Advertisement

ಗುಣಮಟ್ಟದ ಚಿಕಿತ್ಸೆಗಾಗಿ ಆಯುರ್‌ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರ ಹಾಗೂ ಪಂಚಕರ್ಮ ಕೇಂದ್ರ

11:31 AM Dec 01, 2020 | sudhir |

ಮಂಗಳೂರು ಗಂಜಿಮಠದಲ್ಲಿರುವ ಆಯುರ್‌ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಪಂಚಕರ್ಮ ಚಿಕಿತ್ಸಾ ಕೇಂದ್ರವು ಉತ್ತಮ ಸೇವೆ, ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿದೆ.

Advertisement

ಮಂಗಳೂರು ಮತ್ತು ಸುತ್ತಮುತ್ತಲಿನ ಹಾಗೂ ಬೇರೆ ಪ್ರದೇಶಗಳ ಜನರು ಇಲ್ಲಿ ಸೇವೆಯನ್ನು ಪಡೆದುಕೊಳ್ಳುತ್ತಿದ್ದು ಒಂದೇ ಸೂರಿನಡಿ ವಿವಿಧ ರೀತಿಯ ಆರೋಗ್ಯ ಸೇವೆಗಳು ದೊರೆಯುತ್ತಿವೆ. ಮಧುಮೇಹ, ಉಬ್ಬಸ(ಅಸ್ತಮಾ), ಕಿಡ್ನಿಯಲ್ಲಿ ಕಲ್ಲು(ಮೂತ್ರಪಿಂಡದ ಕಲ್ಲು), ಸೋರಿಯಾಸಿಸ್‌, ಎಲ್ಲ ಚರ್ಮ ಸಂಬಂಧಿ ಕಾಯಿಲೆಗಳು, ತಲೆಗೂದಲು ಉದುರುವಿಕೆ, ರಕ್ತದೊತ್ತಡ(ಬಿ.ಪಿ), ಮೈಗ್ರೇನ್‌ ತಲೆನೋವು, ಸೈನುಸೈಟಿಸ್‌ ತಲೆನೋವಿಗೆ ಇಲ್ಲಿ ಖಚಿತ ಚಿಕಿತ್ಸೆ ದೊರೆಯುತ್ತದೆ.

2015ರಲ್ಲಿ ಆರಂಭ
ಆಯುರ್‌ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಪಂಚಕರ್ಮ ಕೇಂದ್ರವು  2015ರಲ್ಲಿ ಆರಂಭಗೊಂಡಿತು. ಆರಂಭದಿಂದಲೂ ಉತ್ತಮ ಗುಣಮಟ್ಟದ ಚಿಕಿತ್ಸೆ, ಸೇವೆಗೆ ಆದ್ಯತೆ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಸಂಸ್ಥೆ ಬೆಳೆಯುತ್ತಾ ಬಂದಿದೆ. ಈ ಕೇಂದ್ರವು ತಜ್ಞ ವೈದ್ಯರು, ಅನುಭವಿ, ಉತ್ತಮ ಸೇವಾ ಮನೋಭಾವದ ಸಿಬಂದಿಯನ್ನು ಹೊಂದಿದೆ.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಪಂಚಕರ್ಮ ಕೊಠಡಿ ಮತ್ತು ಚಿಕಿತ್ಸಕರು ಲಭ್ಯರಿದ್ದಾರೆ.

ಆಯುರ್‌ ಸ್ಪರ್ಶ ಚಿಕಿತ್ಸಾ ಕೇಂದ್ರವನ್ನು ಹೀಗೆ ತಲುಪಬಹುದು…
ಆಯುರ್‌ ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರವು ಗಂಜಿಮಠದ ಮಳಲಿ ಕ್ರಾಸ್‌ನಲ್ಲಿರುವ ವ್ಯವಸಾಯ ಬ್ಯಾಂಕ್‌ನ ಹಿಂಬದಿ ಇದೆ. ಇಲ್ಲಿಗೆ ವಿವಿಧೆಡೆಗಳಿಂದ ಬಸ್‌ ಸಂಪರ್ಕವೂ ಇದೆ. ಸಾರ್ವಜನಿಕರು ಈ ಚಿಕಿತ್ಸಾ ಕೇಂದ್ರವನ್ನು ಸುಲಭವಾಗಿ ತಲುಪಬಹುದಾಗಿದೆ.

