Advertisement

ಕೊರೊನಿಲ್‌ ಮಾರಾಟಕ್ಕೆ ಆಯುಷ್‌ ಇಲಾಖೆ ಅನುಮತಿ

08:36 AM Jul 02, 2020 | mahesh |

ಹೊಸದಿಲ್ಲಿ: ಪತಂಜಲಿ ಸಂಸ್ಥೆಯ ಕೊರೊನಿಲ್‌ ಔಷಧವನ್ನು ಒಂದು “ರೋಗನಿರೋಧಕ ಶಕ್ತಿ ವರ್ಧಕ’ ಎಂದು ಮಾರಾಟಕ್ಕೆ ಆಯುಷ್‌ ಇಲಾಖೆ ಅನುಮತಿ ನೀಡಿದೆ. ಕೊರೊನಾ ಗುಣಪಡಿಸುವ ಔಷಧ ಎಂದು ಹೇಳಿಕೊಂಡೇ ವಾರದ ಹಿಂದೆ ಕೊರೊನಿಲ್‌ ಅನ್ನು ಬಿಡುಗಡೆ ಮಾಡಿದ್ದ ಪತಂಜಲಿ ಸಂಸ್ಥೆ, ಮಂಗಳವಾರ, ತಾನು ಕೊರೊನಾ ಗುಣಪಡಿಸುವ ಔಷಧ ತಯಾರಿಸೇ ಇಲ್ಲ. ಹಾಗೆಂದು ಎಲ್ಲೂ ಪ್ರಚಾರ ಕೂಡ ಮಾಡಿಲ್ಲ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಈ ಉತ್ಪನ್ನವನ್ನು “ಕೊರೊನಾ ಔಷಧ’ ಎಂದು ಮಾರಾಟ ಮಾಡುವಂತಿಲ್ಲ ಮತ್ತು ಪ್ಯಾಕೇಜ್‌ ಮೇಲೆ ಕೊರೊನಾ ಎಂದಾಗಲಿ ಮುದ್ರಿಸುವಂತಿಲ್ಲ ಎಂದು ಆಯುಷ್‌ ಇಲಾಖೆ ಸ್ಪಷ್ಟ ಸೂಚನೆ ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next