Advertisement

ಬಾಲ್ಯ ವಿವಾಹ ತಡೆಗೆ ಜಾಗೃತಿ

11:33 AM Jun 30, 2019 | Suhan S |

ಹೊಳೆಆಲೂರ: ಸಮಾಜದಲ್ಲಿ ಬಾಲ್ಯ ವಿವಾಹ ನಿಲ್ಲಬೇಕಾದರೆ ಕಾಯ್ದೆಗಳಿಗಿಂತ ಸಮಾಜದ ಮನಸ್ಥಿತಿ ಬದಲಾವಣೆ ಆಗಬೇಕು ಎಂದು ಸುಗ್ರಾಮ ಸಂಘಟನೆ ತಾಲೂಕು ಕಾರ್ಯದರ್ಶಿ ರೇಣುಕಾ ಜೈನಾಪುರ ಹೇಳಿದರು.

Advertisement

ದಿ| ಹಂಗರ್‌ ಪ್ರೊಜೆಕ್ಟ್ ಬೆಂಗಳೂರು, ಸ್ಫೂರ್ತಿ ಸಂಸ್ಥೆ ಹೊಳೆಆಲೂರ ಹಾಗೂ ಗ್ರಾ.ಪಂ. ಹೊಳೆಮಣ್ಣುರ ಇವರ ಸಹಯೋಗದಲ್ಲಿ ಶನಿವಾರ ಹೊಳೆಮಣ್ಣೂರ ಸರಕಾರಿ ಕನ್ನಡ ಶಾಲೆಯಲ್ಲಿ ಜರುಗಿದ ಬಾಲ್ಯ ವಿವಾಹ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಎಚ್ಚರಿಕೆ ವಹಿಸಿದರೆ ಬಾಲ್ಯ ವಿವಾಹ ಪದ್ಧತಿ ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದರು.

ಸ್ಫೂತಿ ಸಂಸ್ಥೆ ಸಯೋಜಕಿ ಸುನಿತಾ ಹಿರೇಮಠ ಮಾತನಾಡಿ, ಹೆಣ್ಣು ಮಗುವಿಗೆ ದೈಹಿಕ ಹಾಗೂ ಬೌದ್ಧಿಕ ವಿಕಸನವಾಗದ ಹೊರತು ಅವಳಿಗೆ ವಿವಾಹ ಮಾಡುವಂತಿಲ್ಲ ಎಂದು 2017ರಲ್ಲಿ ಸರಕಾರ ಕಠಿಣ ಕಾನೂನು ಜಾರಿಗೊಳಿಸಿದ್ದರು. ಆದರೂ ಗ್ರಾಮೀಣ ಭಾಗದಲ್ಲಿ ಹೆಣ್ಣು ಋತುಮತಿಯಾದ ತಕ್ಷಣ ಅವಳನ್ನು ಶಾಲೆ ಬಿಡಿಸಿ ಮದುವೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಕೆಲಸದಲ್ಲಿ ತೊಡಗುವವರಿಗೆ ದಂಡ, ಶಿಕ್ಷೆಯ ಜೊತೆಗೆ ಸಮಾಜದಲ್ಲಿ ಜನ ಜಾಗೃತಿ ಅವಶ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಜರುಗಿತು.

ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಸ್ಫೂರ್ತಿ ಸಂಸ್ಥೆ ಸಂಯೋಜಕ ಲಕ್ಷ ್ಮಣ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪ. ಮಾಜಿ ಅಧ್ಯಕ್ಷ ಎಸ್‌.ವೈ. ಗಾಣಿಗೇರ, ಗ್ರಾ.ಪಂ. ಕಾರ್ಯದರ್ಶಿ ಮಲ್ಲಿಕಾರ್ಜುನಗೌಡ ತಿಮ್ಮನಗೌಡ್ರ, ಗ್ರಾಮ ಲೆಕ್ಕಾಧಿಕಾರಿ ಕೆ.ಡಿ. ಗೌಂಡಿ, ಗ್ರಾ.ಪಂ. ಸದಸ್ಯೆ ಸರಸ್ವತಿ ಕಮ್ಮಾರ, ನಿರ್ಮಲಾ ಮುಂಡರಗಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಕನ್ನಡ ಶಾಲಾ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next