ್ಯಗಳಿಗೆ ತೊಂದರೆ ಪಡಬೇಕಾಯಿತು.

Advertisement

ಬೇರೆ ಸಿಬಂದಿಯಿಲ್ಲ
ಸಾರ್ವಜನಿಕ ಆಸ್ಪತ್ರೆ ಕೇಂದ್ರದಲ್ಲಿ ಬಿಲ್ಲಿಂಗ್‌ ಕೌಂಟರ್‌, ಹೊರರೋಗಿ, ಒಳರೋಗಿಗಳ ದಾಖಲೆ, ಸಂಧ್ಯಾಸುರಕ್ಷಾ ಯೋಜನೆ ಫ‌ಲಾನುಭವಿಗಳ ಅರ್ಜಿ ಸಕಾಲಕ್ಕೆ ಅಪ್‌ಲೋಡ್‌ ಮಾಡುವ ಕಾರ್ಯ, ಗರ್ಭಿಣಿಯರಿಗೆ ಸಂಬಂಧಿಸಿದ ದಾಖಲೆ, ವಿಮೆಗಾಗಿ ರೋಗಿಗಳ ಫೋಟೋ ತೆಗೆಯುವ ಕಾರ್ಯ, ಪೊಲೀಸರ ಮಾಹಿತಿ ಕೇಂದ್ರವೆಲ್ಲಕ್ಕೂ ಒಂದೇ ಕೌಂಟರ್‌ ಅನ್ನು ಜನರು ಅವಲಂಬಿಸಬೇಕಾಗಿದೆ.

ಇದೀಗ ಆಯುಷ್ಮಾನ್‌ ಭಾರತ್‌ ಅರ್ಜಿ ಪಡೆಯಲು ಇದೇ ಕೌಂಟರ್‌ ಬಳಕೆ ಮಾಡುವುದರಿಂದ ಸೇವೆ ವಿಳಂಬ ವಾಗುತ್ತಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೌಂಟರ್‌ನಲ್ಲಿ ಕೇವಲ ಮೂರು ಮಂದಿ ಕಾರ್ಯನಿರ್ವಹಿಸುತ್ತಿರುವ ಕಾರಣ ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಪತ್ಯೇಕ ಕೌಂಟರ್‌ ತೆರೆಯಲಿ
ಎಲ್ಲ ಸೇವೆಯೂ ಒಂದೇ ಕೌಂಟರ್‌ನಲ್ಲಿ ನೀಡುವುದಾದರೂ ಹೇಗೆ? ಆಯುಷ್ಮಾನ್‌ ಭಾರತ್‌ ಯೋಜನೆಗೆ ಪ್ರತ್ಯೇಕ ಕೌಂಟರ್‌ ತೆರೆಯಬೇಕೆಂದು ಸಾಲು ನಿಂತ ವ್ಯಕ್ತಿಯಲ್ಲೊಬ್ಬರಾದ ಜಗದೀಶ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಲೂಕಿಗೊಂದೇ ಕೇಂದ್ರ
ಆಯುಷ್ಮಾನ್‌ ಭಾರತ್‌ ವಿಮೆ ಅರ್ಜಿಯನ್ನು ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಸ್ವೀಕರಿಸಲಾಗುತ್ತಿದೆ. ಮಾ. 2ರಿಂದ ಅರ್ಜಿ ಸ್ವೀಕಾರಕ್ಕೆ ಚಾಲನೆ ದೊರೆತಿದ್ದು, ಪ್ರತಿದಿನ ಸುಮಾರು 200 ಮಂದಿ ಅರ್ಜಿ ಸಲ್ಲಿಸಲು ಆಗಮಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next