Advertisement
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಜನಪರ ಮಾಹಿತಿ -ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆ ಸೌಲಭ್ಯಗಳು, ಇಲಾಖೆ ಕಾರ್ಯವೈಖರಿಗಳ ಕುರಿತು ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ವೇಳೆ ಅವರು ಮಾತನಾಡಿ, ಈ ಮೂರು ಪದ್ಧತಿಯ ಚಿಕಿತ್ಸಾ ಸೌಲಭ್ಯ ಜಿಲ್ಲೆಯಲ್ಲಿ ಲಭ್ಯವಿದೆ ಎಂದರು.
Related Articles
Advertisement
ಸಾರ್ವಜನಿಕರನ್ನು ಸೆಳೆಯಲು ಪ್ರಯತ್ನ: ಆಯುರ್ವೇದ ಚಿಕಿತ್ಸಾ ಪದ್ಧತಿಯ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉಚಿತ ತಪಾಸಣೆ ಶಿಬಿರ, ಅರಿವು ಕಾರ್ಯಕ್ರಮಗಳ ಮೂಲಕ ಆಯುಷ್ ಚಿಕಿತ್ಸೆಯತ್ತ ಸಾರ್ವಜನಿಕರನ್ನು ಸೆಳೆಯುವ ಪ್ರಯತ್ನ ಮುಂದುವರಿದಿದೆ. ಆಯುಷ್ ವೈದ್ಯರು ನಿಗದಿತ ಪ್ರಮಾಣದಲ್ಲಿ ಇದ್ದಾರೆ. ಆದರೆ, ಆಡಳಿತಾತ್ಮಕ ಸಿಬ್ಬಂದಿ, ಗ್ರೂಪ್ ಸಿ, ಎಸ್‌ಡಿಎ, ಎಫ್ಡಿಎ ಹಾಗೂ ಡಿ ಗ್ರೂಪ್ ಹುದ್ದೆಗಳು ಖಾಲಿ ಎಂದು ತಿಳಿಸಿದರು.
ಅರಬ್ ಮೂಲದ ಯೂನಾನಿ ಪದ್ಧತಿ: ಯುನಾನಿ ವೈದ್ಯೆ ಡಾ.ಜಮೀಲಾ ಮಾತನಾಡಿ, ಯೂನಾನಿ ಚಿಕಿತ್ಸಾ ಪದ್ಧತಿ ಅರಬ್ ದೇಶದ ಮೂಲದ್ದಾಗಿದೆ. ಭಾರತದಲ್ಲಿ ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ. ಈ ಪದ್ಧತಿಯಲ್ಲೂ ಸಸ್ಯ ಮೂಲ ಮತ್ತು ಲವಣಗಳಿಂದ ತಯಾರಾದ ಔಷಧಗಳನ್ನು ನೀಡಲಾಗುತ್ತದೆ. ಈ ಪದ್ಧತಿಯಲ್ಲೂ ವಾತ, ಪಿತ್ತ, ಕಫಾ ಮತ್ತು ಸೌಧ ಸಮಸ್ಯೆಗಳಿಂದ ಕಾಯಿಲೆಗಳು ಕಾಡುತ್ತವೆ. ಆಹಾರ ನಿಯಂತ್ರಣ, ಔಷಧ, ಪಂಚಕರ್ಮ ಚಿಕಿತ್ಸೆಗಳ ಮೂಲಕ ರೋಗವನ್ನು ಗುಣಪಡಿಸಲಾಗುವುದು. ರಾಮನಗರದ ಜಿಲ್ಲಾಸ್ಪತ್ರೆ, ಚನ್ನಪಟ್ಟಣದ ಆಸ್ಪತ್ರೆ, ಕನಕಪುರದಲ್ಲಿ ಯೂನಾನಿ ಚಿಕಿತ್ಸಾಲಯಗಳಿವೆ ಎಂದರು.
ಹೋಮಿಯೋಪತಿ ಪರಿಣಾಮಕಾರಿ: ಜರ್ಮನ್ ಮೂಲದ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ವಿಶಿಷ್ಠ ಪದ್ಧತಿಯಾಗಿದೆ. ಸಮಾನ್ಯ ಲಕ್ಷಣಗಳು ಕಾಣಿಸಿಕೊಂಡರೂ ಪ್ರತಿಯೊಬ್ಬರಿಗೂ ಒಂದೇ ತರಹದ ಚಿಕಿತ್ಸೆ ಈ ಪದ್ಧತಿಯಲ್ಲಿ ಇಲ್ಲ. ಪ್ರತಿಯೊಬ್ಬ ರೋಗಿಯನ್ನು ವಿಶೇಷವಾಗಿಯೇ ಪರಿಗಣಿಸಿ, ಔಷಧವನ್ನು ನಿರ್ಧರಿಸಲಾಗುತ್ತದೆ. ಮಾಗಡಿ ತಾಲೂಕಿನ ಸೋಲೂರಿನಲ್ಲಿ ಸದ್ಯ ಹೋಮಿಯೋಪತಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಯೋಗಾಭ್ಯಾಸದಿಂದ ರೋಗ ದೂರ: ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯ ಡಾ.ಹರ್ಷಿತ ಮಾತನಾಡಿ, ಪಂಚಭೂತಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹೈಡ್ರೋ ತೆರಫಿ(ಜಲ ಚಿಕಿತ್ಸೆ), ಮಡ್ ತೆರಫಿ (ಮಣ್ಣಿನ ಸ್ನಾನ), ಮಸಾಜ್ ಮತ್ತಿತರ ಚಿಕಿತ್ಸಾ ವಿಧಾನಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿರಂತರ ಯೋಗಾಭ್ಯಾಸದಿಂದ ರೋಗಗಳು ಮಾನವ ದೇಹವನ್ನು ಕಾಡುವುದಿಲ್ಲ. ಜೂನ್ 21ರಂದು ವಿಶ್ವ ಯೋಗ ದಿನವನ್ನು ಹಮ್ಮಿಕೊಳ್ಳಲಾಗಿದೆ. ಇದೇ ದಿನ ವಿಶ್ವದ 197 ರಾಷ್ಟ್ರಗಳಲ್ಲಿ ವಿಶ್ವ ಯೋಗ ದಿನ ಆಚರಣೆಯಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಆಯುಷ್ ಇಲಾಖೆಯೊಂದಿಗೆ ಪತಂಜಲಿ ಯೋಗ ಕೇಂದ್ರ ಮತ್ತು ಪ್ರಜಾಪಿತ ಬ್ರಹ್ಮಕುಮಾರಿಯ ಈಶ್ವರಿ ವಿಶ್ವ ವಿದ್ಯಾಲಯದ ಸದಸ್ಯರು ಸಹ ಭಾಗಿಯಾಗಲಿದ್ದಾರೆ ಎಂದರು.
ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಸ್. ಶಂಕರಪ್ಪ ಹಾಜರಿದ್ದರು.