Advertisement

Ayodhya ಆಹ್ವಾನಿತರ ಸಂಖ್ಯೆ ಸುಮಾರು 7500: ಅಂತಿಮ ಹಂತದ ಸಿದ್ಧತೆ

06:48 PM Jan 17, 2024 | Team Udayavani |

ಅಯೋಧ್ಯೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ರಾಮ ಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಅಂತಿಮ ಹಂತದ ಭರದ ಸಿದ್ಧತೆಗಳ ನ್ನು ಮಾಡಿಕೊಳ್ಳಲಾಗುತ್ತಿದೆ.

Advertisement

ಸಿದ್ಧತೆಗಳ ಕುರಿತು ವಿಭಾಗೀಯ ಆಯುಕ್ತ ಗೌರವ್ ದಯಾಳ್ ಹೇಳಿಕೆ ನೀಡಿದ್ದು”ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ, ನಾವು ದೇವಾಲಯದ ಒಳಗೆ ಸಮಾರಂಭಕ್ಕಾಗಿ ಆಸನ ಯೋಜನೆಯನ್ನು ಅಂತಿಮಗೊಳಿಸುತ್ತಿದ್ದೇವೆ. ಒಟ್ಟು ಆಹ್ವಾನಿತರ ಸಂಖ್ಯೆ ಸುಮಾರು 7500 ಆಗಿದೆ. ಮತ್ತು ಯಾರು ಎಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ನಾವು ನಿರ್ಧರಿಸುತ್ತಿದ್ದೇವೆ. ವಾಹನಗಳನ್ನು ಬಳಸಿ ವಿಐಪಿಗಳನ್ನು ಸ್ಥಳದೊಳಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದರು.

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರಸೇವಕಪುರಂನಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ರಾಮ ಜನ್ಮಭೂಮಿ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಕರಸೇವಕಪುರಂ ಆಶ್ರಯ ತಾಣವಾಗಿದೆ. ರಾಮಮಂದಿರ ಆಂದೋಲನದ ಸಮಯದಲ್ಲಿ ಸ್ವಯಂಸೇವಕರಿಗೆ. ನಿರ್ಮೋಹಿ ಅಖಾಡದ ಮಹಂತ್ ದಿನೇಂದ್ರ ದಾಸ್ ಮತ್ತು ಅರ್ಚಕ ಸುನೀಲ್ ದಾಸ್ ಅವರು ಅಯೋಧ್ಯೆ ರಾಮ ಮಂದಿರದ ‘ಗರ್ಭ ಗೃಹ’ದಲ್ಲಿ ಪೂಜೆ ಸಲ್ಲಿಸಿದರು.

‘ಪ್ರಾಣ ಪ್ರತಿಷ್ಠಾ ದಿನ ಹತ್ತಿರವಾಗುತ್ತಿದ್ದು ಅಯೋಧ್ಯೆ ಸರಯೂ ಘಾಟ್‌ನಲ್ಲಿ ಸ್ಥಳೀಯರು ನಿರಂತರ ಭಜನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Advertisement

ಈ ಅಯೋಧ್ಯೆ ದೇವಾಲಯ ಸಾರ್ವತ್ರಿಕ ಶಾಂತಿ ಕೇಂದ್ರವಾಗಿದೆ ಎಂದು ರಾಮ ಮಂದಿರದ ‘ಗರ್ಭ ಗೃಹ’ದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ಅರ್ಚಕ ಸುನೀಲ್ ದಾಸ್ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next