ಬೆಳ್ಮಣ್: ತುಳುನಾಡಿನ ಪ್ರತಿಯೊಂದು ದೈವಗಳಿಗೆ ಅವುಗಳದ್ದೇ ಆದ ಆಯುಧಗಳು ಪರಿಕರಗಳಿದ್ದು ನೇಮ, ಕೋಲಗಳ ಸಂದರ್ಭಗಳಲ್ಲಿ ಅವುಗಳನ್ನು ಆಯುಧಧಾರಿಯಾಗಿ ಕಾಣಬಹುದಾಗಿದ್ದು ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ಬಾವಿ ಕಟ್ಟೆಗೆ ಕೊರಗಜ್ಜನ ಕೈಯ ಪರಿಕರ ಕಣಜದ ಬುಟ್ಟಿ (ಬಿತ್ತ ಕುರುವೆ)ಯ ಸ್ಪರ್ಶ ನೀಡಲಾಗಿದೆ.
ಮನೆಯ ಮುಂದಿರುವ ಬಾವಿಗೆ ಸುಂದರವಾದ ಚಂದದ ಕಟ್ಟೆ ಕಟ್ಟಿಸಿದವರು ಮುಂಡ್ಕೂರು ಗ್ರಾಮದ ಜಾರಿಗೆ ಕಟ್ಟೆಯಲ್ಲಿ ಇರುವ ಪ್ರಸಿದ್ದ ಕೊರಗಜ್ಜ ಕೊರಗರ ಪಂಜುರ್ಲಿ ಕ್ಷೇತ್ರದ ಧರ್ಮದರ್ಶಿ ಪಾತ್ರಿ ದಿವಾಕರ ಪೂಜಾರಿಯವರು.
ಕಣಜದ ಬುಟ್ಟಿಯಂತೆ (ಬಿತ್ತ ಕುರವೆ) ಹೋಲುವ ಬಾವಿ ಕಟ್ಟೆ ಕ್ಷೇತ್ರಕ್ಕೆ ಬಂದ ಭಕ್ತರನ್ನು ಬಾವಿಗೆ ಇಣುಕುವಂತೆ ಮಾಡುತ್ತಿದೆ. ನೋಡಲು ಬಿದಿರಿನಿಂದಲೆ ಕಟ್ಟಿದ್ದಾರೆಂದು ನಮಗೆ ಭಾಸವಾಗುತ್ತಿದ್ದು ಅದನ್ನು ಸಂಪೂರ್ಣವಾಗಿ ಸಿಮೆಂಟಿನಲ್ಲಿ ಡಿಸೈನ್ ಮಾಡಿ ಕಟ್ಟಿರುವುದು ವಿಶೇಷ. ಕಟ್ಟೆಯ ಪಕ್ಕದಲ್ಲಿಯೇ ಕಾಲು ತೊಳೆಯಲು ಮರದ ಕಾಂಡವನ್ನೇ ಹೋಲುವ ಸಿಮೆಂಟ್‌ನ ಚಪ್ಪಟೆಯಾಕಾರದ ವ್ಯವಸ್ಥೆ ಮಾಡಿರುವುದೂ ಆಕರ್ಷಣೀಯವಾಗಿದೆ.
2 ಲಕ್ಷ ರೂ. ಖರ್ಚು
ಕೇರಳದ ಕಣ್ಣೂರಿನಿಂದ ಬಂದ ಶಿಲ್ಪಿಗಳು ತಮ್ಮ ಕೈಚಳಕದಲ್ಲಿ ಈ ಸುಂದರ ಕಟ್ಟೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಇದಕ್ಕೆ ಸುಮಾರು 2 ಲಕ್ಷ ರೂ. ಖರ್ಚು ತಗಲಿದೆ.
– ದಿವಾಕರ ಪೂಜಾರಿ ಕ್ಷೇತ್ರದ ಧರ್ಮದರ್ಶಿ