Advertisement

ಆಯುಷ್‌ ವಾಹಿನಿಗೆ ಇಂದು ರಾಮದೇವ್‌ ಚಾಲನೆ

03:45 AM Jan 15, 2017 | Harsha Rao |

ಬೆಂಗಳೂರು: ರಾಜಧಾನಿಯ ಸ್ವಾತಂತ್ರ್ಯ ಉದ್ಯಾನದಲ್ಲಿ ಶ್ರೀ ಶಂಕರ ವಾಹಿನಿ ಸ್ಥಾಪಿಸಿರುವ 25 ಅಡಿಗಳ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ (ಬಾಲಾಜಿ) ವಿಗ್ರಹ ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರನ್ನು ಸೆಳೆಯುತ್ತಿದೆ.

Advertisement

ಆಯುಷ್‌ ವಾಹಿನಿ (ಟಿವಿ ಚಾನೆಲ್‌) ಪ್ರಾರಂಭೋತ್ಸವ ಅಂಗವಾಗಿ ಶ್ರೀ ಶಂಕರ ವಾಹಿನಿ ಜ.14 ಮತ್ತು 15ರಂದು μÅàಡಂ ಪಾರ್ಕ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ
ತಿರುಪತಿ ತಿರುಮಲಸ್ವಾಮಿ ದರ್ಶನ ಮಾಡಿಸುವ ಉದ್ದೇಶದಿಂದ ಸುಮಾರು 25 ಅಡಿ ಎತ್ತರದ ಶ್ರೀ ಬಾಲಾಜಿ ವಿಗ್ರಹ ಸ್ಥಾಪಿಸಲಾಗಿದೆ. ಜತೆಗೆ ಧಾರ್ಮಿಕ ವಿಧಿ-ವಿಧಾನಗಳಂತೆ ವಿಶೇಷ ಪೂಜೆ ನಡೆಯುತ್ತಿದ್ದು, ಶನಿವಾರ ಮಹಿಳೆಯರು ವಿಷ್ಣು ಸಹಸ್ರ ನಾಮ ಪಾರಾಯಣದಲ್ಲಿ ಪಾಲ್ಗೊಂಡಿದ್ದರು.

ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದ ಎಡ ಭಾಗದಲ್ಲಿ 10 ಅಡಿ ಎತ್ತರದ ಧನ್ವಂತರಿ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದ್ದು, ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ವಿಶೇಷ ಧನ್ವಂತರಿ ಪೂಜೆ ಮತ್ತು ಹೋಮಗಳನ್ನು ನಡೆಸಲಾಯಿತು.
ಸಾವಿರಾರು ಭಕ್ತರು ವೆಂಕಟೇಶ್ವರ ಸ್ವಾಮಿ ಮತ್ತು ಧನ್ವಂತರಿ ದೇವಿ ದರ್ಶನ ಪಡೆದರು.

ಜತೆಗೆ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಸಲುವಾಗಿ μÅàಡಂ ಪಾರ್ಕ್‌ ಆವರಣದೊಳಗೆ ಪ್ರವೇಶಿಸುವ ದ್ವಾರದ ಬಳಿಯಲ್ಲಿ ಹುಲ್ಲಿನ ಸಣ್ಣಸಣ್ಣ ಗುಡಾರಗಳನ್ನು ನಿರ್ಮಿಸಲಾಗಿತ್ತು. ವಿವಿಧ
ಬಣ್ಣಗಳಿಂದ ಅಲಂಕರಿಸಲಾಗಿದ್ದ ಎತ್ತಿನಗಾಡಿ, ರುಬ್ಬುವ ಕಲ್ಲು, ತೊಟ್ಟಿಲು, ಕಬ್ಬು, ಚಿತ್ತಾರಗಳಿಂದ ಕೂಡಿದ್ದ ಮಡಿಕೆಗಳು ಅತಿಥಿಗಳನ್ನು ಸ್ವಾಗತಿಸುವಂತೆ ಕಂಗೊಳಿಸುತ್ತಿದ್ದವು.

ಶನಿವಾರ ಬೆಳಗ್ಗಿನಿಂದಲೂ ವಿವಿಧ ಕಾರ್ಯಕ್ರಮಗಳು ನಡೆದವು. ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಜರುಗಿದವು. ಪ್ರತಿಭಾ ಪ್ರದರ್ಶನಕ್ಕಾಗಿ ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, ಭರತನಾಟ್ಯ, ಸಂಗೀತ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಂಜೆ 3 ಗಂಟೆ ಸುಮಾರಿಗೆ ಆಯುಷ್‌ ವೈದ್ಯರ ಸಮಾವೇಶ ನಡೆಯಿತು.

