Advertisement

ವಾಮಾಚಾರ ಶಂಕೆ: ಹಡಲಗೇರಿಯಲ್ಲಿ ಆತಂಕ

04:54 PM Dec 22, 2020 | Suhan S |

ಮುದ್ದೇಬಿಹಾಳ: ತಾಲೂಕಿನ ಹಡಲಗೇರಿ ಗ್ರಾಮದಲ್ಲಿರುವ 2ನೇ ವಾರ್ಡ್‌ ಮನೆಗಳಮುಂಭಾಗ ಕುಂಕುಮ, ಅಕ್ಕಿಕಾಳು ಎರಚಿದ ಘಟನೆ ರವಿವಾರ ಮಧ್ಯರಾತ್ರಿ ನಡೆದಿದ್ದು ಸೋಮವಾರ ಬೆಳಕಿಗೆ ಬಂದಿದೆ.

Advertisement

ಗ್ರಾಪಂ ಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ನಡೆದಈ ಘಟನೆ ಅಲ್ಲಿನ ನಿವಾಸಿಗಳ ಆತಂಕಕ್ಕೆಕಾರಣವಾಗಿದ್ದು ಮಾಟ, ಮಂತ್ರ ನಂಬುವಬಡವರು, ಮಧ್ಯಮ ವರ್ಗದವರುಗುಂಪುಗೂಡಿ ಈ ರೀತಿ ಮಾಡಿದವರನ್ನುಪತ್ತೆ ಹಚ್ಚಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಹಡಲಗೇರಿ ಗ್ರಾಪಂ ಕೇಂದ್ರ ಸ್ಥಾನವಾಗಿದ್ದು ಇಲ್ಲಿನ 2ನೇ ವಾರ್ಡ್‌2 ಸ್ಥಾನಗಳಿಗೆ 7 ಅಭ್ಯರ್ಥಿಗಳುಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿಯಾರಾದರೊಬ್ಬರು ಈ ರೀತಿ ವಾಮಾಚಾರ ಮಾಡಿರಬಹುದು. ಈ ಬಗ್ಗೆ ಸ್ಪಧಿ ìಸಿರುವ ಎಲ್ಲ 7 ಅಭ್ಯರ್ಥಿಗಳು ದೇವಸ್ಥಾನಕ್ಕೆ ಬಂದು ತಾವ್ಯಾರೂ ಹೀಗೆ ಮಾಡಿಲ್ಲ ಎಂದುಪ್ರಮಾಣ ಮಾಡಬೇಕು. ಇಲ್ಲವಾದಲ್ಲಿಮತದಾನವನ್ನೇ ಬಹಿಷ್ಕರಿಸುವುದಾಗಿ ಪಟ್ಟು ಹಿಡಿದಿದ್ದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನಿವಾಸಿ ಹುಸೇನಬಿ, ನಾವುಮುಸ್ಲಿಮರು. ಕುಂಕುಮ ಬಳಸೊಲ್ಲ. ಆದರೂ ನಮ್ಮ ಮನೆ ಗೋಡೆಗೆ ಕುಂಕುಮಒರೆಸಿ, ಅಕ್ಕಿಕಾಳು ಚೆಲ್ಲಿ ಹೋಗಿದ್ದಾರೆ. ಯಾರು ಹೀಗೆ ಮಾಡಿದ್ದಾರೆ ಎನ್ನುವುದನ್ನುಒಪ್ಪಿಕೊಳ್ಳಬೇಕು. ಮಧ್ಯರಾತ್ರಿ 12ರಿಂದ 2ಗಂಟೆಯ ಅವ ಧಿಯಲ್ಲಿ ವಿದ್ಯುತ್‌ ಪೂರೈಕೆ ಬಂದ್‌ ಆಗಿತ್ತು. ಆಗ ಯಾರೋ ಬಾಗಿಲು ಬಡಿದರು. ನಾವು ಬಾಗಿಲು ತೆರೆದಿಲ್ಲ. ಆಗ ಅವರು ಈ ರೀತಿ ಮಾಡಿದ್ದಾರೆ. ಇದು ನಮಗೆ ಭಯ ಹುಟ್ಟಿಸಿದೆ. ಅವರ್ಯಾರು ಅನ್ನೋದನ್ನ ಪತ್ತೆ ಹಚ್ಚಬೇಕು ಎಂದುಅಸಮಾಧಾನ ತೋಡಿಕೊಂಡರು.

ಇನ್ನೋರ್ವ ನಿವಾಸಿ ಶಿವಮ್ಮ ಮಾತನಾಡಿ, ನಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಇದ್ದಾರೆ. ಈ ರೀತಿ ವಾಮಾಚಾರಮಾಡಿ ಮನೆ ಮುಂದೆ ಕುಂಕುಮಹಚ್ಚೋದು, ಅಕ್ಕಿಕಾಳು ಎರಚೋದುಸರಿ ಅಲ್ಲ. ಇದರಿಂದ ಏನಾದರೂಸಮಸ್ಯೆ ಕಾಣಿಸಿಕೊಂಡಲ್ಲಿ ಏನು ಮಾಡೋದು. ಕುಂಕುಮ ಹಚ್ಚಿದವರುಯಾರು ಅನ್ನೋದನ್ನ ಪತ್ತೆ ಹಚ್ಚಬೇಕು.ನಮ್ಮ ವಾರ್ಡ್‌ಲ್ಲಿ 7 ಜನ ನಿಂತಿದ್ದುಇಬ್ಬರನ್ನೇ ಆರಿಸಬೇಕು. ಇವರಲ್ಲಿಯಾರಾದರೊಬ್ಬರೂ ಹೀಗೆ ಮಾಡಿರುವ ಸಂಶಯ ಇದೆ ಎಂದು ಹೇಳಿದರು.

