Advertisement

ಜಾಗರೂಕತೆಯೇ ರಕ್ಷಾ ಕವಚ

09:20 PM May 02, 2021 | Team Udayavani |

ಶತಮಾನದ ಮಹಾಮಾರಿ ಎಂದು ಜಾಗತಿಕವಾಗಿ ಪರಿಗಣಿತವಾಗಿರುವ ಕೋವಿಡ್ ಸೋಂಕಿನ ಎರಡನೇ ಅಲೆ ಕಳೆದ ಬಾರಿಗಿಂತಲೂ ಹೆಚ್ಚು ತೀವ್ರತೆಯನ್ನು  ಪಡೆದುಕೊಂಡಿರುವುದು ನಮಗೆಲ್ಲರಿಗೂ ಇದು ಮುನ್ನೆಚ್ಚರಿಕೆಯ ಸಂಕೇತವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ  ಹೆಚ್ಚು ಆತಂಕದ ವಲಯದಲ್ಲಿದೆ. ಸರಕಾರ 14 ದಿನಗಳ ಲಾಕ್‌ಡೌನ್‌ ಮಾದರಿಯ ಕಠಿನ ನಿಯಮಗಳನ್ನು ಘೋಷಿಸಿದೆ. ಪರಿಸ್ಥಿತಿ ಇನ್ನಷ್ಟು ಗಂಭೀರತೆ ಪಡೆದುಕೊಳ್ಳುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳತ್ತ ಗಮನಹರಿಸುವುದು ಅನಿವಾರ್ಯ.

Advertisement

ಲಾಕ್‌ಡೌನ್‌ ಅವಧಿಯಲ್ಲಿ  ಸರಕಾರ ಸೂಚಿಸಿದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುವುದು, ವ್ಯವಹಾರಗಳನ್ನು ನಡೆಸುವುದು. ಜನಸಂದಣಿ ಸೇರುವುದು, ಉಡಾಫೆ ವರ್ತನೆ  ಮುಂತಾದುವುಗಳು ಕಂಡು ಬರುತ್ತಿದೆ. ಲಾಕ್‌ಡೌನ್‌, ನಿಯಮ, ನಿರ್ದೇಶನ, ನಿರ್ಬಂಧಗಳನ್ನು ಸರಕಾರ ಜಾರಿಗೊಳಿಸಿರುವುದು ಜನರ ಹಿತವನ್ನು ಕಾಯುವ ಉದ್ದೇಶದಿಂದ ಎನ್ನುವುದು ಮರೆಯಬಾರದು. ಈ ಕ್ರಮಗಳ ಬಗ್ಗೆ ಅಸಡ್ಡೆ  ವಹಿಸುವುದು, ನಿಯಮಗಳನ್ನು ಉಲ್ಲಂಘಿಸಿ , ಒಂದು ರೀತಿಯ ಉಡಾಫೆ ಮನೋಭಾವನದ ವರ್ತನೆಯಿಂದ ಈಗಲಾದರೂ ನಾವೆಲ್ಲ ಹೊರಬರಬೇಕು. ಸೋಂಕು ಹರಡುವಿಕೆ ನಿಯಂತ್ರಣ ಮತ್ತು ಹತೋಟಿಯ ನಿಟ್ಟಿನಲ್ಲಿ ಸೋಂಕಿನ  ಸಂಪರ್ಕ ಕೊಂಡಿಯನ್ನು (ಚೈನ್‌) ಕಳಚುವುದೇ ಇದರ ಉದ್ದೇಶ.

