Advertisement

ಅಯೋಗ್ಯನ ಮುಖದಲ್ಲಿ ನಗು

02:32 PM Jul 18, 2018 | Sharanya Alva |

ಸತೀಶ್‌ ನೀನಾಸಂ  ನಾಯಕರಾಗಿ ನಟಿಸಿರುವ “ಅಯೋಗ್ಯ’ ಚಿತ್ರದ ಸದ್ದು ಆರಂಭವಾಗಿದೆ. ಈಗಾಗಲೇ ಚಿತ್ರತಂಡ “ಏನಮ್ಮಿ ಏನಮ್ಮಿ’ ಎಂಬ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಅದರ ಪರಿಣಾಮವಾಗಿ ಈಗ ಚಿತ್ರದ ಹಾಡು ಒಂದು ಮಿಲಿಯನ್‌ ಹಿಟ್ಸ್‌ ಆಗಿದೆ. ಈ ಮೂಲಕ ಚಿತ್ರತಂಡ ಖುಷಿಯಾಗಿದೆ. 

Advertisement

ವಾರದ ಹಿಂದೆ ಬಿಡುಗಡೆಯಾದ ಹಾಡು, ಯೂಟ್ಯೂಬ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿರುವುದರಿಂದ ಚಿತ್ರತಂಡಕ್ಕೆ ಸಿನಿಮಾ ಮೇಲಿನ ವಿಶ್ವಾಸ ಹೆಚ್ಚಿದೆ. ಜೊತೆಗೆ ಈ ಹಾಡಿನ ಕುರಿತಾದ ಡಬ್‌ಸ್ಮಾಶ್‌ಗಳು ಕೂಡಾ ಓಡಾಡುತ್ತಿವೆ. ಇವೆಲ್ಲದರಿಂದ ನಾಯಕ ಸತೀಶ್‌ ಖುಷಿಯಾಗಿದ್ದು, ದೊಡ್ಡ ಮಟ್ಟದ ಬ್ರೇಕ್‌ ಸಿಗುವ ವಿಶ್ವಾಸದಲ್ಲಿದ್ದಾರೆ. “ಏನಮ್ಮಿ ಏನಮ್ಮಿ’ ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದು, ವಿಜಯ್‌ ಪ್ರಕಾಶ್‌ ಹಾಡಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. 

ಇದು ಒಂದು ವಿಚಾರವಾದರೆ ತಮಿಳಿನ ಖ್ಯಾತ ಗಾಯಕ ಅಂಥೋನಿ ದಾಸ್‌ “ಅಯೋಗ್ಯ’ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. “ಟಗರು’ ಸಿನಿಮಾದ “ಟಗರು ಬಂತು ಟಗರು’ ಹಾಡನ್ನು ನೆನೆಸಿಕೊಂಡರೆ ನಿಮಗೆ ಅಂಥೋನಿ ದಾಸ್‌ ಅವರ ಧ್ವನಿ ಕಿವಿಯಲ್ಲಿ ಗುಂಯ್‌ಗಾಡುತ್ತದೆ. 

ಈಗ ಅಂಥೋನಿ ಮತ್ತೂಂದು ಕನ್ನಡ ಸಿನಿಮಾದಲ್ಲಿ ಹಾಡಿದ್ದಾರೆ. ಅದು “ಅಯೋಗ್ಯ’. ಹೌದು, “ಅಯೋಗ್ಯ’  ಚಿತ್ರದ ಹಾಡೊಂದನ್ನು ಅಂಥೋನಿ ದಾಸ್‌ ಹಾಡಿದ್ದಾರೆ. ಆ ಹಾಡಿಗೆ ಬೇರೆ ತರಹದ ಧ್ವನಿ ಬೇಕಾದ ಕಾರಣ ಚಿತ್ರತಂಡ, ಅಂಥೋನಿ ದಾಸ್‌ ಅವರಿಂದ ಹಾಡಿಸಿದೆ. ಮಹೇಶ್‌ ಕುಮಾರ್‌ ನಿರ್ದೇಶನದ ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಚಂದ್ರಶೇಖರ್‌ ನಿರ್ಮಿಸಿದ್ದಾರೆ. 

ಈ ಹಿಂದೆ “ಚಮಕ್‌’ ಚಿತ್ರ ಮಾಡಿರುವ ಚಂದ್ರಶೇಖರ್‌ ಈಗ “ಅಯೋಗ್ಯ’ನ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next