Advertisement

Ayodhya: 24ಲಕ್ಷ ದೀಪಗಳಿಂದ ಕಂಗೊಳಿಸಲಿದೆ ಅಯೋಧ್ಯೆ… ಹೊಸ ವಿಶ್ವ ದಾಖಲೆ ನಿರ್ಮಿಸಲು ಸಜ್ಜು

02:47 PM Nov 11, 2023 | Team Udayavani |

ಲಕ್ನೋ: ದೀಪಾವಳಿಯ ಮುನ್ನಾದಿನದಂದು, ಉತ್ತರ ಪ್ರದೇಶದ ದೇವಾಲಯದ ಪಟ್ಟಣವಾದ ಅಯೋಧ್ಯೆಯು ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ದೀಪೋತ್ಸವ ಕಾರ್ಯಕ್ರಮದಲ್ಲಿ 51 ಘಾಟ್‌ಗಳಲ್ಲಿ 24 ಲಕ್ಷ ದೀಪಗಳನ್ನು ಬೆಳಗಿಸಲು ಉತ್ತರ ಪ್ರದೇಶ ಸರಕಾರ ಮುಂದಾಗಿದೆ.

Advertisement

ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭಿಸಲು ಸಕಲ ಸಿದ್ಧತೆ ನಡೆಸಲಾಗಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

25,000 ಸ್ವಯಂಸೇವಕರು 24 ಲಕ್ಷ ದೀಪಗಳನ್ನು ಬೆಳಗಿಸಲಿದ್ದಾರೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು ದೀಪೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಡ್ರೋನ್ ಕ್ಯಾಮೆರಾದೊಂದಿಗೆ ದೀಪಗಳನ್ನು ಎಣಿಸುವ ಕಾರ್ಯ ನಡೆಯಲಿದೆ.

ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸರ್ಕಾರದ ಬಹುತೇಕ ಎಲ್ಲಾ ಕ್ಯಾಬಿನೆಟ್ ಸಚಿವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ದೀಪೋತ್ಸವದ ನಂತರ ಆಕರ್ಷಕ ಲೇಸರ್ ಶೋ ಕೂಡ ನಡೆಯಲಿದೆ.

Advertisement

ದೀಪೋತ್ಸವದ ಭದ್ರತಾ ಸಿದ್ಧತೆಗಳ ಕುರಿತು, ಅಯೋಧ್ಯೆ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಪ್ರವೀಣ್ ಕುಮಾರ್ ಮಾತನಾಡಿ, “ಈ ಪ್ರದೇಶವನ್ನು 14 ಪೊಲೀಸ್ ವಲಯಗಳಾಗಿ ವಿಂಗಡಿಸಲಾಗಿದೆ. ನಾವು ಕೃತಕ ಬುದ್ಧಿಮತ್ತೆಯ ಸಹಾಯವನ್ನು ಸಹ ತೆಗೆದುಕೊಂಡಿದ್ದೇವೆ. ಜನಸಂದಣಿ ಮತ್ತು ದಟ್ಟಣೆಯನ್ನು ನಿಯಂತ್ರಿಸಲಾಗುವುದು” ಎಂದು ಹೇಳಿದರು.

ಕಳೆದ ವರ್ಷ, ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 20,000 ಕ್ಕೂ ಹೆಚ್ಚು ಸ್ವಯಂಸೇವಕರು 15 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಈ ಭಾರಿ ಕಳೆದ ವರ್ಷದ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಲು ಉತ್ತರ ಪ್ರದೇಶದ ಸರಕಾರ ಮುಂದಾಗಿದೆ.

ಇದನ್ನೂ ಓದಿ: Court Permission: ಪತ್ನಿಯನ್ನು ಭೇಟಿ ಮಾಡಲು ತಿಹಾರ್ ಜೈಲಿನಿಂದ ಬಂದ ಸಿಸೋಡಿಯಾ

Advertisement

Udayavani is now on Telegram. Click here to join our channel and stay updated with the latest news.

Next