Advertisement

Ayushman: ಆಯುಷ್ಮಾನ್‌ ಭವ ಆರೋಗ್ಯ ಮೇಳ- ಕ್ಯೂಆರ್‌ಕೋಡ್‌ ಸ್ಕ್ಯಾನ್‌

11:19 PM Oct 05, 2023 | Team Udayavani |

ಬೆಂಗಳೂರು: ಆಯುಷ್ಮಾನ್‌ ಭವ ಡಿಜಿಟಲ್‌ ಮಿಷನ್‌ ಅಂಗವಾಗಿ ರಾಜ್ಯಾದ್ಯಂತ ಅಂಗಾಂಗ ದಾನದ ಮಹತ್ವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವ ನಡುವೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನದ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

Advertisement

ಗುರುವಾರ ವಿಕಾಸೌಧದಲ್ಲಿ ಆನ್‌ಲೈನ್‌ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಅಂಗಾಂಗ ದಾನ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಆಯುಷ್ಮಾನ್‌ ಭವ ಆರೋಗ್ಯ ಮೇಳದಲ್ಲಿ ಅಂಗಾಂಗ ದಾನದ ಮಹತ್ವವನ್ನು ಪ್ರಚಾರ ಮಾಡಲು ಇಲಾಖೆ ಮುಂದಾಗಿದೆ. ಆರೋಗ್ಯ ಮೇಳಗಳಲ್ಲಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವವರನ್ನು ಸ್ಥಳದಲ್ಲಿಯೇ ಪ್ರೋತ್ಸಾಹಿಸಲಾಗುತ್ತಿದೆ. ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವಲ್ಲಿ ಕರ್ನಾಟಕವು ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಜೀವಸಾರ್ಥಕತೆ ಕ್ಯೂಆರ್‌ ಕೋಡ್‌ನ‌ಲ್ಲಿ ಒಟ್ಟು 35 ಸಾವಿರಕ್ಕೂ ಹೆಚ್ಚು ಜನರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ ಎಂದರು.

ಇದೇ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ನಿರ್ದೇಶಕರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡರು.

ಕೇಂದ್ರ ಆರೋಗ್ಯ ಇಲಾಖೆ ಆಯುಷ್ಮಾನ್‌ ಭವ ಆರೋಗ್ಯ ಮೇಳ ದೇಶಾದ್ಯಂತ ಹಮ್ಮಿಕೊಂಡಿದೆ. ಸೆ.17ರಿಂದ ಅ.5ರವರೆಗೆ ಅಂಗಾಂಗ ದಾನ ರಾಜ್ಯವಾರು ಪಟ್ಟಿಯಲ್ಲಿ ಮಹಾರಾಷ್ಟ್ರದಲ್ಲಿ 593, ಮಧ್ಯಪ್ರದೇಶದಲ್ಲಿ 937 ಹಾಗೂ ಕರ್ನಾಟಕದಲ್ಲಿ 241 ಮಂದಿ ಅಂಗಾಂಗಗಳ ದಾನಕ್ಕೆ ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ಸೆ.17ರಿಂದ ಅ.5ರ ವರೆಗೆ ರಾಜ್ಯದಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮೂಲಕ 6273 ಮಂದಿ ಅಂಗಾಂಗ ದಾನಕ್ಕೆ ನೊಂದಾಯಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next