Advertisement

ಈ ಘಟನೆ ಗ್ರಾಮದೆಲ್ಲೆಡೆ ಮಿಂಚಿನಂತೆ ಹರಡಿ ಜನ ಚಾವಡಿ ಕಟ್ಟೆ, ದೇವಸ್ಥಾನ ಆವರಣ ಮುಂತಾದೆಡೆ ಗುಂಪುಗೂಡಿ ಇದೇವಿ ಷಯದ ಬಗ್ಗೆ ಚರ್ಚಿಸಿದರು. ಯಾರು ಮಾಡಿರಬಹುದು ಎನ್ನುವ ಕುರಿತು ತಮಗೆ ತೋಚಿದಂತೆ ಮಾತನಾಡಿಕೊಂಡರು. ಬಹು ಹೊತ್ತಿನವರೆಗೂ ಚರ್ಚೆ ನಡೆದರೂ ಯಾರು ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಲಿಲ್ಲ. ಗೊಂದಲ, ಆತಂಕ ಬಹಳಷ್ಟು ಸಮಯದವರೆಗೆ ಮುಂದುವರಿದಿತ್ತು.

ಜಾಗೃತಿ ಮೂಡಿಸಿದ ಪಿಎಸೈ: ವಿಷಯ ತಿಳಿದು ಮುದ್ದೇಬಿಹಾಳ ಪೊಲೀಸ್‌ಠಾಣೆಯ ಪಿಎಸೈ ಮಲ್ಲಪ್ಪ ಮಡ್ಡಿ ಗ್ರಾಮಕ್ಕೆ ಧಾವಿಸಿ 2ನೇ ವಾರ್ಡ್‌ಮನೆ ಮನೆಗೆ ತಿರುಗಾಡಿ ಕುಂಕುಮಹಚ್ಚಿದ್ದನ್ನು ಪರಿಶೀಲಿಸಿದರು. ಅಂದಾಜು100-150 ಮನೆಗಳಿರುವ ಈ ವಾರ್ಡ್ ನಲ್ಲಿ ಅದಾಗಲೇ ಹಲವರು ನೀರಿನಿಂದ ಕುಂಕುಮ ತೊಳೆದು, ಅಕ್ಕಿ ಕಾಳನ್ನು ಸಂಗ್ರಹಿಸಿ ದೂರ ಚೆಲ್ಲಿದ್ದರು. ಎಲ್ಲವನ್ನೂ ಪರಿಶೀಲಿಸಿದ ಮೇಲೆ ಗ್ರಾಮಸ್ಥರನ್ನು ಭೇಟಿ ಮಾಡಿ ಮೂಢನಂಬಿಕೆಗೆ ಬಲಿಯಾಗದಂತೆ, ಈ ಘಟನೆಯನ್ನೇ ದೊಡ್ಡದು ಮಾಡಿ ಮತದಾನ ಬಹಿಷ್ಕಾರದ ತೀರ್ಮಾನ ಕೈಗೊಳ್ಳದಂತೆ ಮನವೊಲಿಸಿದರು. ನಿಮ್ಮ ಮನಸ್ಸಲ್ಲಿ ಯಾರಿಗೆ ಮತ ಹಾಕಬೇಕು ಎಂದು ಅಂದುಕೊಂಡಿದ್ದೀರೋ ಅವರಿಗೆಹಾಕಿ. ಇಂಥ ವಾಮಾಚಾರಗಳೆಲ್ಲ ನಂಬಬೇಡಿ. ಇಂಥ ವಾಮಾಚಾರ ಕೆಲಸ ಮಾಡುವಂತಿದ್ದರೆ ಎಲ್ಲರೂ ಇದೇ ತಂತ್ರಬಳಸುತ್ತಿದ್ದರು ಎಂದು ತಿಳಿಹೇಳುವ ಪ್ರಯತ್ನ ಮಾಡಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.

ಮದ್ಯಾಹ್ನದ ನಂತರ ಗ್ರಾಪಂನವರು, ಮತದಾನ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿಗ್ರಾಮದಲ್ಲಿ ಮತದಾನ ಜಾಗೃತಿ ಮೂಡಿಸಿಜನರಲ್ಲಿದ್ದ ಆತಂಕ ನಿವಾರಿಸಿದರು.ಮಂಗಳವಾರವೇ ಮತದಾನ ಇದ್ದುದರಿಂದಗ್ರಾಮಸ್ಥರಲ್ಲಿ ಆತಂಕ ಕಂಡು ಬಂದಿದ್ದರೂಮನವೊಲಿಕೆ, ಜಾಗೃತಿ ಪರಿಣಾಮ ಅವರಲ್ಲಿ ಮೂಡಿದ್ದ ಆತಂಕ ಮರೆಯಾಗಿಸಂಜೆ ವೇಳೆಗೆ ಮತದಾನ ಮಾಡುವತೀರ್ಮಾನ ಕೈಗೊಂಡರು. ಇದು ತಾಲೂಕು ಮತ್ತು ಜಿಲ್ಲಾಡಳಿತ ನೆಮ್ಮದಿಯಿಂದ ಉಸಿರಾಡುವಂತೆ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next