Advertisement
ರಾಮನಿಂದ ಪೂಜೆಗೊಳಪಟ್ಟ ಅಪ್ರಮೇಯ: ದೊಡ್ಡಮಳೂರಿನ ಶೀ ಅಪ್ರಮೇಯಸ್ವಾಮಿ ದೇವಾಲಯಕ್ಕೂ ರಾಮಾಯಣಕ್ಕೂ ನಂಟಿದ್ದು, ಶ್ರೀರಾಮ ಅಪ್ರಮೇಯಸ್ವಾಮಿಗೆ ಪೂಜೆ ಸಲ್ಲಿಸಿದ್ದರಿಂದ ಈ ದೇವರನ್ನು ಶ್ರೀರಾಮಾ ಪ್ರಮೇಯ ಎಂದು ಕರೆಯಲಾಗುತ್ತದೆ. ಈ ದೇವಾಲಯ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಪ್ರತಿ ವರ್ಷ ಏಪ್ರೀಲ್ ಅಥವಾ ಮೇ ತಿಂಗಳಲ್ಲಿ ದೇವರ ರಥೋತ್ಸವ ನಡೆಯಲಿದ್ದು, ರಥೋತ್ಸವದ ಸಮಯದಲ್ಲಿ ಸೂರ್ಯನ ಮೊದಲ ರಶ್ಮಿ ಅಪ್ರಮೇಯಸ್ವಾಮಿಯ ಪಾದವನ್ನು ಸ್ಪರ್ಶಿಸುತ್ತದೆ.
Related Articles
Advertisement
ಹನುಮಂತನಿಗೂ ಉಂಟು ನಂಟು: ಜಿಲ್ಲೆಯಲ್ಲಿ ರಾಮಭಕ್ತ ಹನುಂತನ ಜೊತೆಗೂ ಸಾಕಷ್ಟು ಸಂಬಂಧವಿದೆ. ಹನುಮಂತ ಲಕ್ಷ್ಮಣನನ್ನು ಉಳಿಸಲು ಸಂಜೀವಿನಿ ಪರ್ವತವನ್ನು ಎತ್ತಿಕೊಂಡು ಹೋಗುವಾಗ ಕಣ್ವ ಜಲಾಶಯದ ಸಮೀಪ ಇರುವ ಕಂಬದರಾಯನ ಗುಡ್ಡೆಯಲ್ಲಿ ಮುಗಿಲೆತ್ತರಕ್ಕೆ ಬೆಳೆಯುತ್ತಿದ್ದ ಕಲ್ಲೊಂದು ಹನುಂತನ ಕಾಲಿಗೆ ತಾಕಿ ಛಿದ್ರವಾಯಿತು. ಈ ಘಟನೆಯಲ್ಲಿ ಹನು ಮಂತನ ಕಾಲಿಗೆ ಪೆಟ್ಟಾಯಿತು. ಈ ಸಂದರ್ಭದಲ್ಲಿ ಕೈಯ ಲ್ಲಿದ್ದ ಸಂಜೀವಿನ ಪರ್ವತ ಅಲುಗಾಡಿ ಸಂಜೀವಿನ ಗಿಡದ ತುಂಡೊಂದು ಕೆಳಗೆ ಬಿತ್ತೆಂಬ ನಂಬಿಕೆ ಇದ್ದು, ದೇವರ ಹೊಸಹಳ್ಳಿ ಗ್ರಾಮದಲ್ಲಿ ಪ್ರಸಿದ್ದ ಸಂಜೀವರಾಯ ಸ್ವಾಮಿ ದೇವಾಲಯವನ್ನು ನಿರ್ಮಿಸ ಲಾಗಿದೆ. ಈ ದೇವ ರಿಗೆ ಪೂಜೆ ಸಲ್ಲಿಸಿದರೆ ಎಂತಹ ರೋಗವಾದರೂ ವಾಸಿ ಯಾ ಗುತ್ತದೆ ಎಂಬ ನಂಬಿಕೆ ಇದ್ದು, ಕಾಲಿಗೆ ಪೆಟ್ಟಾಗಿದ್ದರಿಂದ ಹನುಮಂತನ ಕೆಂಗಲ್ ಬಳಿ ಪಾದಸ್ಪರ್ಶ ಮಾಡಿ ಮುಂದೆ ಹೋದ ಎಂದು, ನೋವಾಗಿದ್ದರಿಂದ ಹನುಮಂತನ ಮುಖ ಕೆಂಪಾಗಿತ್ತು ಎಂಬ ಕಥೆ ಇದ್ದು, ಇಂದಿಗೂ ಇಲ್ಲಿನ ಹನುಮಂತ ಕೆಂಪು ಕಲ್ಲಿನಿಂದ ಕಡೆಯಲ್ಪಟ್ಟಿದ್ದಾನೆ.
