Advertisement
ಉತ್ತರಪ್ರದೇಶ: ಅಯೋಧ್ಯೆಯಲ್ಲಿ ಅದ್ದೂರಿ ದೀಪೋತ್ಸವಕ್ಕೆ ಚಾಲನೆ ನೀಡಲಾಗಿದೆ. ಸರಯೂ ನದಿ ತೀರದಲ್ಲಿ 9 ಲಕ್ಷ ಸೇರಿದಂತೆ ಅಯೋಧ್ಯೆಯಲ್ಲಿ ಈ ವರ್ಷ 12 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ. ರಾಮ್‌ಲೀಲಾ, 3ಡಿ ಹೊಲೋ ಗ್ರಫಿಕ್ ,ಲೇಸರ್ ಶೋ, ಸುಡುಮದ್ದುಗಳು ಸೇರಿದಂತೆ ಅನೇಕ ರೀತಿಯ ವಿಶೇಷತೆಗಳನ್ನು ಈ ಬಾರಿ ಅಯೋಧ್ಯೆಯಲ್ಲಿ ಕಾಣಬಹುದು.
Related Articles
31 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಭಕ್ತರು, ಕರಸೇವಕರ ಮೇಲೆ ಗುಂಡು ಹಾರಿಸಲಾಗಿತ್ತು. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವುದು ಅಪರಾಧವಾಗಿತ್ತು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ದೀಪೋತ್ಸವದಲ್ಲಿ ಮಾತನಾಡಿದ ಅವರು, “ಪ್ರಜಾಪ್ರಭುತ್ವ ಹಾಗೂ ಜನರ ಶಕ್ತಿಯಿಂದಾಗಿ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ್ದ ಜನರೇ ಈಗ ಮಂಡಿಯೂರುವಂತಾಗಿದೆ. ನೀವು ನಿಮ್ಮ ಈ ಶಕ್ತಿಯ ಪ್ರದರ್ಶನವನ್ನು ಮುಂದುವರಿಸಿದ್ದೇ ಆದಲ್ಲಿ, ಅವರು ಮತ್ತು ಅವರ ಕುಟುಂಬ ಮುಂದಿನ ಕರಸೇವೆಗೆ ಸರತಿಯಲ್ಲಿ ನಿಲ್ಲಲಿದೆ. ಮುಂದಿನ ಕರಸೇವೆಯ ವೇಳೆ ಬುಲೆಟ್ ಅಲ್ಲ, ಬದಲಿಗೆ ಶ್ರೀರಾಮ ಮತ್ತು ಶ್ರೀಕೃಷ್ಣನ ಅನುಯಾಯಿಗಳ ಮೇಲೆ ಪುಷ್ಪಮಳೆ ಸುರಿಸಲಾಗುವುದು’ ಎಂದಿದ್ದಾರೆ.
Advertisement