Advertisement
ಏನಿದು ಘಟನೆ?
Related Articles
Advertisement
ಶಾಸಕರಿಂದ ಶಿಫಾರಸು ಪತ್ರ
ಮಲ್ಲಂದೂರು ಠಾಣೆಗೆ ರವೀಶ್ ನಿಯುಕ್ತಿಗೆ ಎಂ.ಪಿ.ಕುಮಾರಸ್ವಾಮಿ ಅವರೇ ಶಿಫಾರಸು ಪತ್ರ ನೀಡಿದ್ದು, ಪಶ್ಚಿಮ ವಲಯದ ಐಜಿ ಅವರಿಗೆ ಪತ್ರ ಬರೆದಿದ್ದಾರೆ. ಈ ಶಿಫಾರಸು ಪತ್ರವೂ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಎಂ.ಪಿ.ಕುಮಾರಸ್ವಾಮಿ ನಾನು ಶಿಫಾರಸ್ಸು ಪತ್ರ ನೀಡಿಲ್ಲ. ನನ್ನ ಲೆಟರ್ ಹೆಡ್ ಪತ್ರ ಕದ್ದು ಈ ರೀತಿ ಮಾಡಿದ್ದಾರೆ. ಈ ಸಂಬಂಧ ಸದನ ಸಮಿತಿಯಲ್ಲಿ ದೂರು ದಾಖಲಿಸುತ್ತೇನೆ ಎಂದರು.
ನಾನು ಪಿಎಸ್‌ಐ ರವೀಶ್‌ಗೆ ಆವಾಜ್ ಹಾಕಿರುವುದು ನಿಜ. ನನ್ನ ಅನುಮತಿ ಇಲ್ಲದೆ ನನ್ನ ಕ್ಷೇತ್ರಕ್ಕೆ ಬಂದಿದ್ದಾನೆ. ಎಂಎಲ್‌ಎಗಳು ಅಭಿವೃದ್ಧಿ ವಿಚಾರವಾಗಿ ಅವರಿಗೆ ಬೇಕಾದ ಅಧಿ ಕಾರಿಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಾರೆ. ಈತನಿಗೆ ನೀನು ಬೇಡ ಎಂದು ಹೇಳಿದ್ದೆ. ಐಜಿ ಹೇಳಿದರು ಎಂದು ಬಂದು ರಾತ್ರಿ ಕದ್ದು ಮುಚ್ಚಿ ಚಾರ್ಜ್ ತೆಗೆದುಕೊಂಡಿದ್ದಾನೆ. ಯಾರನ್ನು ಕೇಳಿ ಬಂದೆ ಎಂದು ಪ್ರಶ್ನಿಸಿದ್ದಾಗ ಫೋನ್ ಸ್ವಿಚ್ ಆಫ್ ಮಾಡಿದ್ದ. ಐಜಿ ಹೇಳಿದ್ದಾರೆ ಬಂದಿದ್ದೇನೆ ಎಂದ. ಐಜಿಗೆ ಎಲ್ಲಾ ಕ್ಷೇತ್ರಗಳ ಮೇಲೂ ಹಕ್ಕಿಲ್ಲ, ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳನ್ನು ಎಂಎಲ್‌ಎಗಳು ಬೇಕಾದವರನ್ನು ಹಾಕಿಸಿಕೊಳ್ಳುವುದು ಸಂಪ್ರದಾಯ. ಬಂದ ಹೊಸದರಲ್ಲೇ ಬ್ಲ್ಯಾಕ್‌ಮೇಲ್ ತಂತ್ರ ಮಾಡಿದ್ದಾನೆ. ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ. ಶಿಫಾರಸು ಪತ್ರವನ್ನು ನಾನು ನೀಡಿಲ್ಲ. ಯಾರೋ ಮಿಸ್ ಆಗಿ ನೀಡಿದ್ದರು. ನನ್ನ ಕ್ಷೇತ್ರದಲ್ಲಿ ಯಾರನ್ನೂ ಬದಲಾಯಿಸಬಾರದು. ನಾನು ಹೇಳುತ್ತೇನೆ ಆಗ ಬದಲಾಯಿಸಿ ಎಂದಿದ್ದೆ. ಮೊದಲು ನೀಡಿದ ಶಿಫಾರಸು ಪತ್ರ ಯಾರೋ ಕಳ್ಳತನ ಮಾಡಿ ನೀಡಿದ್ದಾರೆ. ಸದನ ಸಮಿತಿಗೆ ಪ್ರಕರಣ ದಾಖಲಿಸುತ್ತೇನೆ. ತನಿಖೆ ಮಾಡಿಸುತ್ತೇನೆ. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಆತ ನನ್ನ ಕ್ಷೇತ್ರಕ್ಕೆ ಬೇಡ. – ಎಂ.ಪಿ.ಕುಮಾರಸ್ವಾಮಿ, ಶಾಸಕ