ಆಯುರ್ವೇದದಿಂದ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ : ಡಾ| ಸತೀಶ್‌ ಶಂಕರ್‌ ಬಿ.
ಯಾವೆಲ್ಲ ರೀತಿಯ  ಚಿಕಿತ್ಸೆಗೆ ಆಯುರ್ವೇದ ಪರಿಣಾಮಕಾರಿಯಾಗಿದೆ?
– ಮುಖ್ಯವಾಗಿ ಮೈಗ್ರೇನ್‌, ಸೈನುಸೈಟಿಸ್‌, ಪಕ್ಷಪಾತ, ಬೆನ್ನುನೋವು, ಮಂಡಿನೋವು, ಸಂಧಿನೋವು, ಕೈ ನೋವು ಮೊದಲಾದವುಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ.

Advertisement

ಮಧುಮೇಹ ಮುಕ್ತ ಭಾರತ ಅಭಿಯಾನದ ಬಗ್ಗೆ
– 2016ರಲ್ಲಿ ಮಧುಮೇಹ ಮುಕ್ತ ಭಾರತ ಅಭಿಯಾನ ಆರಂಭಿಸಿದ್ದೇವೆ. ಈಗ ವಿಶ್ವದಲ್ಲಿ ಮಧುಮೇಹದಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಹೆಚ್ಚಳದಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಮಧುಮೇಹ ತಡೆಯಬಹುದು. 2 ಬಗೆಯ ಮಧುಮೇಹಗಳಿವೆ. ಟೈಪ್‌1 ಮತ್ತು ಟೈಪ್‌ 2. ಟೈಪ್‌ 2 ಶೇ.95ರಷ್ಟು ಇದೆ. ಇದು ಜೀವನಶೈಲಿ, ವಂಶಪಾರಂಪರ್ಯದಿಂದ ಬರಬಹುದು. ಇದನ್ನು ತಡೆಯಬಹುದು. ಆದರೆ ಜನರಿಗೆ ಸೂಕ್ತ ಮಾಹಿತಿ ಇಲ್ಲದೆ ಇರುವುದುರಿಂದ ನಮ್ಮ ದೇಶದಲ್ಲಿ ಮಧುಮೇಹ ಹೆಚ್ಚಾಗಿದೆ. ಇದನ್ನು ಆದಷ್ಟು ಕಡಿಮೆಗೊಳಿಸಲು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಿದ್ದೇವೆ.

ಪಂಚಕರ್ಮದ ಪ್ರಾಮುಖ್ಯತೆ ಏನು?
ಆಯುರ್ವೇದದ ಮೂಲ ಉದ್ದೇಶ ರೋಗ ಬರದಂತೆ ತಡೆಗಟ್ಟುವುದು, ಬಂದ ಮೇಲೆ ಚಿಕಿತ್ಸೆ ನೀಡುವುದು. 5 ವಿಧದ ಪಂಚಕರ್ಮ ಇದೆ.  ಪಂಚಕರ್ಮ ಎಂದರೆ ಮಸಾಜ್‌ ಸೆಂಟರ್‌ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಪಂಚಕರ್ಮ ಎಂದರೆ ಮಸಾಜ್‌ ಸೆಂಟರ್‌ ಅಲ್ಲ. ಇದನ್ನು ಮಾಡುವುದು ದೇಹಶೋಧನೆಗಾಗಿ. ದೇಹಶುದ್ಧಿಯ ಅನಂತರ ಚಿಕಿತ್ಸೆಯ ಪರಿಣಾಮ ಉತ್ತಮವಾಗಿರುತ್ತದೆ. ಮಸಾಜ್‌ ಪಂಚಕರ್ಮದಲ್ಲಿ ಪೂರ್ವಭಾವಿಯಾಗಿ ಮಾಡಲಾಗುತ್ತದೆ. ಇದು ಒಂದು ಪೂರಕ ಚಿಕಿತ್ಸೆ ಅಷ್ಟೆ. ದೋಷಗಳು ಉಲ್ಬಣಗೊಂಡಾಗ ಶೋಧನ ಚಿಕಿತ್ಸೆ ಅಗತ್ಯ. ಅಂತಹ ದೋಷಗಳಾದ ವಾತ, ಪಿತ್ತ, ಕಫ‌ ಹೊರ ಹಾಕುವ ಕ್ರಿಯೆ ಶೋಧನ ಚಿಕಿತ್ಸೆ.

