Advertisement

ಬಯಲು ಬಹಿರ್ದೆಸೆ ಮುಕ್ತಿಗೆ ಜಾಗೃತಿ

03:36 PM Jul 08, 2019 | Team Udayavani |

ಕೊಪ್ಪಳ: ಭಾಗ್ಯನಗರದ 17ನೇ ವಾರ್ಡ್‌ ಧನ್ವಂತರಿ ಕಾಲೋನಿಯಲ್ಲಿ ನಕ್ಷತ್ರ ಸ್ವಸಹಾಯ ಸಂಘದಿಂದ ರವಿವಾರ ವಾರ್ಡ್‌ ಮಕ್ಕಳಿಂದ ಬಯಲು ಬಹಿರ್ದೆಸೆ ಮುಕ್ತಿ ಮಾಡುವಂತೆ ಜನರಲ್ಲಿ ಮನವಿ ಮಾಡುವ ಮೂಲಕ ಶೌಚಾಲಯ ನಿರ್ಮಿಸಿಕೊಳ್ಳುವ ಜಾಗೃತಿ ಮೂಡಿಸಲಾಯಿತು.

Advertisement

ನಕ್ಷತ್ರ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಮಕ್ಕಳು ಬಯಲು ಬಹಿರ್ದೆಸೆಗೆ ತೆರಳುವ ಜನತೆಗೆ ಮನವಿ ಮಾಡಿ, ಬಯಲು ಶೌಚಾಲಯದಿಂದ ರೋಗಗಳು ಉಂಟಾಗುತ್ತವೆ. ಹೀಗಾಗಿ ಕೂಡಲೇ ನಿಮಗೆ ಶೌಚಾಲಯ ಇಲ್ಲದಿದ್ದರೇ ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ಶೌಚಾಲಯ ಕಟ್ಟಸಿಕೊಳ್ಳಿ ಎಂದು ಮನವಿ ಮಾಡಿದರು.

ಈ ವೇಳೆ ಮಕ್ಕಳಾದ ಅರ್ಪಿತಾ ಎಸ್‌.ಎನ್‌., ಅಭಿಷೇಕ್‌ ಎಸ್‌.ಎನ್‌., ಸಹನಾ, ಸಿಂಚನಾ, ಉಜ್ವಲ್, ಸಮಾನ್ವಿ, ಪ್ರಜ್ವಲ್, ಸಮೃದ್ಧ ಜಾಣದ, ಶ್ರೇಯಾ, ನಕ್ಷತ್ರ ಸ್ವಸಹಾಯ ಸಂಘದ ಲಲಿತಾ ಅಳವಂಡಿ, ಸುಜಾತ ಪ್ರಜ್ವಲ್, ವೀಣಾ ನಾಯಕ್‌, ರಾಖೀ ಜಾಣದ, ಶಂಕ್ರಮ್ಮ ಸಿಂಗಾಡಿ, ಪದ್ಮಾವತಿ ನುಗಡೋಣಿ, ಸಿಂಧೂಲ್ ಉಜ್ವಲ್, ರೇಖಾ ಮಡಿವಾಳರ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next