Advertisement

ಆಯುಷ್ಮಾನ್‌ ಆರೋಗ್ಯ ಕಾರ್ಡ್‌: ಕರಾವಳಿಯಲ್ಲಿ ಶೇ. 50 ಸಾಧನೆ

11:19 PM Sep 27, 2021 | Team Udayavani |

ಬೆಂಗಳೂರು: ಕರಾವಳಿ ಭಾಗದ ಜಿಲ್ಲೆಗಳ ಪ್ರತಿ ಇಬ್ಬರಲ್ಲಿ ಒಬ್ಬರು ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ ಹೊಂದಿದ್ದಾರೆ !

Advertisement

ವಾರ್ಷಿಕ ಬಿಪಿಎಲ್‌ ಕುಟುಂಬಗಳಿಗೆ 5 ಲಕ್ಷ ರೂ., ಎಪಿಎಲ್‌ ಕುಟುಂಬಗಳಿಗೆ 1.5 ಲಕ್ಷ ರೂ. ಆಸ್ಪತ್ರೆ ಚಿಕಿತ್ಸಾ ವೆಚ್ಚದ ನೆರವು ನೀಡುವ ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಗೆ ಮೂರು ವರ್ಷ ತುಂಬಿದೆ. ರಾಜ್ಯದಲ್ಲಿ ಒಟ್ಟಾರೆ 7.02 ಕೋಟಿ ಜನಸಂಖ್ಯೆ ಇದ್ದು, ಈ ಪೈಕಿ ಸೆ. 23ರ ವೇಳೆಗೆ 58.8 ಲಕ್ಷ ಕುಟುಂಬಗಳ 1,47,36,918 ಮಂದಿ ನೋಂದಣಿಯಾಗಿ ಆರೋಗ್ಯ ಕಾರ್ಡ್‌ ಪಡೆದುಕೊಂಡಿದ್ದಾರೆ. ಅಂದರೆ ಶೇ. 20ರಷ್ಟು ಮಂದಿಗೆ ಈ ಯೋಜನೆ ತಲುಪಿದೆ. ಆದರೆ ಕರಾವಳಿ ಭಾಗದಲ್ಲಿ ಆಯುಷ್ಮಾನ್‌ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಶೇ. 50ರಷ್ಟು ಜನರು ಆಯುಷ್ಮಾನ್‌ ಕಾರ್ಡ್‌ ಹೊಂದಿದ್ದಾರೆ.

ಉಡುಪಿಯಲ್ಲಿ ಶೇ. 64, ಉತ್ತರ ಕನ್ನಡ ಶೇ. 41, ದಕ್ಷಿಣ ಕನ್ನಡ ಶೇ. 37 ಹಾಗೂ ಕೊಡಗು ಶೇ. 58ರಷ್ಟು ಮಂದಿಯಲ್ಲಿ ಈ ಕಾರ್ಡ್‌ ಇದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಶೇ. 40 ರಷ್ಟು ಮಂದಿ ಯೋಜನೆಗೆ ನೋಂದಣಿಯಾಗಿದ್ದಾರೆ. ಆದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೇ. 20ಕ್ಕಿಂತಲೂ ಕಡಿಮೆ ಮಂದಿಗೆ ಈ ಯೋಜನೆ ತಲುಪಿದೆ.

ಇದನ್ನೂ ಓದಿ:ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಶೇ. 82ರಷ್ಟು ಬಡವರಿಗೆ ತಲುಪಿದೆ
ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್‌) 55.96 ಲಕ್ಷ ಕುಟುಂಬಗಳಿದ್ದು, ಇವುಗಳ 1.2 ಕೋಟಿ ಮಂದಿ ಈಗಾಗಲೇ ಆಯುಷ್ಮಾನ್‌ ಕಾರ್ಡ್‌ ಪಡೆದುಕೊಂಡಿದ್ದಾರೆ. ಈ ಮೂಲಕ ಶೇ. 82ರಷ್ಟು ಬಡವರಿಗೆ ಈ ಯೋಜನೆ ತಲುಪಿದಂತಾಗಿದೆ. ಎಪಿಎಲ್‌ ಕುಟುಂಬಗಳ ಸಂಖ್ಯೆ 2.5 ಆಗಿದ್ದು, ಈ ಪೈಕಿ ಶೇ. 3.5ರಷ್ಟು ಮಂದಿ ಮಾತ್ರ ನೋಂದಣಿ ಮಾಡಿದ್ದಾರೆ.

Advertisement

ಎಲ್ಲ ಸರಕಾರಿ ಆಸ್ಪತ್ರೆಗಳು, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆಯುಷ್ಮಾನ್‌ ಕಾರ್ಡ್‌ ನೀಡಲಾಗುತ್ತಿದ್ದು, ದಾಖಲೆ ನೀಡಿದರೆ 10 ನಿಮಿಷದಲ್ಲಿ ಕಾರ್ಡ್‌ ಲಭ್ಯವಾಗಲಿದೆ. ಬಿಪಿಎಲ್‌ ಕುಟುಂಬಗಳ ಶೇ. 82ರಷ್ಟು ಮಂದಿ ಈಗಾಗಲೇ ಕಾರ್ಡ್‌ ಪಡೆದಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿ, ಕಾರ್ಡ್‌ ನೋಂದಣಿ ಕೇಂದ್ರ ಮತ್ತಷ್ಟು ಹೆಚ್ಚಿಸಿ ಯೋಜನೆಯನ್ನು ಎಲ್ಲರಿಗೂ ತಲುಪಿಸಲಾಗುತ್ತದೆ.
ಡಾ| ತ್ರಿಲೋಕ್‌ ಚಂದ್ರ,
ಆಯುಕ್ತ, ಆರೋಗ್ಯ ಇಲಾಖೆ

 

Advertisement

Udayavani is now on Telegram. Click here to join our channel and stay updated with the latest news.

Next