ಕೊರೊನಾ ನಿಯಂತ್ರಣದಲ್ಲಿ ಆಯುರ್ವೇದದ ಪಾತ್ರವೆಷ್ಟು?
ಆಯುರ್ವೇದದಲ್ಲಿ ನಿರ್ದಿಷ್ಟವಾಗಿ ಕೊರೊನಾ ಚಿಕತ್ಸೆಯ ಬಗ್ಗೆ ಉಲ್ಲೇಖ ಇಲ್ಲದೇ ಇರಬಹುದು. ಆದರೆ ದಿನಚರಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಎಂಬ ಉಲ್ಲೇಖ ಆಯುರ್ವೇದದಲ್ಲಿದೆ. ಕೊರೊನಾ ವೈರಸ್‌ಗೆ ಆಯುರ್ವೇದದಲ್ಲಿ ಹೆಸರು ಕೊಡದೆ ಇದ್ದರೂ ಒಬ್ಬರಿಂದ ಒಬ್ಬರಿಗೆ ಹರಡುವ ರೋಗಗಳ(ಜನಪದ ಧ್ವಂಸ ವಿಕಾರಗಳು) ಬಗ್ಗೆ ಉಲ್ಲೇಖವಿದೆ. ಅಂತಹ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ಇದೆ.

ಆಯುರ್ವೇದ ಮತ್ತು ಆಲೋಪತಿ ಹೇಗೆ ಭಿನ್ನ?
ಇವೆರಡು ಪ್ರತಿಸ್ಪರ್ಧಿಗಳಲ್ಲ. ಎರಡು ಕೂಡ ಶ್ರೇಷ್ಠವೇ. ಅಪಘಾತ, ತೀವ್ರ ಎದೆನೋವು ಮೊದಲಾದ ಸಂದರ್ಭ ಅಲೋಪತಿ ಬೇಕಾಗುತ್ತದೆ. ಆದರೆ ಅದಕ್ಕಿಂತಲೂ ಕ್ರಾನಿಕ್‌ ಡಿಸೀಸ್‌ಗಳಾದ ತಲೆನೋವು, ಸೈನೊಸೈಟಿಸ್‌, ಬೆನ್ನುನೋವು, ಮಂಡಿನೋವು, ಚರ್ಮ ಕಾಯಿಲೆ ಗಳಿಗೆ ಆಯುರ್ವೇದದಲ್ಲಿ ಯಶಸ್ವಿ ಚಿಕಿತ್ಸೆ ಇದೆ. ಮೈಗ್ರೇನ್‌ನ್ನು ಸಂಪೂರ್ಣವಾಗಿ ಗುಣಪಡಿಸಿದ್ದೇವೆ. ಇದನ್ನು ವೈಜ್ಞಾನಿಕವಾಗಿ ಪ್ರಾಮಾಣಿಕರಿಸಬೇಕಾಗಿದೆ. ಇದಕ್ಕೆ ಸರಕಾರದ ಸಹಾಯ ಬೇಕಾಗಿದೆ.

ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಜನರಿಗೆ ತಲುಪಿಸುವುದು ಹೇಗೆ?
ಆಯುರ್ವೇದದ ಪ್ರಯೋಜನವನ್ನು ವಿಶ್ವದಾದ್ಯಂತ ತಲುಪಿಸುವ ಕೆಲಸ ಭಾರತೀಯರಿಂದ ಆಗಬೇಕು. ಆಯುರ್ವೇದ ಚಿಕಿತ್ಸೆಯಿಂದ ಬಂದ ಫ‌ಲಿತಾಂಶದ ದಾಖಲೀಕರಣ ಮಾಡಬೇಕು.  ಸಂಶೋಧನೆಗೆ ಆದ್ಯತೆ ನೀಡಬೇಕು. ಸರಕಾರಗಳು ಯೋಜನೆ ಹಾಕಿಕೊಂಡು ಸಂಶೋಧನಾ ಸಂಸ್ಥೆಗಳ ನೆರವು ಪಡೆದು ಮಾಡಬೇಕು. ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬಹುದು. ಪಠ್ಯಪುಸ್ತಕಗಳಲ್ಲಿ ಆಯುರ್ವೇದದ ಬಗ್ಗೆ ಉಲ್ಲೇಖವಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಸಂದರ್ಭದಲ್ಲಿಯೇ ಆಯುರ್ವೇದದ ಬಗ್ಗೆ ತಿಳಿಸಿಕೊಡಬೇಕು.

ನಿಮ್ಮಿಂದ ಚಿಕಿತ್ಸೆ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು?
ಗಂಜಿಮಠ ಆಯುರ್‌ಸ್ಪರ್ಶ್‌ ಚಿಕಿತ್ಸಾ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಬಹುದು. ಆನ್‌ಲೈನ್‌ ಮೂಲಕವೂ ಸಲಹೆ ಪಡೆಯಬಹುದು. ಮಧುಮೇಹ ಇರುವವರರು ಶುಗರ್‌ ಲೆವೆಲ್‌ ಹೇಳಿದರೆ ಆನ್‌ಲೈನ್‌ ಮೂಲಕ ಕನ್‌ಸಲ್ಟ್ ಮಾಡಿದರೆ ಕೊರಿಯರ್‌, ಪೋಸ್ಟ್‌ ಮೂಲಕ ಔಷಧಿ ತಲುಪಿಸಬಹುದು. ಸಂಧಿವಾತದಂತದ ಸಂದರ್ಭದಲ್ಲಿಯೂ ಕೊರಿಯರ್‌ ಮೂಲಕ ಔಷಧ ತಲುಪಿಸಬಹುದು. ಬೇರೆ ಬೇರೆ ದೇಶಗಳು, ಬೇರೆ ರಾಜ್ಯಗಳಲ್ಲಿರುವ ಟೈಪ್‌ 2 ಮಧುಮೇಹಿಗಳಿಗೆ ಔಷಧಿ ಕಳುಹಿಸಿಕೊಡುತ್ತಿದ್ದೇವೆ.

– ಡಾ| ಸತೀಶ್‌ ಶಂಕರ್‌ ಬಿ.
ಮುಖ್ಯಸ್ಥರು, ಆಯುರ್‌ ಸ್ಪರ್ಶ್‌ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಪಂಚಕರ್ಮ ಚಿಕಿತ್ಸಾ ಕೇಂದ್ರ, ಗಂಜಿಮಠ

***

ಪಂಚಕರ್ಮ ಚಿಕಿತ್ಸೆ

ಇಲ್ಲಿ ಬೆನ್ನುನೋವು, ಸಂಧಿವಾತ, ಪಕ್ಷಪಾತ, ಸೊಂಟನೋವು, ಮೈಗ್ರೇನ್‌ ತಲೆನೋವು, ಸೈನುಸೈಟಿಸ್‌ ತಲೆನೋವು, ಸ್ತ್ರೀಯರ ಮುಟ್ಟಿನ ತೊಂದರೆಗಳು, ತಲೆಗೂದಲು ಉದುರುವಿಕೆ, ಕಣ್ಣಿನ ತೊಂದರೆಗಳು, ಕಾಲು ಗಂಟುನೋವು, ಸೋರಿಯಾಸಿಸ್‌, ಕುತ್ತಿಗೆ ನೋವು, ಸ್ತ್ರೀಯರ ಮುಟ್ಟಿನ ತೊಂದರೆ, ಮೊಡವೆ, ಅಸ್ತಮಾ, ಎಲ್ಲ ಚರ್ಮಸಂಬಂದಿ ಕಾಯಿಲೆಗಳಿಗೆ ಪಂಚಕರ್ಮ ಚಿಕಿತ್ಸೆ ಲಭ್ಯವಿದೆ. ಈ ಚಿಕಿತ್ಸೆಯನ್ನು ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 6ರಿಂದ ಸಾಯಂಕಾಲ 7ರವರೆಗೆ ಪಡೆಯಬಹುದಾಗಿದೆ. ಆರೋಗ್ಯವಂತರಿಗೂ ಇಲ್ಲಿ ರಿಲ್ಯಾಕ್ಸೇಶನ್‌ ಮಸಾಜ್‌ ಕೂಡ ಮಾಡಲಾಗುತ್ತದೆ. ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆಗೆ ಶಿರೋಧಾರ ಚಿಕಿತ್ಸೆ ಕೂಡ ಇಲ್ಲಿದೆ.

