ಮದ್ದೂರು: ಮಾರಣಾಂತಿಕ ಕಾಯಿಲೆಗಳ ಬಗ್ಗೆ ಪ್ರಥಮ ಹಂತದಲ್ಲೇ ಅರಿವು ಮೂಡಿಸಿದಲ್ಲಿ ಅದರ ನಿಯಂತ್ರಣ ಸಾಧ್ಯ ಎಂದು ಆರೋಗ್ಯ ಜಿಲ್ಲಾ ಶಿಕ್ಷಣಾಧಿಕಾರಿ ಪಿ. ಶಿವಾನಂದ ತಿಳಿಸಿದರು.
ಮದ್ದೂರು ಪಟ್ಟಣದ ವರ್ಧಮಾನ ಪ್ಯಾರಮೆಡಿಕಲ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಏಡ್ಸ್ ಮಹಾಮಾರಿ ಕಾಯಿಲೆಯಾಗಿದ್ದು,ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚಾಗಿಕಂಡು ಬರುತ್ತಿರುವುದು ಆತಂಕದ ವಿಷಯ.ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ರೋಗಗಳು ಹರಡ ದಂತೆ ಎಚ್ಚರಿಕೆವಹಿಸಬೇಕು ಎಂದರು.
ಜಿಲ್ಲೆಯಲ್ಲಿ 10.5 ಸಾವಿರ ಮಂದಿ ಎಚ್‌ಐವಿ ಶಂಕಿತರಿದ್ದು ತಾಲೂಕಿನಲ್ಲಿ 1500 ಮಂದಿ ಏಡ್ಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಗರ್ಭಿಣಿಯರನ್ನು ತಪಾಸಣೆ ನಡೆಸಿ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ಹೇಳಿದರು.
ಎಚ್‌ಐವಿ ಪೀಡಿತ ರೋಗಿಗಳಿಗೆ ಸರಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮುಂದಾ ಗಿದ್ದು ಮಾಸಾಶನ, ಪುನರ್ವಸತಿ, ಶಿಕ್ಷಣ, ವಿದ್ಯಾರ್ಥಿ ವೇತನ ಇನ್ನಿತರೆ ಸೌಲಭ್ಯಗಳನ್ನುನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವುದಾಗಿ ಹೇಳಿದರು.
ಸೂಕ್ತ ಮಾಹಿತಿಗಳನ್ನು ಸಕಾಲದಲ್ಲಿಇಲಾಖೆ ಅಧಿಕಾರಿಗಳು ಜಾಗೃತಿ ನಡೆಸಿದಲ್ಲಿ ಇಂತಹ ಕಾಯಿಲೆಗಳನ್ನು ಸಮರ್ಥವಾಗಿತಡೆಗಟ್ಟಬಹುದು ಎಂದು ತಿಳಿಸಿದರಲ್ಲದೇ ಲೈಂಗಿಕ ಅಸುರಕ್ಷತೆ, ಸೊಂಕಿತ ವ್ಯಕ್ತಿಯುರಕ್ತದಾನ ಮಾಡುವ ಮೂಲಕ ಮತ್ತು ರಕ್ತ ಪಡೆಯುವುದರಿಂದ ಸೊಂಕಿತ ವ್ಯಕ್ತಿಗೆ ಬಳಸಿದ ಸೂಜಿ ಬಳಕೆಯಿಂದಾಗಿ ಸೊಂಕು ಹರಡುವುದಾಗಿ ತಿಳಿಸಿದರು. ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜು ಪ್ರಾಂಶುಪಾಲೆ ನವ್ಯ, ಉಪನ್ಯಾಸಕರಾದ ಪುಣ್ಯ, ಕೌಶಲ್ಯ, ಪುಷ್ಪಾವತಿ ಇತರರು ಇದ್ದರು.