Advertisement

ಕೊರೊನಾ ಸೋಂಕು ತಡೆಗೆ ಜಾಗೃತಿ ಕಾರ್ಯಕ್ರಮ

05:14 PM Mar 17, 2020 | Suhan S |

ಹಿರೇಕೆರೂರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಯುವ ರೆಡ್‌ ಕ್ರಾಸ್‌ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಆಶ್ರಯದಲ್ಲಿ ಕೊರೊನಾ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಈ ವೇಳೆ ಮಾತನಾಡಿದ ಪ್ರಾಚಾರ್ಯ ಡಾ| ಎಸ್‌.ಪಿ. ಗೌಡರ, ವಿದ್ಯಾರ್ಥಿಗಳಿಗೆ ರಜೆ ನೀಡಿರುವುದು ಮಜಾ ಮಾಡಲು ಅಲ್ಲ, ನೀವು ಮನೆಯಲ್ಲೇ ಇದ್ದು ಸುರಕ್ಷಿತ ಕ್ರಮ ವಹಿಸಬೇಕು. ನಿಮ್ಮೂರಿನ ಜನತೆಗೆ ರೋಗದ ಲಕ್ಷಣಗಳು ಹಾಗೂ ಮುಂಜಾಗೃತಾ ಕ್ರಮ ಕುರಿತು ಮಾಹಿತಿ ನೀಡಬೇಕು ಎಂದರು.

ಪ್ರಾಧ್ಯಾಪಕ ಎಂ.ಬಿ. ಬದನೆಕಾಯಿ, ಡಾ| ಎಲ್‌.ಎಂ. ಪೂಜಾರ, ಎಸ್‌.ಎಚ್‌. ದೊಡ್ಡಗೌಡರ, ಶಿವಾನಂದ ಸಂಗಾಪುರ ಪಿ.ಐ. ಸಿದ್ದನಗೌಡರ, ಹರೀಶ್‌ ಡಿ., ಮೀನಾಕ್ಷಿ ಬಿ., ಹೇಮಲತಾ ಕೆ., ಗೀತಾ ಡಿ., ಟೀನಾ ವಿ., ಸುಮಲತಾ, ಯತೀಶ್‌ ಎನ್‌.ಎ., ರಾಮಚಂದ್ರಪ್ಪ ಬಿ.ಎಂ., ಸುಜಾತ ಕೆ. ಪತ್ರಾಂಕಿತ ವ್ಯವಸ್ಥಾಪಕ ಜಗದೀಶನ ಎನ್‌., ವೀರೇಶ ಕೊರಗರ ಯುವ ರೆಡ್‌ ಕ್ರಾಸ್‌ ಘಟಕದ ಸಂಚಾಲಕ ಎಸ್‌.ಬಿ.ಭಜಂತ್ರಿ, ಶಿವಾನಂದ ಸಂಗಾಪುರ, ವಿ.ಜಿ. ಪಾಟೀಲ, ಚಿನ್ನಮ್ಮ ಬಡಿಗೇರ್‌, ಪಿ.ಬಿ.ನಾಯಕ್‌ ಮುಕೇಶಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next