Advertisement

ಅಯೋಧ್ಯೆ ತೀರ್ಪು: ಆರೆಸ್ಸೆಸ್‌ಎಲ್ಲ ಕಾರ್ಯಕ್ರಮ ರದ್ದು

10:01 AM Nov 01, 2019 | Team Udayavani |

ಲಕ್ನೋ: ನವೆಂಬರ್‌ 17ರೊಳಗಾಗಿ ಅಯೋಧ್ಯೆ ಭೂವಿ ವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ನವೆಂಬರ್‌ನ ಎಲ್ಲ ಕಾರ್ಯಕ್ರಮಗಳನ್ನೂ ಆರೆಸ್ಸೆಸ್‌ ರದ್ದು ಮಾಡಿದೆ. ಅಷ್ಟೇ ಅಲ್ಲ, ಎಲ್ಲರೂ ತಮ್ಮ ಪ್ರಯಾಣ, ಪ್ರವಾಸದ ವೇಳಾಪಟ್ಟಿಯನ್ನು ರದ್ದು ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ.

Advertisement

ಅಯೋಧ್ಯೆ ಪ್ರಕರಣ ಸಂಬಂಧ ಆರೆಸ್ಸೆಸ್‌ ಅತ್ಯಂತ ಎಚ್ಚರಿಕೆಯಿಂದಿದೆ. ತೀರ್ಪು ಬಂದ ಬಳಿಕ ಏನಾದರೂ ಆದರೆ, ಅದಕ್ಕೆ ನಮ್ಮನ್ನು ಹೊಣೆಯಾಗಿಸಬಾರದು ಎಂಬ ಕಾರಣಕ್ಕಾಗಿ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದು ಆರೆಸ್ಸೆಸ್‌ನ ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್‌ ನೌ ವರದಿ ಮಾಡಿದೆ. ಹರಿದ್ವಾರದಲ್ಲಿ ಅ.31ರಿಂದ ನ.4ರವರೆಗೆ ನಡೆಯಬೇಕಿದ್ದ ಪ್ರಮುಖ ಸಭೆಯನ್ನೂ ಆರೆಸ್ಸೆಸ್‌ ರದ್ದು ಮಾಡಿದೆ.

ತೀರ್ಪು ಸ್ವಾಗತಿಸೋಣ: ಅಯೋಧ್ಯೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡುವ ತೀರ್ಪನ್ನು ದೇಶದ ಜನ ವಿಶಾಲ ಹೃದಯದಿಂದ ಸ್ವಾಗತಿಸಬೇಕು ಎಂದು ಆರೆಸ್ಸೆಸ್‌ ಬುಧವಾರ ಹೇಳಿದೆ. ತೀರ್ಪು ಏನೇ ಬಂದರೂ, ದೇಶದ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಆರೆಸ್ಸೆಸ್‌ ಪ್ರಚಾರ ಮುಖ್ಯಸ್ಥ ಅರುಣ್‌ ಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next