Advertisement

ಮಣ್ಣಿನಲ್ಲಿ ತಯಾರಿಸಿದ ಗೌರಿ ಗಣೇಶ ಬಳಸಲು ಜಾಗೃತಿ

11:42 AM Sep 12, 2018 | |

ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವಂತೆ ಅರಿವು ಮೂಡಿಸಲು ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಮಣ್ಣಿನ ಗಣೇಶ ವಿಗ್ರಹಗಳನ್ನು ವಿತರಿಸಲಾಯಿತು. 

Advertisement

ರೋಟ್ರ್ಯಾಕ್ಟ್ ಕ್ಲಬ್‌: ನಗರದ ಜೆಎಸ್‌ಎಸ್‌ ಕಾನೂನು ಕಾಲೇಜಿನ ರೋಟ್ರ್ಯಾಕ್ಟ್ ಕ್ಲಬ್‌ ವತಿಯಿಂದ “ಪರಿಸರ ಸ್ನೇಹಿ ಗಣಪತಿ’ ಬಳಸಿ ಅಭಿಯಾನ ನಡೆಸಲಾಯಿತು. ವಿದ್ಯಾರಣ್ಯಪುರಂನಲ್ಲಿರುವ ಶಾಸಕ ರಾಮದಾಸ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್‌ನ ವಿದ್ಯಾರ್ಥಿಗಳು ಮಣ್ಣಿನ ಗೌರಿ-ಗಣೇಶ ವಿಗ್ರಹವನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ರಾಮದಾಸ್‌,  ಆದರೆ ಮಣ್ಣಿನ ಗೌರಿ-ಗಣೇಶ ವಿಗ್ರಹ ಬಳುಸುವುದರಿಂದ ಪರಿಸರ ಸಂರಕ್ಷಣೆ ಜತೆಗೆ ಪ್ರಾಚೀನ ಕೌಶಲ್ಯವಾಗಿರುವ ಕುಂಬಾರಿಕೆ ವೃತ್ತಿಯೂ ಉಳಿಯಲಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್‌, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್‌, ಪ್ರತಿಧ್ವನಿ ಪ್ರಸಾದ್‌, ರೋಟ್ರ್ಯಾಕ್ಟ್ ಕ್ಲಬ್‌ನ ಸದಸ್ಯರಾದ ಸುಮುಖ್‌ ಭರದ್ವಾಜ್‌, ಸೂರ್ಯ, ಗಗನ್‌, ಶಿವು, ಜೋಶಿ, ಅಶ್ವಿ‌ನಿ, ಸುರಭಿ, ಪ್ರಿಯಾ ಹಾಜರಿದ್ದರು.

ಲಯನ್ಸ್‌ ಕ್ಲಬ್‌: ಗಣಪತಿ ಹಬ್ಬದ ಅಂಗವಾಗಿ ಲಯನ್ಸ್‌ ಕ್ಲಬ್‌ ಆಫ್ ಮೈಸೂರು ಜಯಲಕ್ಷ್ಮಿಪುರಂ ಶಾಖೆ ವತಿಯಿಂದ ನಗರದ ಚಾಮುಂಡಿಪುರಂನಲ್ಲಿ ಮಣ್ಣಿನ ಗಣೇಶ ವಿಗ್ರಹಗಳ ಬಳಕೆ ಬಗ್ಗೆ ಪರಿಸರ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಾಲಭೋದಿನಿ ಶಾಲೆಯ ಮಕ್ಕಳ ಸ್ಥಳೀಯ ನಿವಾಸಿಗಳಿಗೆ ಮಣ್ಣಿನ ಬಣ್ಣರಹಿತ ಗಣಪತಿ ವಿಗ್ರಹಗಳನ್ನು ವಿತರಿಸಿ, ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸುವಂತೆ ಮನವಿ ಮಾಡಿದರು.

ಈ ವೇಳೆ ಪಾಲಿಕೆ ಸದಸ್ಯ ಮ.ವಿ.ರಾಮ್‌ಪ್ರಸಾದ್‌ ಮಾತನಾಡಿ, ಪಿಒಪಿ ಬಳಸಿ ತಯಾರಿಸುವ ಗಣೇಶ ವಿಗ್ರಹಗಳು ಪರಿಸರಕ್ಕೆ ಮಾರಕ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಆದರೂ ಕೆಲವು ಕಡೆಗಳಲ್ಲಿ ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಚಂದ್ರಶೇಖರ್‌, ಕಾರ್ಯದರ್ಶಿ ಯೋಗಾನರಸಿಂಹನ್‌, ಭರತೇಶ್‌, ಸದಸ್ಯರಾದ ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next