Advertisement
ಡಿಸಿ ಬೆನ್ನು ಹತ್ತಿದ ಪಿಎಂ, ಸಿಎಂಸ್ವಾತಂತ್ರ್ಯ ಸಿಕ್ಕಿ ನೆಟ್ಟಗೆ ಎರಡು ವರ್ಷ ವಾಗಿತ್ತಷ್ಟೆ. ಸಂವಿಧಾನ ಅಂಗೀಕಾರವಾಗಿರ ಲಿಲ್ಲ. ಅಯೋಧ್ಯೆಗೆ ಬಿಹಾರದ ದರ್ಭಾಂಗ್‌ನಿಂದ ಬಂದ ಸಾಧು ಅಭಿರಾಮ್ ದಾಸ್ ಅಯೋಧ್ಯೆಯಲ್ಲಿ ಭಜನೆಯನ್ನು ನಡೆಸು ತ್ತಿದ್ದರು. 1949ರ ಡಿಸೆಂಬರ್ 22ರ ಮಧ್ಯರಾತ್ರಿ ರಾಮಲಲ್ಲಾನ ವಿಗ್ರಹವು ಈ ಸ್ಥಳದಲ್ಲಿ ಅವರಿಗೆ ಕಂಡಿತು ಎಂಬ ಸುದ್ದಿಯನ್ನು ಆಗಷ್ಟೇ ಜನಿಸಿದ್ದ ಪಾಕಿಸ್ಥಾನ ಭಾರತಕ್ಕೆ ಜಾಗತಿಕವಾಗಿ ಮಸಿ ಬಳಿಯಲು ಬಳಸಿಕೊಂಡಿತು. ಈಗಲೂ ಅದಕ್ಕೆ ಅದೇ ಬುದ್ಧಿ, ಪಕ್ಕದ ತಟ್ಟೆಯ ಮೇಲೇ ಕಣ್ಣು. ರೇಡಿಯೋ ಪಾಕಿಸ್ಥಾನ ಸುದ್ದಿ ಹರಡಿದ ಬಳಿಕವೇ ದಿಲ್ಲಿಗೆ ತಲುಪಿದ್ದು. ಪಾಕಿಸ್ಥಾನ ಮುಸ್ಲಿಂ ರಾಷ್ಟ್ರವಾಗಿ ಉದಯವಾದರೆ, ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿ ಜಾಗತಿಕ ವಾಗಿ ಇಮೇಜ್ ತರುವ ಉತ್ಸುಕತೆಯಲ್ಲಿದ್ದ ಪ್ರಧಾನಿ ನೆಹರೂ ಅವರನ್ನು ಈ ಘಟನೆ ಚಿಂತಿತ ರನ್ನಾಗಿಸಿತು. ಜಿಲ್ಲಾ ಮೆಜಿಸ್ಟ್ರೇಟರಿಗೆ ಪ್ರಧಾನಿ ಯಿಂದ ಹಿಡಿದು ಮುಖ್ಯಮಂತ್ರಿ ಗೋವಿಂದ ವಲ್ಲಭ ಪಂತ್ ವರೆಗೆ ಎಲ್ಲರದೂ ಒತ್ತಡ.
ಆಲೆಪ್ಪಿ ಜಿಲ್ಲೆಯ ಕೂತನಾಡ್ ಗ್ರಾಮದಲ್ಲಿ ಬಡಕುಟುಂಬದಲ್ಲಿ 1907ರಲ್ಲಿ ಜನಿಸಿದ ಕಡಂಗಲತ್ತಿಲ ಕರುಣಾಕರನ್ ನಾಯರ್ ಕೇರಳದಲ್ಲಿ ಓದಿ ಇಂಗ್ಲೆಂಡ್‌ನಲ್ಲಿ ಬ್ಯಾರಿಸ್ಟರ್ ಆದರು, ಐಸಿಎಸ್ ಅಧಿಕಾರಿಯೂ ಆದರು. ಕೆಲವು ಕಾಲ ಕೇರಳದಲ್ಲಿ, 1940ರ ದಶಕದಲ್ಲಿ ಉತ್ತರ ಪ್ರದೇಶದಲ್ಲಿ ಸೇವೆ ಸಲ್ಲಿಸಿದರು. ಫೈಜಾಬಾದ್ ಜಿಲ್ಲಾಧಿಕಾರಿಯಾಗಿದ್ದು 1949ರ ಜೂ. 1ರಿಂದ 1950ರ ಮಾ. 14ರ ವರೆಗೆ, 9 ತಿಂಗಳು, 14 ದಿನ ಮಾತ್ರ. ಖಡಕ್ ಆದೇಶ
ಕಾನೂನು ಸಮಸ್ಯೆ ತಲೆದೋರಿದಾಗ ಕೆ.ಕೆ.ನಾಯರ್ ಅವರು ಗುರುದತ್‌ರನ್ನು ಸ್ಥಳಕ್ಕೆ ಹೋಗಿ ವರದಿ ಸಲ್ಲಿಸಲು ಸೂಚಿಸಿದರು. “ಹಿಂದೂಗಳು, ಮುಸ್ಲಿಮರು ಹತ್ತಿರ ಹತ್ತಿರ ದಲ್ಲಿಯೇ ತಮ್ಮ ಆಚರಣೆಗಳನ್ನು ನಡೆಸು ತ್ತಿದ್ದಾರೆ. ಹಿಂದೂಗಳು ರಾಮನ ಜನ್ಮಸ್ಥಳದಲ್ಲಿ ಭವ್ಯ ರಾಮಮಂದಿರ ಕಟ್ಟಬೇಕೆಂದು ಅರ್ಜಿ ಸಲ್ಲಿಸಿದ್ದು ಅವಕಾಶ ಕೊಡಬಹುದು. ಇದು ಸರಕಾರಿ ಜಾಗದಲ್ಲಿ (ನಾಜುಲ್ ಲ್ಯಾಂಡ್)’ ಎಂದು ಗುರುದತ್ ವರದಿ ನೀಡಿದರು.