Advertisement

ಮನೆಮದ್ದು: ಇಂಗ್ಲಿಷ್‌ ಔಷಧಕ್ಕಿಂತ ನೈಸರ್ಗಿಕವಾಗಿ ಸಿಗುವ ನೂರಾರು ಗಿಡಗಳು ಔಷಧಿ ಗುಣ ಹೊಂದಿವೆ. ಅವುಗಳನ್ನು ಬಳಸುವ ಮೂಲಕ ಕಾಯಿಲೆಗಳಿಂದ ಉಪಶಮನ ಪಡೆಯಲು ಸಾಧ್ಯ. ನಮಗೆ ಗೊತ್ತಿರುವ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ದಾಲಿcನ್ನಿ, ಕರಿಬೇವು, ಜೇನುತುಪ್ಪ ಹೀಗೆ ಅನೇಕ ಪದಾರ್ಥಗಳನ್ನು ಮನೆಮದ್ದಾಗಿ ಬಳಕೆ ಮಾಡಲು ಸಾಧ್ಯ ಎಂಬುದರ ಕುರಿತು ಅರಿವು ಮೂಡಿಸಲಾಯಿತು. ಅನೇಕರು ಆಯುಷ್‌ ವೈದ್ಯರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದು ವಿಶೇಷ.

ಆಯುಷ್‌ ಆಸ್ಪತ್ರೆಗಳಿಂದ ಆಗಮಿಸಿದ್ದ ವೈದ್ಯರು ಮತ್ತು ಸಿಬ್ಬಂದಿ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿದರು. ಧರ್ಮಸ್ಥಳದ ಎಸ್‌ಡಿಎಂ ಆಯುರ್ವೇದ
ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಆಯುರ್ವೇದ ಮಳಿಗೆಗಳು: μÅàಡಂ ಪಾರ್ಕ್‌ ಆವರಣದಲ್ಲಿ ಸುಮಾರು 50ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿತ್ತು. ವಿಶೇಷವಾಗಿ ಆಯುರ್ವೇದ ಔಷಧಿಗಳು, ಆಹಾರ ಪದಾರ್ಥಗಳು, ಪತಂಜಲಿ ಉತ್ಪನ್ನ, ಹರ್ಬಲ್‌
ಉತ್ಪನ್ನ, ಆಯುಷ್‌ ಇಲಾಖೆಯ ಷಡ್‌ರಸ ಆಹಾರ ಖಾದ್ಯ ವೈವಿಧ್ಯ ಪ್ರದರ್ಶಿನಿ, ನಿವೇಶನ ಆಕಾಂಕ್ಷಿಗಳಿಗಾಗಿ ಎರಡು ರಿಯಲ್‌ ಎಸ್ಟೇಟ್‌ ಮಳಿಗೆಗಳಿಗೆ ಅವಕಾಶ ನೀಡಲಾಗಿತ್ತು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ನಿವೇದನ ನೆಂಪೆ ಅವರು ಸಂಶೋಧಿಸಿದ ಅರೆಕಾ ಟೀ ಉತ್ಪನ್ನ, ಮೂಡಿಗೆರೆಯ ದಾರದಹಳ್ಳಿ ದೇಶೀಯ ಗೋವುಗಳ ಮಹತ್ವ ಸಾರುವ ಗೋ ಮ್ಯೂಸಿಯಂ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದವು. ಶ್ರೀ ಶಂಕರ ವಾಹಿನಿಯವರ ಶಂಕರ ಯಾತ್ರ, ಶ್ರೀ ಶಂಕರ ಮ್ಯಾಟ್ರಿಮೋನಿ, ಆಯುರ್‌ ಸೆಂಟ್ರಲ್‌ ಗಮನ ಸೆಳೆದವು. ಸಂಜೆ 6.30ಕ್ಕೆ ನಡೆದ ಗಂಗಾವತಿ ಪ್ರಾಣೇಶ್‌ ಅವರ ಹಾಸ್ಯ ಸಂಜೆ ಸಾಕಷ್ಟು ಮನರಂಜನೆ ನೀಡಿತು.

ಆಯುಷ್‌ ವಾಹಿನಿ ಉದ್ಘಾಟನೆ: ಜ.15ರಂದು ಸಂಜೆ ಆಯುಷ್‌ ವಾಹಿನಿ ಉದ್ಘಾಟನೆಯನ್ನು ಪತಂಜಲಿ ಯೋಗಪೀಠದ ಬಾಬಾ ರಾಮ್‌ ದೇವ್‌ಜಿ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌, ಚಲನಚಿತ್ರ ನಟ, ಶಂಕರವಾಹಿನಿ ರಾಯಭಾರಿ ಉಪೇಂದ್ರ, ಪ್ರಿಯಾಂಕ ಉಪೇಂದ್ರ ಭಾಗವಹಿಸಲಿದ್ದಾರೆ.

ಎರಡು ದಿನಗಳಲ್ಲಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next