ಜಿಲ್ಲೆಯ ನೂರಾರು ಗ್ರಾಮದಲ್ಲಿವೆ ರಾಮಮಂದಿರ: ಮರ್ಯಾದ ಪುರುಷ ಶ್ರೀರಾಮ ಜಿಲ್ಲೆಯ ಸಾಕಷ್ಟು ಮಂದಿಯ ಆರಾಧ್ಯ ದೈವ. ಇಂದಿಗೂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ರಾಮಮಂದಿರಗಳು ಇವೆ. ಗ್ರಾಮೀಣ ಭಾಗ ದಲ್ಲಿ ಜನತೆ ಈ ಹಿಂದೆ ರಾಮಮಂದಿರದಲ್ಲಿ ಪ್ರತಿವಾರ ಭಜನೆ ಮಾಡುತ್ತಿದ್ದರು. ಇನ್ನೂ ಕೆಲ ಗ್ರಾಮಗಳಲ್ಲಿ ಪ್ರತಿ ಶನಿವಾರ ಇಡೀ ಗ್ರಾಮದ ಸುತ್ತಾ ರಾಮದೇವರ ಪೋಟೋ ಹಿಡಿದುಕೊಂಡು ಭಕ್ತರು ದೊಡ್ಡ ದೀಪದೊಂದಿಗೆ ರಾಮಭಜನೆ ಮಾಡುತ್ತಾ ಗ್ರಾಮದ ಸುತ್ತಾ ಪ್ರದಕ್ಷಿಣೆ ಬರುತ್ತಿದ್ದರು. ಕೆಲ ರಾಮಮಂದಿರಗಳಲ್ಲಿ ಇಂದಿಗೂ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆಯಾದರೂ, ಕೆಲ ಗ್ರಾಮಗಳಲ್ಲಿ ರಾಮಮಂದಿರ ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ರಾಮನಗರದಲ್ಲಿ ಜಟಾಯು ರಕ್ಕೆಗೆ ಸಂಸ್ಕಾರ : ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿರುವ ಶ್ರೀರಾಮ ದೇವಾಲಯ ಸಾವಿರಾರು ವರ್ಷಗಳಷ್ಟು ಹಳೆಯದಾಗಿದ್ದು, ಈ ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಯಿತು ಎಂದು ಉಲ್ಲೇಖಗಳಿವೆ. ಈ ದೇವಾ ಲಯದ ಸಮೀಪ ಬಿಳಿಯ ಬೂದಿ ರೂಪದ ಮಣ್ಣು ಸಿಗುತ್ತಿದ್ದು, ಇದನ್ನು ಈ ಭಾಗದ ಜನತೆ ಯಾವುದೇ ಆರೋಗ್ಯ ಸಮಸ್ಯೆಯಾದರೆ ಮನೆಗೆ ತೆಗೆದು ಕೊಂಡು ಹೋಗಿ ಪೂಜಿಸಿ ಹಚ್ಚಿಕೊಳ್ಳುತ್ತಿದ್ದರು. ರಾಮಾಯಣ ಕಾಲದಲ್ಲಿ ಸೀತಾ ನ್ವೇಷಣೆಗೆ ಹೊರಟ ಶ್ರೀರಾಮನಿಗೆ ಈ ಜಾಗದಲ್ಲಿ ಜಟಾಯುವಿನ ರೆಕ್ಕೆಯೊಂದು ಸಿಕ್ಕಿದ್ದು, ಅದರನ್ನು ಇಲ್ಲಿ ಸಂಸ್ಕಾರ ಮಾಡಿದ ಎಂಬ ಪ್ರತೀತಿ ಇದೆ. ಈ ದೇವಾಲಯದ ರಾಮಭಕ್ತರ ಪಾಲಿನ ಪವಿತ್ರ ಸ್ಥಾನಗಳಲ್ಲಿ ಒಂದಾಗಿದೆ.
ರಾಮದೇವರ ನೀರಿನ ಹೊಂಡಗಳು : ಜಿಲ್ಲೆಯ ಮತ್ತೂಂದು ಪ್ರಸಿದ್ಧ ರಾಮಕ್ಷೇತ್ರವೆಂದರೆ ಚನ್ನಪಟ್ಟಣ ತಾಲೂಕಿನ ವಿರು ಪಾಕ್ಷಿಪುರ ಗ್ರಾಮದ ಹೊರವಲಯದಲ್ಲಿರುವ ಶ್ರೀಗವಿರಂಗಸ್ವಾಮಿ ಬೆಟ್ಟ. ಕಬ್ಟಾಳು ಮಾರ್ಗದಲ್ಲಿರುವ ಈ ಬೆಟ್ಟದಲ್ಲಿ ರಾಮದೇವರ ಸೋಣೆ( ನೀರಿನ ಗುಂಡಿ) ಎಂದು ಸ್ಥಳೀಯರು ಕರೆಯುವ ನೀರಿನ ಗುಂಡಿಯೊಂದಿದ್ದು, ಇದರಲ್ಲಿ ಬೇಸಿಗೆಯಲ್ಲಿ ಸಿಹಿಯಾದ ನೀರು ದೊರೆಯುತ್ತದೆ. ಇಲ್ಲಿ ಶ್ರೀರಾಮನಿಗೆ ನೀರು ಕುಡಿಯಲು ದಾಹವಾದಾಗ ಬಾಣ ಹೂಡಿ ಗುಂಡಿಯನ್ನು ನಿರ್ಮಿಸಿದನೆಂಬ ಪ್ರತೀತಿ ಇದ್ದು, ಇಲ್ಲಿನ ಜನತೆ ಈ ಹೊಂಡವನ್ನು ರಾಮದೇವರ ಸೊಣೆ ಎಂದು ಕರೆಯುತ್ತಾರೆ.
– ಸು.ನಾ.ನಂದಕುಮಾರ್