ಪ್ರಧಾನಿಗಳಿಂದ ನಿರ್ದೇಶಿತರಾಗಿದ್ದ ಮುಖ್ಯ ಮಂತ್ರಿಗಳು ಘಟನಪೂರ್ವ ಪರಿಸ್ಥಿತಿಯನ್ನು ಕಾಪಾಡಲು ಸೂಚಿಸಿದರು. “ರಾಮಭಕ್ತರ ಆಕ್ರೋಶ ಭುಗಿಲೆದ್ದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ, ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಗುರುದತ್ ತಿಳಿಸಿದರು. ಕೆ.ಕೆ.ನಾಯರ್ ಪ್ರದೇಶದ 500 ಮೀ.ವರೆಗೆ ಪ್ರವೇಶ ನಿರ್ಬಂಧಿ ಸಿದರು. ಕೇಂದ್ರ, ರಾಜ್ಯ ಸರಕಾರ ವಿಗ್ರಹವನ್ನು ತೆರವುಗೊಳಿಸಲು ಸೂಚಿಸಿದರೆ ಕೆ.ಕೆ.ನಾಯರ್ ಸರಕಾರದ ಖರ್ಚಿನಲ್ಲಿ ಪೂಜೆ ನಡೆಯಬೇಕು ಎಂದು ಆದೇಶ ನೀಡಿದರು. ಪರಿಸ್ಥಿತಿ ನಿಯಂತ್ರಿಸಲು ಗುರುದತ್ ಅವರು ಮಂದಿರ/ಮಸೀದಿಯ ಆಸ್ತಿಗೆ ಬೀಗ ಜಡಿದರು.
Related Articles
Advertisement
ಅದೆಂಥ ನಿಷೇಧಾಜ್ಞೆ?ತುರ್ತು ಪರಿಸ್ಥಿತಿ ವೇಳೆ ದಂಪತಿ ಬಂಧನ ವಾಯಿತು. ಅಯೋಧ್ಯೆ ಸಾರ್ವಜನಿಕರ ವಿರೋಧವಿದ್ದರೂ ತಮ್ಮ ಕೊನೆಯ ದಿನಗಳನ್ನು ಹುಟ್ಟೂರಿನಲ್ಲಿ ಕಳೆಯಬೇಕೆಂದು ವಾಪಸಾಗಿ 1977ರ ಸೆ. 7ರಂದು ಕೊನೆಯುಸಿರೆಳೆದರು. ಅಯೋಧ್ಯಾಭಿಮಾನಿಗಳು ಚಿತಾಭಸ್ಮವನ್ನು ಬೃಹತ್ ಮೆರವಣಿಗೆ ಮಾಡಿ ಸರಯೂ ನದಿಗೆ ವಿಸರ್ಜಿಸಿದರು. ಈಗ ಲಕ್ಷಾಂತರ ಭಕ್ತರು ಸರಯೂ ನದಿಯಲ್ಲಿ ಸ್ನಾನ ಮಾಡಿ ಭವ್ಯಮಂದಿರದಲ್ಲಿ ದರ್ಶನ ಪಡೆಯುತ್ತಿದ್ದಾರೆ. 1949ರಲ್ಲಿ ಹೊರಡಿಸಿದ ನಿಷೇಧಾಜ್ಞೆ ಇದುವರೆಗೂ ತೆರವುಗೊಳ್ಳದಿರುವುದು, 1951ರಲ್ಲಿ ಹುಟ್ಟಿದ ಜನಸಂಘದಿಂದ ಕಮ್ಯುನಿಸ್ಟ್ ಭದ್ರಕೋಟೆ ಕೇರಳದಿಂದ ಬಂದವರೊಬ್ಬರು ಉತ್ತರ ಪ್ರದೇಶದಲ್ಲಿ ಆ ಕಾಲದಲ್ಲಿ ಗೆದ್ದದ್ದು ಅಸಾಮಾನ್ಯ. ಅಯೋಧ್ಯೆ ಪ್ರಕರಣಗಳಿಗೆ ಹಲವು ವರ್ಷ ವಕಾಲತ್ತು ನಡೆಸಿದವರು ನಾಯರ್‌ರೇ. ಮೊದಲ ಕರಸೇವಕ ಬಿರುದು
