Advertisement

ಪರಿಸರ ರಕ್ಷಣೆಗೆ ಕಾನೂನಿಗಿಂತ ಜಾಗೃತಿ ಮುಖ್ಯ

11:42 AM Mar 19, 2018 | Team Udayavani |

ಬೆಂಗಳೂರು: ನೀರು ಶುದ್ಧೀಕರಣ ಹಾಗೂ ಘನತಾಜ್ಯ ಶುದ್ಧೀಕರಣಕ್ಕೆ ನೈಸರ್ಗಿಕ ಸೂಕ್ಷ್ಮಜೀವಾಣುಗಳನ್ನು ಬಳಸಿಕೊಂಡು ತಯಾರಿಸಲಾಗುವ ದ್ರವ ಮತ್ತು ಘನರೂಪದ ಉತ್ಪನ್ನಗಳ ಮೇಲಿನ ಶೇ.18ರಷ್ಟಿರುವ ಜಿಎಸ್‌ಟಿಯನ್ನು ಕಡಿಮೆ ಮಾಡುವ ಬಗ್ಗೆ ಜಿಎಸ್‌ಟಿ ಕೌನ್ಸಿಲ…ಗೆ ಶಿಫಾರಸು ಮಾಡುವುದಾಗಿ ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನ ಹೇಳಿ¨ªಾರೆ.

Advertisement

ಭಾರತ್‌ ವಿಕಾಸ್‌ ಪರಿಷದ್‌ ಹಾಗೂ ಸಮರ್ಥ್ ಭಾರತ್‌ ವತಿಯಿಂದ ನಗರದ ಜೈನ್‌ ವಿವಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುಡ್‌ ಗ್ರೀನ್‌  ಕುರಿತ ವಿಚಾರ ಸಂಕಿರಣದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ವಿಷಯ ನೇರವಾಗಿ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಆದಾಗ್ಯೂ ಇದೊಂದು ಪ್ರಮುಖ ವಿಷಯ ಆಗಿರುವುದರಿಂದ ಜಿಎಸ್‌ಟಿ ಕೌನ್ಸಿಲ… ಮುಂದೆ ಇದನ್ನು ಬಲವಾಗಿ ಮಂಡಿಸುತ್ತೇನೆ ಎಂದು ಭರವಸೆ ನೀಡಿದರು.

ಪರಿಸರ ಸಂರಕ್ಷಣೆಗೆ ಈಗಾಗಲೇ ನೂರಾರು ಕಾನೂನುಗಳಿವೆ. ಅಗತ್ಯ ಬಿದ್ದರೆ ಮತ್ತಷ್ಟು ಕಾನೂನುಗಳನ್ನು ರೂಪಿಸಬಹುದು. ಆದರೆ, ಪರಿಸರ ಸಂರಕ್ಷಣೆಗೆ ಕಾನೂನಿಗಿಂತ ಜನರಲ್ಲಿ ಜಾಗೃತಿ ಮುಖ್ಯ. ಇರುವ ಕಾನೂನುಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಅವುಗಳನ್ನು ಜನ ಯಾವ ರೀತಿ ಪಾಲಿಸಬೇಕು ಅನ್ನುವುದು ಮುಖ್ಯ.

ನಮ್ಮ ಪೂರ್ವಜರು ಬಳುವಳಿಯಾಗಿ ಕೊಟ್ಟಿರುವ ಉತ್ತಮ ಪರಿಸರವನ್ನು ಮುಂದಿನ ಜನಾಂಗಕ್ಕೆ ಬಿಟ್ಟುಕೊಡಬೆಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಪೋಲಿಯೋ ಮುಕ್ತ ಭಾರತಕ್ಕಾಗಿ ಯಶಸ್ವಿ ಅಭಿಯಾನ ನಡೆಯಿತು. ಅದೇ ಮಾದರಿಯಲ್ಲಿ ಮಾಲಿನ್ಯ ಮುಕ್ತ ಭಾರತದ ಅಭಿಯಾನ ನಡೆಸಬೇಕಿದೆ ಎಂದು ಕರೆ ನೀಡಿದರು.

ಪ್ರಾಕೃತಿಕ ಸಂಪತ್ತಿನ ಸ್ವೇಚ್ಛಾಚಾರವಾಗಿ ಬಳಕೆ ಮತ್ತು ಪ್ರಕೃತಿ ವಿಕೋಪಗಳ ಕಾರಣಕ್ಕೆ ಸಮಸ್ಯೆ ದಿನೇ ದಿನೇ ಜಟಿಲವಾಗುತ್ತಿದೆ. ಬೆಂಗಳೂರಿಗೆ ಎಷ್ಟು ಪ್ರಮಾಣದಲ್ಲಿ ಕಾವೇರಿ ನೀರು ಬರುತ್ತದೋ ಅಷ್ಟೇ ಪ್ರಮಾಣದ ಮಳೆ ನೀರು ಬೆಂಗಳೂರಿನಿಂದ ಹರಿದು ಹೊರಗಡೆ ಹೋಗುತ್ತದೆ. ಮಳೆ ನೀರು ಶೇಖರಣೆ, ಸಮರ್ಪಕ ಮರುಬಳಕೆ ಮಾಡಿಕೊಂಡರೆ, ಬೆಂಗಳೂರಿಗೆ ಕಾವೇರಿಯಿಂದ ನೀರು ತರುವ ಅವಶ್ಯಕತೆ ಇರುವುದಿಲ್ಲ.

Advertisement

ಅಂತರ್ಜಲ ವೃದ್ಧಿ, ಪರಿಸರ ಸಂರಕ್ಷಣೆ ದೃಷ್ಟಿಯಿಂದ ನೀರಿನ ಸಮರ್ಪಕ ಬಳಕೆ ಮತ್ತು ಕಾಡು ಸಂರಕ್ಷಣೆಗೆ ಒತ್ತುಕೊಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಎನ್‌. ತಿಪ್ಪೇಸ್ವಾಮಿ ಹೇಳಿದರು. ಶಾಸಕ ಬಿ.ಎನ್‌. ವಿಜಯಕುಮಾರ್‌ ಮಾತನಾಡಿ, ಬೆಂಗಳೂರಿನಲ್ಲಿ ಪ್ರತಿ ವರ್ಷ ಕನಿಷ್ಠ ನೂರು ದಿನ ಮಳೆ ಬಂದೇ ಬರುತ್ತದೆ. ಈ ಮಳೆ ನೀರನ್ನು ಸಮರ್ಥವಾಗಿ ಬಳಸಿಕೊಂಡರೆ ನಗರದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ ಅವರ ಪರಿಸರ ಸಂರಕ್ಷಣೆ ಅಭಿಯಾನ ಕುರಿತ ಮೊಬೈಲ… ಆ್ಯಪ್‌ ನ ಪ್ರಾತ್ಯಾಕ್ಷಿಕೆ ನೀಡಲಾಯಿತು. ಪ್ರವರ ತಂಡದಿಂದ ಪರಿಸರ ಸಂರಕ್ಷಣೆ ಕುರಿತು ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಭಾರತ ವಿಕಾಸ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ದೌಲತ್‌ ರಾವ್‌, ರಾಜ್ಯ ಕಾರ್ಯದರ್ಶಿ ದೇವತಾ ಶ್ರೀನಿವಾಸ, ಸಮರ್ಥ ಭಾರತ ಸಂಯೋಜಕ ಪುರುಷೋತ್ತಮ ಶಾಸಿ, ಭಾರತ್‌ ವಿಕಾಸ್‌ ಪರಿಷತ್‌ ಪೋಷಕ ಸುಬ್ರಾಂಶಾಸಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next