ತುಮಕೂರು: ಕೊರೊನಾ ಮಾರಣಾಂತಿಕ ಕಾಯಿಲೆಯಾಗಿದ್ದು, ಜಾಗತಿಕ ಯುದ್ಧದ ರೀತಿಯಲ್ಲಿ ಎಲ್ಲರನ್ನೂ ಬಲಿ ಪಡೆಯಲು ಸಜ್ಜಾಗಿದೆ. ಎಲ್ಲರೂ ಜಾಗೃತರಾಗಬೇಕಿದೆ. ಇಲ್ಲವಾದರೆ ಇದರ ಸೋಂಕು ಮತ್ತಷ್ಟು ವ್ಯಾಪಿಸುತ್ತದೆ. ಹಾಗಾಗಿ ಸರ್ಕಾರದ ಮಾರ್ಗಸೂಚಿಪಾಲಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಡವರಿಗೆ ದಿನಸಿ ಕಿಟ್‌ವಿತರಿಸಿ ಮಾತನಾಡಿದ ಅವರು, ನಗರದಲ್ಲಿ ಅತ್ಯಂತಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸಿಆಹಾರದ ಕಿಟ್ ವಿತರಿಸುತ್ತಿರುವುದು ಕೊರೊನಾಸಂಕಷ್ಟದ ದಿನದಲ್ಲಿ ಉತ್ತಮ ಕೆಲಸ ಎಂದರು.
ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ.ಕೃಷ್ಣಪ್ಪಮಾತನಾಡಿ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅಗತ್ಯಕ್ರಮ ಕೈಗೊಳ್ಳಬೇಕು. ಸರ್ಕಾರಿ ಮಾರ್ಗಸೂಚಿಗಳನ್ನುತಪ್ಪದೆ ಪಾಲಿಸಿ. ಕೊರೊನಾ ಸೋಂಕನ್ನು ಎಲ್ಲರೂ ಸೇರಿಹೋಗಲಾಡಿಸಬೇಕಿದೆ. ಅದಕ್ಕಾಗಿ ತುಮಕೂರುಮಹಾನಗರ ಪಾಲಿಕೆಯ ಸಿಬ್ಬಂದಿ ಅವಿರತ ಶ್ರಮಸಲ್ಲಿಸುತ್ತಿದ್ದಾರೆ.
ಅದಕ್ಕಾಗಿ ಎಲ್ಲರೂ ಸಹಕರಿಸಲುಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಬಡ ಕುಟುಂಬಗಳಿಗೆ ದಿನಸಿಕಿಟ್ ಹಾಗೂ ತರಕಾರಿಗಳನ್ನು ವಿತರಿಸಲಾಯಿತು.ಡಿವೈಎಸ್ಪಿ ಎಚ್.ಶ್ರೀನಿವಾಸ್, ಸ್ಕೌಟ್ಸ್ ಆಯುಕ್ತಬಿ.ಆರ್.ವೇಣುಗೋಪಾಲಕೃಷ್ಣ, ಗೈಡ್ಸ್ ಆಯುಕ್ತರಾದಸುಭಾಷಿಣಿ, ಮಹಾನಗರ ಪಾಲಿಕೆಯ ಸದಸ್ಯೆ ಗಿರಿಜಾ,ಜಿಲ್ಲಾ ಸ್ಥಾನಿಕ ಆಯುಕ್ತ ಈಶ್ವರಯ್ಯ ಹಾಗೂಆಂಜಿನಪ್ಪ, ದಾನಿ ಪೋಲೋ ರಾಮಣ್ಣ, ಸ್ಥಳೀಯಸಂಸ್ಥೆ ಉಪಾಧ್ಯಕ್ಷ ಕುಮಾರ್, ರಮೇಶ್,ಕಾರ್ಯದರ್ಶಿ ಗುರುನಾಥ್, ಖಜಾಂಚಿ ನಂದಿನಿ,ಸ್ಥಳೀಯ ಸಂಸ್ಥೆಯ ಪದಾಧಿಕಾರಿ ರಮೇಶ್,ದಯಾನಂದ್, ಸುದೇಶ್, ಶ್ರೀನಿವಾಸ್ ಶೆಟ್ಟಿ, ರಾಜ್ಯಸಂಸ್ಥೆಯ ಪ್ರತಿನಿಧಿ ರವೀಶ್, ಮಹೇಶ್, ಗಣೇಶ್‌ಗುಡಿ ಹಾಗೂ ಕಚೇರಿಯ ಎಲ್ಲ ಸಿಬ್ಬಂದಿ ಇದ್ದರು.