ಗುರುದತ್ ಸಿಂಗ್ ಕೂಡ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ರಾತೋ ರಾತ್ರಿ ಸರಕಾರಿ ನಿವಾಸದಿಂದ ಎಬ್ಬಿಸಲಾಯಿತು. ಬಹುಕಾಲ ನ್ಯಾಯವಾದಿ ಭಗವತಿ ಪ್ರಸಾದ್ ಸಿಂಗ್ ಅವರ ಮನೆಯಲ್ಲಿ ಉಳಿದುಕೊಂಡರು. ಪಿಂಚಣಿಗೂ ಕಷ್ಟವಾಯಿತು. 1949ರಿಂದ 70 ವರ್ಷಗಳ ಬಳಿಕ 2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡುವಾಗ ಇವರ ಪಾತ್ರವನ್ನು ಉಲ್ಲೇಖೀಸಿತ್ತು, ವಿಶ್ವ ಹಿಂದೂ ಪರಿಷತ್ ದಿಗªರ್ಶಕರಾಗಿದ್ದ ಅಶೋಕ್ ಸಿಂಘಾಲ್ ಅವರು “ಭಾರತದ ಮೊದಲ ಕರಸೇವಕ ಠಾಕೂರ್ ಗುರುದತ್ ಸಿಂಗ್’ ಎಂದು ಘೋಷಿಸಿದ್ದರು. ಮುಹಮ್ಮದ್ ಕಂಡ ಮನ್ನಣೆ
ಆಲೆಪ್ಪಿಯ ಕೆ.ಕೆ.ನಾಯರ್ ಟ್ರಸ್ಟ್ ಅಧ್ಯಕ್ಷ, ಅವರ ಅಣ್ಣನ ಮೊಮ್ಮಗ ಚಾರ್ಟರ್ಡ್ ಅಕೌಂಟೆಂಟ್ ಸುನಿಲ್ ಪಿಳ್ಳೆ ಜ. 22ರಂದು ಅಯೋಧ್ಯೆ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿ ದ್ದರು. “ನನ್ನ ಅಜ್ಜ ಹೊರಡಿಸಿದ ಆದೇಶ ಈಗ ಚಾಲ್ತಿಗೆ ಬಂದಿದೆ’ ಎಂದು ಹರ್ಷಿಸುತ್ತಾರೆ ಗುರುದತ್ ಸಿಂಗ್ ಮೊಮ್ಮಗ, ಪಶ್ಚಿಮ ಬಂಗಾಲ ಕೇಡರ್‌ನ ಐಎಎಸ್ ನಿವೃತ್ತ ಅಧಿಕಾರಿ, ಕೇಂದ್ರ ಸಂಸ್ಕೃತಿ ಇಲಾಖೆ ಕಾರ್ಯ ದರ್ಶಿಯಾಗಿದ್ದ ರಾಘವೇಂದ್ರ ಸಿಂಗ್. “ಅಯೋಧ್ಯೆಯಲ್ಲಿ ನಾಯರ್‌ಗಿರುವ ಮನ್ನಣೆ ನೋಡಿದ್ದೇನೆ. ಮನೆಗಳಲ್ಲಿ ಅವರ ಚಿತ್ರಗಳೂ ಇವೆ’ ಎನ್ನುತ್ತಾರೆ ಅಯೋಧ್ಯೆ ಉತVನನದಲ್ಲಿ ಪಾಲ್ಗೊಂಡು ದೇಗುಲವಿತ್ತು ಎಂದಿದ್ದ ಪುರಾತತ್ವ ತಜ್ಞ ಕೇರಳದ ಕೆ.ಕೆ. ಮುಹಮ್ಮದ್. – ಮಟಪಾಡಿ ಕುಮಾರಸ್ವಾಮಿ