Advertisement

ಅಯೋಧ್ಯೆ ವಿಚಾರಣೆ 10ಕ್ಕೆ ನಿರ್ಧಾರ

12:30 AM Jan 05, 2019 | |

ಹೊಸದಿಲ್ಲಿ/ಲಕ್ನೋ: ಅಯೋಧ್ಯೆಯ ರಾಮಜನ್ಮ ಭೂಮಿ- ಬಾಬರಿ ಮಸೀದಿ ಸ್ಥಳದ ಮಾಲೀಕತ್ವ ಯಾರಿಗೆ ಸೇರಬೇಕು ಎಂಬ ಬಗ್ಗೆ ವಿಚಾರಣೆ ನಡೆಯಬೇಕಾದ ದಿನಾಂಕವನ್ನು ಜ.10ರಂದು ಸೂಕ್ತ ನ್ಯಾಯಪೀಠ ನಿರ್ಧರಿಸಲಿದೆ ಎಂದು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ನ್ಯಾ.ಎಸ್‌.ಕೆ.ಕೌಲ್‌ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. 

Advertisement

ಶುಕ್ರವಾರ ಒಟ್ಟೂ ಪ್ರಕ್ರಿಯೆ 30 ಸೆಕೆಂಡ್‌ಗಳಲ್ಲಿ ಮುಕ್ತಾಯವಾಗಿದ್ದು, ವಿಚಾರದ ಪರ-ವಿರೋಧ ವಾಗಿ ವಾದಿಸಲಿರುವ ವಕೀಲರಿಗೂ ಯಾವುದೇ ಅರಿಕೆ ಸಲ್ಲಿಸಲೂ ನ್ಯಾಯಾಲಯ ಅವಕಾಶ ನೀಡಲಿಲ್ಲ. “ಯಾವ ನ್ಯಾಯಪೀಠದಲ್ಲಿ ಅಯೋಧ್ಯೆ ಪ್ರಕರಣ ವಿಚಾರಣೆ ನಡೆಯಬೇಕು ಮತ್ತು ಎಂದಿನಿಂದ ವಿಚಾರಣೆ ಆರಂಭವಾಗಬೇಕು ಎಂಬ ಬಗ್ಗೆ 10ರಂದು ತಿಳಿಸಲಾಗುತ್ತದೆ’ ಎಂದಷ್ಟೇ ಹೇಳಿ ವಿಚಾರಣೆಯನ್ನು ಸಮಾಪ್ತಿಗೊಳಿಸಲಾಯಿತು.

ಇದೇ ವೇಳೆ ಲಕ್ನೋದಲ್ಲಿ ಮಾತನಾಡಿದ ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ, ಮಂದಿರ ವಿವಾದ ಇತ್ಯರ್ಥಕ್ಕೆ ಕಾಂಗ್ರೆಸ್‌ ತಡೆಯೊಡ್ಡುತ್ತಿದೆ ಎಂದು ಟೀಕಿಸಿದ್ದಾರೆ. ಆ ಪಕ್ಷ ತನ್ನ ನ್ಯಾಯವಾದಿಗಳ ಮೂಲಕ ರಾಜಕೀಯ ಮಾಡಬಾರದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next