ಮಧುಮೇಹ ಚಿಕಿತ್ಸೆಗೂ ಹೆಸರುವಾಸಿ
ಮಧುಮೇಹ ನಿಯಂತ್ರಣಕ್ಕಾಗಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಸ್ಥೆ ಮಧುಮೇಹ ನಿಯಂತ್ರಣಕ್ಕೆ ಚಿಕಿತ್ಸೆ ನೀಡುವುದರಲ್ಲಿಯೂ ಮುಂಚೂಣಿಯಲ್ಲಿದೆ. ಮಧುಮೇಹದ ಚಿಕಿತ್ಸೆ ಪಡೆಯಲು ರಾಜ್ಯದ ನಾನಾ ಭಾಗದ ಜನತೆ ಈ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ.  ಮಧುಮೇಹಿಗಳಿಗೆ ಕಾಡುವ ನ್ಯೂರೊಪಥಿಗೂ ಇಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯವಿದೆ.

ಮೂಲವ್ಯಾಧಿಗೆ ಚಿಕಿತ್ಸೆ
ಇಂದಿನ ಜೀವನಶೈಲಿಯಿಂದಾಗಿ ಮೂಲವ್ಯಾಧಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಸೂಕ್ತ ಆಯುರ್ವೇದ ಚಿಕಿತ್ಸೆಯಿಂದ ಇದನ್ನು ಪರಿಹರಿಸಿಕೊಳ್ಳಬಹುದು. ಮೂಲವ್ಯಾಧಿ ಚಿಕಿತ್ಸೆ ಆಯುರ್‌ಸ್ಪರ್ಶದಲ್ಲಿ ಲಭ್ಯವಿದೆ.

ಮೈಗ್ರೇನ್‌ಗೆ ಚಿಕಿತ್ಸೆ
ಮೈಗ್ರೇನ್‌ ತಲೆನೋವು ಚಿಕಿತ್ಸೆಗೆ ಆಯುರ್‌ ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರ ಹೆಸರುವಾಸಿಯಾಗಿದೆ. ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವ ಮುಟ್ಟಿನ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ.

ಅಸ್ತಮಾ ಚಿಕಿತ್ಸೆ
ಅಲರ್ಜಿಯಿಂದ ಬರುವ ಅಸ್ತಮಾಗೆ ಇಲ್ಲಿಯ ವಿಶೇಷ ಚಿಕಿತ್ಸಾ ಕ್ರಮದಿಂದ ಅನೇಕರು ಪ್ರಯೋಜನ ಪಡೆದು ಗುಣಮುಖರಾಗಿದ್ದಾರೆ.

ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಲು ಆದ್ಯತೆ ಕೊಡಿ : ಸೌಜನ್ಯ ಸತೀಶ್‌

ಕೊರೊನಾ ಸಂದರ್ಭ ಆನ್‌ಲೈನ್‌ ತರಗತಿಗಳು ನಡೆಯುತ್ತವೆ. ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಬಳಕೆ ಹೆಚ್ಚಾಗಿದೆ. ಇದರಿಂದ ಮಕ್ಕಳ ಮೇಲಿನ ಪರಿಣಾಮವೇನು?
– ಮೊಬೈಲ್‌ ಬಳಕೆ ಜಾಸ್ತಿಯಾದರೆ ಕಣ್ಣಿನ ಸಮಸ್ಯೆ, ನಿದ್ರಾಹೀನತೆ, ನೆನಪಿನ ಶಕ್ತಿ ಕಡಿಮೆಯಾಗುವುದು ಮೊದಲಾದ ಸಮಸ್ಯೆ ಉಂಟಾಗುತ್ತದೆ. ಮೆದುಳಿನ ಮೇಲೆ ಭಾರೀ ದುಷ್ಪರಿಣಾಮವಿದೆ. ಮೊಬೈಲ್‌ಗೆ ಎಡಿಕ್ಟ್ ಆದರೆ ದೀರ್ಘ‌ಕಾಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಆನ್‌ಲೈನ್‌ ಶಿಕ್ಷಣ ದಿನಕ್ಕೆ ಗರಿಷ್ಟ ಎಷ್ಟು ಸಮಯ ಇರಬಹುದು? 
– ಮಕ್ಕಳ ಕೈಗೆ ಮೊಬೈಲ್‌, ಕಂಪ್ಯೂಟರ್‌ ಎಷ್ಟು ಕಡಿಮೆ ನೀಡುತ್ತೇವೆಯೋ ಅಷ್ಟು ಒಳ್ಳೆಯದು. ಆನ್‌ಲೈನ್‌ ಶಿಕ್ಷಣದಿಂದಾಗಿ ಈಗ ಇದು ಅನಿವಾರ್ಯವಾಗಿದೆ. ಆದರೆ ಮೊಬೈಲ್‌ ಬಳಕೆ ದಿನಕ್ಕೆ ಗರಿಷ್ಠ 2ರಿಂದ 3 ಗಂಟೆ ಸಾಕು. ನಿದ್ದೆಗಿಂತ ಜಾಸ್ತಿ ಮೊಬೈಲ್‌ ಬಳಕೆಯಾಗುವ ಅಪಾಯ ಎದುರಾಗಿದೆ.

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿಸುವುದು ಹೇಗೆ? ಹೆತ್ತವರ ಪಾತ್ರವೇನು?
– ಮಕ್ಕಳು ಮೊಬೈಲ್‌ ದಾಸರಾಗುವುದರಲ್ಲಿ ಹೆತ್ತವರೇ ತಪ್ಪಿತಸ್ಥರು. ಹೆತ್ತವರು ಮೊಬೈಲ್‌ ಕೊಟ್ಟು ಕೂರಿಸುವುದು ಸರಿಯಲ್ಲ. ಈಗ ಹೆಚ್ಚಿನ ಹೆತ್ತವರಿಗೆ ಸಮಯದ ಕೊರತೆ ಇದೆ. ಅದಕ್ಕಾಗಿ ಮಕ್ಕಳು ಮೊಬೈಲ್‌ ಅಡಿಕ್ಟ್ ಆಗುವಂತೆ ಮಾಡುತ್ತಾರೆ. ಹೆತ್ತವರು ಕೂಡ ಮೊಬೈಲ್‌ ಅಡಿಕ್ಟ್ ಆಗಿದ್ದಾರೆ. ಮಕ್ಕಳು ಅದನ್ನೇ ಅನುಕರಿಸುತ್ತಾರೆ. ಇದು ಹೆತ್ತವರ ತಪ್ಪು. ಮನೆಯೊಳಗೆ ಆಟವಾಡಬಹುದು. ಸಾಧ್ಯವಾದಷ್ಟು ಮಕ್ಕಳೊಂದಿಗೆ ಸಮಯ ಕಳೆಯಬೇಕು. ಸಾಧ್ಯವಾದರೆ ಮಾನಸಿಕ ರೋಗ ತಜ್ಞರ ಸಲಹೆ ಪಡೆಯುವುದು ಉತ್ತಮ. ಅವರ ಶೈಕ್ಷಣಿಕ ಬೆಳವಣಿಗೆ ಸೇರಿದಂತೆ ಸಮಗ್ರ ಬೆಳವಣಿಗೆಗೆ ಒತ್ತಡ ಮುಕ್ತ ಬದುಕು ಅಗತ್ಯ.

