Advertisement
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್, ಭಜನ ಸತ್ಸಂಗ ಸಮಾವೇಶ ಸಮಿತಿ ಪುತ್ತೂರು, ಶ್ರೀ ಕ್ಷೇ. ಧ. ಗ್ರಾ. ಯೋಜನೆ ಪುತ್ತೂರು ಸಹಯೋಗದಲ್ಲಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ರವಿವಾರ ನಡೆದ ಬೃಹತ್ ಭಜನ ಸತ್ಸಂಗ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪುತ್ತೂರಿನಲ್ಲಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ಭಜನ ಸತ್ಸಂಗ ನಡೆದಿರುವುದು ಖುಷಿ ನೀಡಿದೆ ಎಂದರು. ಅಭೂತಪೂರ್ವ: ಸುಬ್ರಹ್ಮಣ್ಯ ಶ್ರೀ
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಜನ ಸತ್ಸಂಗ ಸಮಾವೇಶದಲ್ಲಿ ಅಭೂತಪೂರ್ವ ಸಂಖ್ಯೆಯ ಜನರು ಪಾಲ್ಗೊಳ್ಳುವ ಮೂಲಕ ಜಾಗೃತಿ ಸಾಬೀತುಪಡಿಸಿದ್ದಾರೆ. ರಾಮಮಂದಿರದ ವಿಚಾರದಲ್ಲೂ ಇಂತಹ ಜಾಗೃತಿ ಕೆಲಸ ಮಾಡಬೇಕಾ ಗಿದೆ ಎಂದರು.
Related Articles
Advertisement
ಸತ್ಸಂಗ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಸ್ತಾ ವನೆಗೈದರು. ಅಧ್ಯಕ್ಷ ಧನ್ಯಕುಮಾರ್ ಬೆಳಿಯೂರುಗುತ್ತು ಸ್ವಾಗತಿಸಿ, ಸಂಚಾಲಕ ಶಶಿಕುಮಾರ್ ಬಾಲೊÂಟ್ಟು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು.
ಸರಕಾರಕ್ಕೆ ಬೇಡಿಕೆಭಜನ ಮಂದಿರಗಳು ಇರುವ ಸ್ಥಳವನ್ನು ಸಕ್ರಮಗೊಳಿಸಿ ಮಂದಿರಗಳ ಹೆಸರಿಗೆ ನೀಡಬೇಕು, ಭಜನ ಪರಿಷತ್‌ಗೆ ಭಜನ ಅಕಾಡೆಮಿ ಗೌರವ ನೀಡಬೇಕು, ಹನುಮ ಜಯಂತಿ ದಿನವನ್ನು ಭಜನ ದಿನವಾಗಿ ಆಚರಿಸಲು ಘೋಷಣೆ ಮಾಡಬೇಕು ಮೊದಲಾದ 10 ಬೇಡಿಕೆಗಳನ್ನು ಶಾಸಕ ಸಂಜೀವ ಮಠಂದೂರು ಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ನಗರ ಸಂಕೀರ್ತನೆ
ಅಪರಾಹ್ನ ನಗರದ ಮುಖ್ಯ ರಸ್ತೆಯಲ್ಲಿ ಸುಮಾರು 25 ಸಾವಿರಕ್ಕೂ ಮಿಕ್ಕಿ ಭಜಕರು ದೇವರ ನಾಮ ಸಂಕೀರ್ತನೆ ಯಾತ್ರೆ ನಡೆಸಿದರು. ಕೋಟಿ ಶಿವ ಪಂಚಾಕ್ಷರಿ ಪಠಣ
ಸಂಜೆ ಪ್ರಧಾನ ವೇದಿಕೆಯಲ್ಲಿ ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಜಪಯಜ್ಞ ನಡೆಯಿತು. ರಾಮಕೃಷ್ಣ ಕಾಟುಕುಕ್ಕೆ ನೇತೃತ್ವದಲ್ಲಿ ಸಾವಿರಾರು ಭಜಕರು 108 ಶಿವ ಜಪ ಉಚ್ಚರಿಸಿದರು.