Advertisement

ಮಾನಸಿಕ ರೋಗದ ಜಾಗೃತಿ ಅವಶ್ಯ

04:42 PM May 25, 2019 | Team Udayavani |

ಮಂಡ್ಯ: ಮಾನಸಿಕ ರೋಗದ ಬಗ್ಗೆ ಗ್ರಾಮೀಣರಿಗೆ ಜಾಗೃತಿ ಅವಶ್ಯ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ.ಶಿವಪ್ರಕಾಶ್‌ ದೇವರಾಜು ತಿಳಿಸಿದರು.

Advertisement

ನಗರದ ಮಿಮ್ಸ್‌ನ ಸಭಾಂಗಣದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮನೋರೋಗ ವಿಭಾಗ, ಸಮುದಾಯ ವೈದ್ಯಕೀಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿಶ್ವ ಸ್ಕಿಜೋಫ್ರಿನಿಯಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣರಿಗೆ ಮಾನಸಿಕ ರೋಗದ ಬಗ್ಗೆ ಅರಿವಿನ ಕೊರತೆ ಇದೆ. ಚಿಕಿತ್ಸೆಯ ತಿಳಿವಳಿಕೆಯಿಲ್ಲದೆ ಮಾಟ- ಮಂತ್ರದ ಹೆಸರಿನಲ್ಲಿ ತೀವ್ರ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮಾನಸಿಕ ಖನ್ನತೆಗೆ ಒಳಗಾದವರನ್ನು ದೂರ ಮಾಡುತ್ತಾರೆ. ಅವರ ಸಹಾಯಕ್ಕೆ ಯಾರೂ ಮುಂದಾಗುವುದಿಲ್ಲ. ಮಾನಸಿಕ ಖನ್ನತೆಗೆ ಒಳಗಾದವರಿಗೆ ಅವಶ್ಯಕ ಸಹಾಯವನ್ನು ಪೊಲೀಸ್‌ ಇಲಾಖೆ ನೀಡಲು ಸಿದ್ಧವಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಚೇಗೌಡ ಮಾತನಾಡಿ, ಸ್ಕಿಜೋಫ್ರಿನಿಯಾ ಮಾನಸಿಕ ಕಾಯಿಲೆಯಾಗಿದ್ದು, ಇದಕ್ಕೆ ಗುರಿಯಾದ ವ್ಯಕ್ತಿ ಮಾನಸಿಕ ಖನ್ನತೆಗೆ ಒಳಗಾಗುತ್ತಾನೆ. ಇದರಿಂದ ಭ್ರಮನಿರಸನಕ್ಕೆ ಒಳಗಾಗುತ್ತಾರೆ. ಮೆದುಳಿನಲ್ಲಿ ನಡೆಯುವ ರಾಸಾಯನಿಕ ವ್ಯತ್ಯಾಸಗಳಿಂದ ಈ ಕಾಯಿಲೆ ಬರುತ್ತದೆ. ರಕ್ತದೊತ್ತತ್ತಡ, ಆಘಾತ, ಪರಿಸರ, ಮದ್ಯ ಸೇವನೆಯಿಂದ ಈ ಕಾಯಿಲೆ ಬರುತ್ತದೆ. ಅಂತಹವರು ಅವರಷ್ಟಕ್ಕೆ ಅವರೇ ಮಾತನಾಡುತ್ತಾರೆ. ಗಲಾಟೆ ಮಾಡುತ್ತಾರೆ. ಸ್ವಚ್ಛತೆ ಇರುವುದಿಲ್ಲ. ಅಂತಹವರನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಕೊಡಿಸಿದರೆ ಗುಣಮುಖರಾಗುತ್ತಾರೆ ಎಂದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಪಿ.ಅಶ್ವಥ್‌, ಮಿಮ್ಸ್‌ ನಿರ್ದೇಶಕ ಡಾ.ತ್ರಿನೇಶ್‌ಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಂ. ನಾಗರಾಜು, ಡಾ.ಅಶೋಕ್‌ಕುಮಾರ್‌, ಡಾ.ಶಶಾಂಕ್‌, ಚಿಕ್ಕರಸೇ ಗೌಡ, ಮಹಮದ್‌ಕುಟ್ಟಿ, ಗೋವಿಂದರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next