ನಿಮ್ಮಿಂದ ಚಿಕಿತ್ಸೆ, ಸಲಹೆ ಪಡೆಯುವುದು ಹೇಗೆ?
– ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿದರೆ ಉತ್ತಮ. ಅಗತ್ಯವಾದರೆ ಪೋನ್‌ ಕರೆ, ಆನ್‌ಲೈನ್‌ ಮೂಲಕವೂ ಸಂಪರ್ಕಿಸಬಹುದು. ನೇರವಾಗಿ ಬರುವುದಾದರೆ ಸೋಮವಾರದಿಂದ ರವಿವಾರದ ವರೆಗೆ ಅಪರಾಹ್ನ 2ರಿಂದ 5 ಗಂಟೆಯವರೆಗೆ ಲಭ್ಯರಿರುತ್ತೇನೆ.

 – ಸೌಜನ್ಯ ಸತೀಶ್‌
ಮನಶಾಸ್ತ್ರಜ್ಞೆ

***
ಮಕ್ಕಳಿಗೆ ಸ್ವರ್ಣಪ್ರಾಶನ
ಆಯುರ್‌ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಪಂಚಕರ್ಮ ಚಿಕಿತ್ಸಾ ಘಟಕ ಹಾಗೂ ಭಾಮಾ ಕ್ಲಿನಿಕ್‌ ಗಂಜಿಮಠದ ಅಂಗಸಂಸ್ಥೆಯಲ್ಲಿ ಹುಟ್ಟಿದ ಮಗುವಿನಿಂದ ಹಿಡಿದು 16 ವರ್ಷದವರೆಗಿನ ಮಕ್ಕಳಿಗೆ ಪ್ರತೀ ತಿಂಗಳು ಪುಷ್ಯ ನಕ್ಷತ್ರದಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸ್ವರ್ಣಬಿಂದು ಪ್ರಾಶನ ನಡೆಯುತ್ತದೆ. ಸ್ವರ್ಣಬಿಂದು ಪ್ರಾಶನಕ್ಕೆ ಮಗುವಿನ ಜತೆ ಬರುವ ಪೋಷಕರಿಗೆ ಉಚಿತ ತಪಾಸಣೆ(ಔಷಧ ಹೊರತುಪಡಿಸಿ), ಮಕ್ಕಳ ಆರೋಗ್ಯ ಸಂರಕ್ಷಣೆ ಬಗ್ಗೆ ಮಾಹಿತಿ, ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಅಡ್ಡ ಪರಿಣಾಮವಿಲ್ಲದ ಆಯುರ್ವೇದ ಔಷಧ, ಶಿಶುವಿನ ಸ್ನಾನಕ್ಕೆ ಉಪಯೋಗಿಸುವ ಆಯುರ್ವೇದದ ತೈಲ ಲಭ್ಯವಿರುತ್ತದೆ. ಬೊಜ್ಜು ಕರಗಿಸಲು ಔಷಧಿ ಮಾತ್ರವಲ್ಲದೆ ಡಯಟ್‌ ಪ್ಲ್ರಾನ್‌, ಪಂಚಕರ್ಮ ಚಿಕಿತ್ಸೆ ನೀಡುತ್ತೇವೆ.

ಸಂಪರ್ಕ ವಿಳಾಸ:
ಆಯುರ್‌ ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರ, ಪಂಚಕರ್ಮ ಚಿಕಿತ್ಸಾ ಘಟಕ ಮಳಲಿ ಕ್ರಾಸ್‌, ವ್ಯವಸಾಯ ಸಹಕಾರಿ ಬ್ಯಾಂಕ್‌ನ ಹಿಂದುಗಡೆ, ಗಂಜಿಮಠ, ಮಂಗಳೂರು
ಮೊಬೈಲ್‌ : 9482167168

Advertisement

Udayavani is now on Telegram. Click here to join our channel and stay updated with the latest news.

Next