ಮಂಡ್ಯ: ಪ್ರತಿಯೊಬ್ಬರೂ ಒಂದೊಂದು ಕಾರಣ ಗಳಿಗಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಈ ಸಂದರ್ಭದಲ್ಲಿ ಆಪ್ತ ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸೆಯಿಂದ ಮಾನಸಿಕ ಸದೃಢತೆ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬಕಲ್ಯಾಣಇಲಾಖೆವತಿಯಿಂದವಿಶ್ವಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಾಗೃತಿಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಜಗತ್ತಿನಲ್ಲಿ730 ಕೋಟಿ ಜನಸಂಖ್ಯೆ ಇದ್ದು, ಅತಿ ವೇಗದಲ್ಲಿ ಸಾಗುತ್ತಿರುವ ಪ್ರಪಂಚದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದನ್ನರಿತ ವಿಶ್ವಸಂಸ್ಥೆ ಮಾನಸಿಕ ಆರೋಗ್ಯಕ್ಕೆ,ಸ್ವಸ್ಥತೆಗೆ ಒತ್ತು ನೀಡಲು ಮಾನಸಿಕ ಆರೋಗ್ಯದಲ್ಲಿ ಹೆಚ್ಚಿನ ಹೂಡಿಕೆ, ಹೆಚ್ಚಿನ ಚಿಕಿತ್ಸೆಗೆ ಅವಕಾಶ ಘೋಷ ವಾಕ್ಯದಲ್ಲಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಚಿಕಿತ್ಸೆ ಉತ್ತಮ ಜೀವನಕ್ಕೆ ಅನುಕೂಲ: ತಾಯಿ ಗರ್ಭಾವಸ್ಥೆಯಿಂದ ಮರಣ ಹೊಂದುದ್ದು ವರೆಗೆ ಒಂದಲ್ಲ ಒಂದು ರೀತಿಯ ಖನ್ನತೆ, ಒತ್ತಡ, ಏಕಾಂತ ಸೇರಿದಂತೆ ವಿವಿಧ ರೀತಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೋವಿಡ್ ಹಿನ್ನೆಲೆಯಲ್ಲಿ ವೈದ್ಯರು, ಶುಶ್ರೂಷಕರು, ರೈತರು ಸೇರಿದಂತೆ ಎಲ್ಲ ವೃತ್ತಿಪರರು ಮಾನಸಿಕ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ. ಇವುಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬೇಕು. ಗುಣಮುಖರಾದರೆ ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ. ಎಂದು ಸಲಹೆ ನೀಡಿದರು.
ಎಂತಹ ಮಾನಸಿಕ ಖಾಯಿಲೆ ಇದ್ದರೂ ಅದಕ್ಕೆ ವಿಜ್ಞಾನದಲ್ಲಿ ಚಿಕಿತ್ಸೆ ಇದೆ. ಮಾನಸಿಕ ಸದೃಢತೆಗೆ ಸಂಕಲ್ಪ ಮಾಡಬೇಕು.ಜಿಲ್ಲೆಯಲ್ಲಿಹೆಚ್ಚುಆತ್ಮಹತ್ಯೆ ಪ್ರಕರಣಗಳು ಕಂಡು ಬರುತ್ತಿದ್ದವು. ಇದಕ್ಕೆ ಆಪ್ತ ಸಮಾಲೋಚನೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ಆರೋಗ್ಯ ಇಲಾಖೆ ಸಿಬ್ಬಂದಿ, ಶುಶ್ರೂಷಕಿಯರು ಭಾಗವಹಿಸಿದ್ದರು.