Advertisement

ಕಾಶ್ಮೀರದ ಆಯೆಷಾ ಅಜೀಜ್‌ ದೇಶದ ಕಿರಿಯ ಪೈಲಟ್‌

02:47 AM Feb 04, 2021 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆಯೆಷಾ ಅಜೀಜ್‌ (25) ದೇಶದ ಕಿರಿಯ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

2011ರಲ್ಲಿ ಅವರು ವಿದ್ಯಾರ್ಥಿ ಪೈಲಟ್‌ ಆಗಿದ್ದದ್ದು ಮಾತ್ರವಲ್ಲ ರಷ್ಯಾದ ಸೊಕೊಲ್‌ ವಾಯುನೆಲೆಯಲ್ಲಿ ಮಿಗ್‌29 ಯುದ್ಧ ವಿಮಾನವನ್ನು ಹಾರಿಸುವ ಪರವಾನಿಗೆ ಪಡೆದುಕೊಂಡಿದ್ದರು. ಈ ಬೆಳವಣಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಮಹಿಳೆಯರಿಗೆ ಸ್ಫೂರ್ತಿ ನೀಡುವ ವಿಚಾರವಾಗಿದೆ. 2017ರಲ್ಲಿ ಆಯೆಷಾ ಅವರು, ಬಾಂಬೆ ಫ್ಲಯಿಂಗ್‌ ಕ್ಲಬ್‌ (ಬಿಎಫ್ಸಿ)ನಲ್ಲಿ ವಾಯು ಯಾನ ಕ್ಷೇತ್ರದಲ್ಲಿ ಪದವಿ ಪಡೆದುಕೊಂಡಿದ್ದರು ಮತ್ತು ವಾಣಿಜ್ಯಿಕ ವಿಮಾನಗಳನ್ನು ಹಾರಿಸುವ ಬಗ್ಗೆ ಪರವಾನಿಗೆಯನ್ನೂ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಕರ ವಸೂಲಿಗಾರ ಹಾಗೂ ಗುಮಾಸ್ತರಿಗೆ ಭಡ್ತಿ ನೀಡಲು ಕ್ರಮ: ಕೆ.ಎಸ್‌. ಈಶ್ವರಪ್ಪ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯೆಷಾ “ಕಾಶ್ಮೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಹೆಚ್ಚಿನವರು ಸ್ನಾತಕೋತ್ತರ ಪದವಿ, ವಿವಿಧ ಕ್ಷೇತ್ರಗಳಲ್ಲಿ ಪಿಎಚ್‌.ಡಿ ನಡೆಸುತ್ತಿದ್ದಾರೆ. ನನಗೆ ಪ್ರಯಾಣ ಮಾಡುವುದು ಇಷ್ಟವಾಗಿದ್ದರಿಂದ ಈ ಕ್ಷೇತ್ರ ಆರಿಸಿಕೊಂಡೆ’ ಎಂದು ಹೇಳಿದ್ದಾರೆ. ಹೆತ್ತವರು ಮತ್ತು ಕುಟುಂಬ ಸದಸ್ಯರು ತಮಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next