Advertisement

ಆಕ್ಸಿಲ್ ತುಂಡಾಗಿ ಪಲ್ಟಿಯಾದ ಟ್ರ್ಯಾಕ್ಟರ್‌: ಪ್ರಾಣಾಪಾಯದಿಂದ ಪಾರಾದ ಚಾಲಕ

08:34 AM Dec 08, 2022 | Team Udayavani |

ಮುದ್ದೇಬಿಹಾಳ: ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ ಆಕ್ಸಿಲ್ ಕಟ್ ಆಗಿ ಟ್ರ್ಯಾಕ್ಟರ್‌ ಪಲ್ಟಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಶಿವರಾಜ್ ಹೋಟೆಲ್ ಬಳಿ ಗುರುವಾರ ನಡೆದಿದೆ. ಯಲ್ಲಪ್ಪ ದೇವರಗಡ್ಡಿ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್‌ ಪಲ್ಟಿಯಾಗಿ, ಲಕ್ಷಾಂತರ ಮೌಲ್ಯದ ಕಬ್ಬು ಹಾನಿ ಆಗಿದೆ.

Advertisement

ಅಲ್ಲದೇ, ಟ್ರ್ಯಾಕ್ಟರ್‌ ಚಾಲಕನಿಗೆ ಏನು ಆಗಿಲ್ಲ. ಟ್ರ್ಯಾಕ್ಟರ್‌ ಪಲ್ಟಿಯಾಗಿರುವ‌ ಪರಿಣಾಮ ಲಕ್ಷಾಂತರ ಮೌಲ್ಯದ ಕಬ್ಬು ಹಾನಿಯಾಗಿದೆ. ಟ್ರ್ಯಾಕ್ಟರ್‌ ಜಖಂಗೊಂಡಿದೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಪೆಬ್ಬಲ್‌ ಫ್ರಾಸ್ಟ್‌ ಸ್ಮಾರ್ಟ್‌ವಾಚ್‌ ಬಿಡುಗಡೆ; ಫಿಟ್ನೆಸ್ ಮತ್ತು ಹೆಲ್ತ್‌ ಟ್ರ್ಯಾಕಿಂಗ್‌ ಸೌಲಭ್ಯ

Advertisement

Udayavani is now on Telegram. Click here to join our channel and stay updated with the latest news.

Next