Advertisement

ಸರ್ವ ರೋಗಕ್ಕೂಆಯುರ್ವೇದ ಮದ್ದು

11:36 AM Nov 11, 2018 | Team Udayavani |

ಕಲಬುರಗಿ: ದೇಶದಲ್ಲಿ ಆಯುರ್ವೇದ ಚಿಕಿತ್ಸೆಗೆ ವಿಶಿಷ್ಟ ಸ್ಥಾನಮಾನ ಇದೆ. ಆಯುರ್ವೇದ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದೇ ಎಲ್ಲ ರೋಗಕ್ಕೂ ಚಿಕಿತ್ಸೆ ಲಭ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ್‌ ಮಲಾಜಿ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆಯುಷ್‌ ಕಚೇರಿಗಳ ಸಹಯೋಗದೊಂದಿಗೆ ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಏರ್ಪಡಿಸಲಾಗಿದ್ದ ಮೂರನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದ ಚಿಕಿತ್ಸೆಯಿಂದ ರೋಗಗಳಿಗೆ ಶಾಶ್ವತ ಫಲಿತಾಂಶ ದೊರೆಯುವುದು ಹಾಗೂ ಚಿಕಿತ್ಸೆಯು ದುಬಾರಿ ಇರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್‌ ಶಾಖೆಗಳನ್ನು ತೆರೆದಿದ್ದು, ಅಲ್ಲಿ ಉಚಿತ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. 

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ನಾಗರತ್ನ ಚಿಮ್ಮಲಗಿ ಮಾತನಾಡಿ, ಇಂದಿನ ಒತ್ತಡದ ದಿನಮಾನಗಳಲ್ಲಿ ಆಯುರ್ವೇದ ಹಾಗೂ ಯೋಗ ಬಹುಮುಖ್ಯವಾಗಿದೆ ಎಂದರು.

ಆಯುಷ್‌ ವೈದ್ಯ ಸುಧೀರ ಕುಳಗೇರಿ ಸಾರ್ವಜನಿಕ ಆರೋಗ್ಯದಲ್ಲಿ ಆಯುರ್ವೇದದ ಪಾತ್ರದ ಕುರಿತು ಮಾತನಾಡಿದರು. ರಾಷ್ಟ್ರೀಯ ಆಯುರ್ವೇದ
ದಿನಾಚರಣೆ ಅಂಗವಾಗಿ ಚೇತನ ಪ್ರೌಢಶಾಲೆ, ಕಮಲಾಪುರ ಸರ್ಕಾರಿ ಕನ್ಯಾಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಆಯುರ್ವೇದ ಸಸ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
 
ಪಾಲಿಕೆ ಮಹಾಪೌರ ಮಲ್ಲಮ್ಮ ಎಸ್‌. ವಳಕೇರಿ, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಐಎಎಸ್‌ ಪ್ರೊಬೇಷನರಿ ಅಧಿಕಾರಿ ಸ್ನೇಹಲ ಸುಧಾಕರ ಲೋಖಂಡೆ, ಡಾ| ಮಲ್ಲಾರಾವ್‌ ಮಲ್ಲೆ, ಡಾ| ಬಿ.ಆರ್‌. ವೈದ್ಯ, ಡಾ| ಎ.ಎಸ್‌. ಪಾಟೀಲ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next