Advertisement

ಅಯೋಧ್ಯೆ ತೀರ್ಪನ್ನು ಮರುಪರಿಶೀಲಿಸಲು ಮುಸ್ಲಿಂ ಮಂಡಳಿ ಸುಪ್ರೀಂಗೆ ಮನವಿ

09:56 AM Nov 18, 2019 | Team Udayavani |

ನವದೆಹಲಿ :ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ತನ್ನ ಐತಿಹಾಸಿಕ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ಗೆ ಕೋರಲಾಗುವುದು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ, ಒಂದು ತಿಂಗಳೊಳಗೆ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಪ್ರಕಟಿಸಿದೆ.

Advertisement

ಅಯೋಧ್ಯೆಯಲ್ಲಿ ವಿವಾದಿತ 2.77 ಎಕರೆಗಳನ್ನು ದೇವಾಲಯಕ್ಕೆ ಹಸ್ತಾಂತರಿಸುವ ಸುಪ್ರೀಂಕೋರ್ಟ್ ತೀರ್ಪು ಮತ್ತು ಪ್ರಮುಖ ಸ್ಥಳದಲ್ಲಿ ಮಸೀದಿಗೆ 5 ಎಕರೆ ಭೂಮಿಯನ್ನು ನೀಡುವ ಆದೇಶವನ್ನು ಉಲ್ಲೇಖಿಸಿ ‘ಮಸೀದಿಗೆ ಬದಲಾಗಿ ನಾವು ಯಾವುದೇ ಭೂಮಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಕಾನೂನು ಮಂಡಳಿ ಹೇಳಿದೆ,

ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಹೋಗುವುದಿಲ್ಲ ಎಂದು ಹೇಳಿರುವ ಸುನ್ನಿ ವಕ್ಫ್ ಮಂಡಳಿಗೆ ಈ ಭೂಮಿಯನ್ನು ನೀಡಲಾಗಿದೆ. ಅಂತಹ ಕ್ರಮವು ಉದ್ವಿಗ್ನತೆಗೆ ಕಾರಣವಾಗುವುದರಿಂದ ಮುಗಿದ ಅಧ್ಯಾಯವನ್ನು ತೆರೆಯಲು ಬಯಸುವುದಿಲ್ಲ ಎಂದು ವಕ್ಫ್ ಮಂಡಳಿ ಹೇಳಿದೆ.

ಪ್ರಮುಖ ಅರ್ಜಿದಾರರಾದ ಜಮಿಯತ್ ಉಲೆಮಾ-ಐ ಹಿಂದ್ ಪರಿಶೀಲನಾ ಅರ್ಜಿಯ ಪರವಾಗಿದೆ ಎಂದು ಹೇಳಿದೆ. ಈಗಾಗಲೇ ಮೂರು ದಾವೆದಾರರನ್ನು ಗುರುತಿಸಲಾಗಿದ್ದು, ಅವರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next