ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.
Advertisement
ಈಗಾಗಲೇ ಅತ್ಯಾಧುನಿಕ ಆಪರೇಷನ್ ಥಿಯೇಟರ್ ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಡಿ ಸಿದ್ಧಗೊಂಡಿದೆ. ಇಲ್ಲಿ ಕ್ಷಾರಸೂತ್ರ ಚಿಕಿತ್ಸೆ ಆರಂಭಿಸಲಿದ್ದು, ಪುತ್ತೂರಿನ ಸುಶ್ರುತ ಆಸ್ಪತ್ರೆಯ ವೈದ್ಯ ಡಾ| ರವಿಶಂಕರ್ ಪೆರುವಾಜೆ ಹಾಗೂ ಶಿವಮೊಗ್ಗ ಆಸ್ಪತ್ರೆಯ ತಜ್ಞ ವೈದ್ಯರು ಆಗಮಿಸಿ ಚಿಕಿತ್ಸೆ ನೆರವೇರಿಸಲಿದ್ದಾರೆ ಎಂದರು.
ಪ್ರತೀ ವಾರ 10 -25 ಸರ್ಜರಿಗೆ ಅವಕಾಶವಿದ್ದು, ಯುನಾನಿಯ ಹಿಜಾಮ ಚಿಕಿತ್ಸಾ ಸೌಲಭ್ಯವೂ ಇದೆ. ಫಿಸಿಯೋಥೆರಪಿ ಸೆಂಟರ್‌ನಲ್ಲಿ ಎಲ್ಲ ವಿಧದ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಆಧುನಿಕ ಯಂತ್ರದಿಂದ ಹೈಡ್ರೋ ಥೆರಪಿ, ಗಂಟು ನೋವಿಗೆ ಸರ್ಜರಿ ರಹಿತ ಚಿಕಿತ್ಸಾ ಸೌಲಭ್ಯವೂ ಇದೆ. ಎಲ್ಲ ಬಗೆಯ ಚಿಕಿತ್ಸೆಯನ್ನೂ ಉಚಿತವಾಗಿಯೇ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಆಯುಷ್ ಆಸ್ಪತ್ರೆಯಲ್ಲಿ ಪ್ರಸಕ್ತ 20 ಬೆಡ್‌ಗಳಿದ್ದು, ಡಿಸೆಂಬರ್ ವೇಳೆಗೆ ಇದು 50 ಬೆಡ್ ವ್ಯವಸ್ಥೆ ಆಗಲಿದೆ ಎಂದರು. ಸೃಷ್ಟಿ ಯೋಜನೆ
ಸೃಷ್ಟಿ ಯೋಜನೆಯಲ್ಲಿ ಈಗಾಗಲೇ ಮೂವರು ಮಕ್ಕಳು ಜನಿಸಿದ್ದಾರೆ. 57 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪೌಷ್ಠಿಕತೆ ನಿವಾರಣೆಗೆ ಸಮೃದ್ಧಿ ಯೋಜನೆ, ತಾಯಿ ಮತ್ತು ಮಕ್ಕಳ ಆರೋಗ್ಯ ಪಾಲನೆಗೆ ಸುಪ್ರಜಾ ಯೋಜನೆ, ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ಅಥವಾ ಬೆಳ್ತಂಗಡಿಗೆ ಆಯುಷ್ ಸಂಚಾರಿ ಕ್ಲಿನಿಕ್ ಕಾರ್ಯಕ್ರಮ ಶೀಘ್ರವೇ ಆರಂಭವಾಗಲಿದೆ ಎಂದರು.
Related Articles
Advertisement
ನ್ಪೋರ್ಟ್ಸ್ ಮೆಡಿಸಿನ್ ಸೆಂಟರ್ 2 ವರ್ಷದಲ್ಲಿ ಕಾರ್ಯಾರಂಭ
ದೇಶದಲ್ಲೇ ಮೊದಲ ಆಯುಷ್ ನ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಎರಡು ವರ್ಷಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಫಿಟೆ°ಸ್ ಲ್ಯಾಬ್, ವಿವಿಧ ಯಂತ್ರೋಪಕರಣಗಳು ಇರಲಿವೆ. ಈ ಬಗ್ಗೆ ಸಾಯ್ ಹಾಗೂ ಯುವಜನ ಸೇವಾ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ 25 ಸಿಬಂದಿ ನೇಮಕಕ್ಕೆ ಮಂಜೂರಾತಿ ದೊರೆತಿದೆ ಎಂದು ಡಾ| ಇಕ್ಬಾಲ್ ತಿಳಿಸಿದರು.