Advertisement

ವಿದ್ಯಾರ್ಥಿ ದೆಸೆಯಲ್ಲಿ ಮೂಡಿಸುವ ಅರಿವು ಶಾಶ್ವತವಾದುದು: ದೆಲೀಲಾ

03:35 PM Nov 02, 2019 | Team Udayavani |

ಮುಂಬಯಿ, ನ. 1: ವಿದ್ಯಾರ್ಥಿ ದೆಸೆಯಲ್ಲಿ ಮೂಡಿಸುವ ಅರಿವು ಶಾಶ್ವತವಾದುದು ಎಂದು ನಗರದ ಪ್ರತಿಷ್ಠಿತ ಸಂಸ್ಥೆ ಜಿಐಸಿ ಇದರ ಸಹಾಯಕ ಮುಖ್ಯ ವ್ಯವಸ್ಥಾಪಕಿ ದೆಲೀಲಾ ಸಿಕ್ವೇರಾ ತಿಳಿಸಿದರು.

Advertisement

ಸಯಾನ್‌ ಧಾರಾವಿಯಲ್ಲಿನ ದಿ ಹೋಪ್‌ ಫೌಂಡೇಶನ್‌ ನಡೆಸುತ್ತಿರುವ ಉಚಿತ ಬೋಧನಾ ತರಗತಿಗಳಿಗೆ ಭೇಟಿ ನೀಡಿದ ಸಿಕ್ವೇರಾ ಅವರು ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಎಸ್‌ಆರ್‌ ತಂಡದ ವರಿಷ್ಠ ವ್ಯವಸ್ಥಾಪಕ ಡಾ| ಪ್ರಕಾಶ್‌ ಕುಮಾರ್‌ ಮೂಡಬಿದ್ರಿ, ಉಪ ವ್ಯವಸ್ಥಾಪಕ ಪಂಕಜ್‌ ಕುಮಾರ್‌ ಮತ್ತು ಸಾಮಾಜಿಕ ಕಾರ್ಯಕರ್ತೆ ಯಶೋಧರಾ ದೇವಿ ಮತ್ತಿತರರು ಉಪಸ್ಥಿತರಿದ್ದರು. ಜಿಐಸಿ ಸಂಸ್ಥೆಯ ತಂಡವು ಸೇವಾ ನಿರತ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಮಕ್ಕಳು ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ಭಾಷಣ ಮಾಡಿದರು.

ಸ್ವಯಂಸೇವಕರು ಸಮಗ್ರತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅನಂತರ ಉಪ ವ್ಯವಸ್ಥಾಪಕರು ಕೂಡ ಇದೇ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಹಾಯಕ ಮುಖ್ಯ ವ್ಯವಸ್ಥಾಪಕರು, ಸ್ವಯಂಸೇವಕರ ಕಾರ್ಯಗಳನ್ನು ಮತ್ತು ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರಲ್ಲದೆ, ಸಮಗ್ರತೆ ಮತ್ತು ನಮ್ಮ ಜೀವನದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ನೀಡಿದರು. ಸಿಎಸ್‌ಆರ್‌ ತಂಡದ ವರಿಷ್ಟ ವ್ಯವಸ್ಥಾಪಕರು, ಭ್ರಷ್ಟಾಚಾರವು ನಮ್ಮ ಆರ್ಥಿಕತೆಯನ್ನು ಹೇಗೆ ನಾಶಪಡಿಸುತ್ತದೆ ಎಂಬುದನ್ನು ವಿವರಿಸಿದರು.

ಕೊನೆಗೆ ಜಿಐಸಿ ತಂಡ, ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಸಮಗ್ರತೆಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ವಿತರಿಸಲಾಯಿತು. ರಾಕೇಶ್‌ ಬಡಿಗೇರಿ, ರವಿ ದಂಡು, ಗಣೇಶ್‌ ವಸುಮನಿ, ಡ್ಯಾನಿಯಲ್‌, ಗೋವರ್ಧನ ರವುರ್ಕರ್‌, ಆಂಜನೇಯ ದಾಸ್‌, ಕೆ. ಸುರೇಶ್‌ ಉಪಸ್ಥಿತರಿದ್ದರು. ಅನಿಲ್‌ ಬೊಡಲ್‌ ಸ್ವಾಗತಿಸಿದರು. ತಾಯಪ್ಪ ಅನ್ಮೊಲ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

 

Advertisement

ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next