Advertisement

ಅಯೋಧ್ಯೆ ತೀರ್ಪು: ಜಿಲ್ಲೆಯಲ್ಲಿ ಬಿಗಿ ಭದ್ರತೆ

02:42 PM Nov 10, 2019 | |

ಯಾದಗಿರಿ: ವಿವಾದಿತ ರಾಮ ಜನ್ಮಭೂಮಿ ಕುರಿತು ಶನಿವಾರ ಸರ್ವೋಚ್ಛ ನ್ಯಾಯಾಲಯ ತೀರ್ಪು ಪ್ರಕಟಿಸುವ ಹಿನ್ನೆಲೆ ಸಮಾಜದಲ್ಲಿ ಶಾಂತಿ ಕದಡಿ ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ವಹಿಸಿದ್ದು ಜಿಲ್ಲೆಯ ಜನರು ತೀರ್ಪನ್ನು ಸಮರಸ್ಯದಿಂದ ಸ್ವೀಕರಿಸಿದ್ದಾರೆ.

Advertisement

ಜಿಲ್ಲೆಯ ಶಹಾಪುರ ನಗರದಲ್ಲಿ ಹಿಂದೂ- ಮುಸ್ಲಿಂ ಸಮುದಾಯದವರು ತೀರ್ಪು ಸ್ವಾಗತಿಸಿ ಸಾಮರಸ್ಯದಿಂದ ನಾವೆಲ್ಲ ಒಂದೇ ಎನ್ನುವ ಸಂದೇಶ ಸಾರಿದ್ದಾರೆ. ಇನ್ನೂ ಸೂಕ್ಷ್ಮ ಪ್ರದೇಶವಾಗಿರುವ ಕೆಂಭಾವಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ದಾರೆ.

ಪಥ ಸಂಚಲನ: ಶುಕ್ರವಾರ ರಾತ್ರಿಯೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದ ಜಿಲ್ಲಾಡಳಿತ ಬೆಳಗ್ಗೆ ನಗರದ ಮುಖ್ಯಬೀದಿಗಳಲ್ಲಿ ಪೊಲೀಸ್‌ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್‌ ಭಾಗವಹಿಸಿ ಪರಿಸ್ಥಿತಿ ಕುರಿತು ಮನಗಂಡದ್ದು ಕಂಡು ಬಂತು.

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. 2 ಕೆಎಸ್‌ಆರ್‌ಪಿ, 6 ಡಿಎಆರ್‌ ತುಕಡಿ, 2 ಡಿವೈಎಸ್ಪಿ, 9 ಪಿಐ ಸೇರಿ 20 ಪಿಎಸ್‌ಐ, 44 ಎಎಸ್‌ಐ ಹಾಗೂ 500 ಪೇದೆಗಳ ನಿಯೋಜಿಸಿ ಸೂಕ್ಷ್ಮ ಪ್ರದೇಶಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಜನರು ಶಾಂತಿ ಕಾಪಾಡಿದ್ದಾರೆ.

144 ಸೆಕ್ಷನ್‌ ಜಾರಿ: ಜಿಲ್ಲಾದ್ಯಂತ ನ.8ರ ಮಧ್ಯರಾತ್ರಿಯಿಂದ ನ.11ರ ಬೆಳಗ್ಗೆ 6 ಗಂಟೆಯ ವರೆಗೆ 144 ಸೆಕ್ಷನ್‌ ಜಾರಿಗೊಳಿಸಿ ಜಿಲ್ಲಾ ಧಿಕಾರಿ ಕೂರ್ಮಾರಾವ್‌ ನಿಷೇಧಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ. 5ಕ್ಕಿಂತ ಹೆಚ್ಚು ಜನರು ಸೇರುವುದು, ಸಭೆ-ಸಮಾರಂಭ ನಡೆಸುವುದು ನಿಷೇಧಿಸಲಾಗಿದ್ದು, ಈದ್‌ ಮಿಲಾದ್‌ ಹಿನ್ನೆಲೆ ಹಬ್ಬಕ್ಕೆ ಆದೇಶ ಅನ್ವಯವಾಗುವುದಿಲ್ಲ.

Advertisement

ಮದ್ಯ ಮಾರಾಟ ನಿಷೇಧ: ನ.9ರಂದು ಆಯೋಧ್ಯೆ ತೀರ್ಪು ಪ್ರಕಟವಾದ ಹಿನ್ನೆಲೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ 9ರಿಂದ ನ.11ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿ ಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಜಿಲ್ಲೆಯ ಎಲ್ಲ ಬಾರ್‌, ವೈನ್‌ ಶಾಪ್‌ ಸೇರಿದಂತೆ ಚಿಲ್ಲರೆ ಮಾರಾಟ ಅಂಗಡಿ ಮುಚ್ಚಲು ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next