ಜನತೆ ನೀಡುವ ಸಹಕಾರದಿಂದ ಮಾತ್ರ ಲಾಕ್‌ಡೌನ್‌ನ ಉದ್ದೇಶ ಸಫಲತೆಯನ್ನು ಕಾಣಲು ಸಾಧ್ಯವಾಗುತ್ತದೆ. ಕಳೆದ ವರ್ಷ ಸುಮಾರು 3 ತಿಂಗಳ ಕಾಲ ಜಿಲ್ಲೆ  ಲಾಕ್‌ಡೌನ್‌ಗೊಳಗಾಗಿ ಯಾವ ರೀತಿ ಸಂಕಷ್ಟವನ್ನು ಅನುಭವಿಸಿದೆ ಎಂಬ ದೃಷ್ಟಾಂತ ನಮ್ಮೆಲ್ಲರ ಕಣ್ಣ ಮುಂದಿದೆ. ಈ ವರ್ಷವೂ ನೈಟ್‌ ಕಪ್ಯೂì, ಕಠಿನ ನಿಯಮ , ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್‌ ಮಾದರಿಯ ಕಪ್ಯೂìನಿಂದ ಜಿಲ್ಲೆ  ನಲುಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರಕಾರ  ಏನೆಲ್ಲ ಮಾಡಬೇಕು ಅದನ್ನು ಮಾಡುತ್ತದೆ. ಅದಕ್ಕೆ ಪೂರಕವಾಗಿ ಸ್ಪಂದಿಸುವ ಉತ್ತರದಾಯಿತ್ವ ನಮ್ಮ ಮೇಲೂ ಇದೆ. ಜನರಿಗೆ ಸಮಸ್ಯೆಯಾಗಬಾರದು ಎಂಬುದಾಗಿ ಬೆಳಗ್ಗಿನ ಅವಧಿಯಲ್ಲಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ  ಅವಕಾಶ ಮಾಡಿ ಕೊಟ್ಟಿದೆ. ಒಂದಷ್ಟು ಚಟುವಟಿಕೆಗಳಿಗೂ ಅವಕಾಶ ನೀಡಿದೆ. ಈ ಅವಕಾಶಗಳನ್ನು ಬಳಸಿಕೊಂಡು, ನಿಯಮಗಳನ್ನು ಪಾಲಿಸಿಕೊಂಡು ಒಂದಷ್ಟು ಸಮಯ ಆಡಳಿತ ವ್ಯವಸ್ಥೆಯೊಂದಿಗೆ  ಸಹಕರಿಸುವುದು  ಅಗತ್ಯವಾಗಿದೆ. ಜನಪ್ರತಿನಿಧಿಗಳು  ಕೂಡ ಪರಿಸ್ಥಿತಿಯ ಗಂಭೀರತೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದರೆ ಅಲ್ಲಿ  ಸಂಘರ್ಷಕ್ಕೆ ಆಸ್ಪದವಾಗಲಾರದು.

ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್‌ ಮಾದರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಆಡಳಿತ ವ್ಯವಸ್ಥೆಯೂ ಮೃದು ಧೋರಣೆ ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಇದು ಕೂಡ ನಿಯಮಗಳ ಉಲ್ಲಂಘನೆಗೆ  ಕಾರಣವಾಗಿದೆ.

ಸೋಂಕು ತಡೆಯಲು ಸರಕಾರ, ತಜ್ಞರು, ಹೊರಡಿಸಿರುವ ಮಾರ್ಗಸೂಚಿಗಳು, ಲಾಕ್‌ಡೌನ್‌ ಮಾದರಿ ಕರ್ಫ್ಯೂ ವೇಳೆ ವಿಧಿಸಿರುವ ನಿಯಮಗಳಿಗೆ ಬದ್ಧರಾಗಿ ನಡೆದರೆ ಜಿಲ್ಲೆ ಮತ್ತೆ ಲಾಕ್‌ಡೌನ್‌ಗೆ ಒಳಗಾಗುವ ಅನಿವಾಯರ್ತೆಯಿಂದ ಪಾರಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ  ಸರಕಾರ, ಜಿಲ್ಲಾಡಳಿತ  ನೀಡಿರುವ ನಿರ್ದೇಶನಗಳನ್ನು  ಎಲ್ಲರೂ ಪಾಲಿಸಿ ಸಹಕರಿಸುವುದು ಪ್ರಸ್ತುತ ಪರಿಸ್ಥಿತಿಗೆ ತುರ್ತು ಅಗತ್ಯವಾಗಿದೆ. ಇಂದಿನ ಸ್ಥಿತಿಯಲ್ಲಿ ಗರಿಷ್ಠ ಜಾಗರೂಕತೆಯೇ ನಮಗೆ ರಕ್ಷಾ ಕವಚವಾಗಿದೆ. ಆದುದರಿಂದ ಯಾರೂ ಏನೇ ಹೇಳಿದರೂ ಅವರವರು ಜಾಗರೂಕತೆ ವಹಿಸುವುದು ಅವರ ಮತ್ತು ಅವರ ಮನೆಯವರ ಆರೋಗ್ಯದ ದೃಷ್ಟಿಯಲ್ಲಿ ಉತ್ತಮ. ಪರಿಸ್ಥಿತಿ ಕೈ ಮೀರಿದ ಮೇಲೆ ಚಿಂತಿಸಿ ಪ್ರಯೋಜನವಿಲ್ಲ. ಈಗಲೇ ಎಚ್ಚರಿಕೆ ವಹಿಸೋಣ.

Advertisement

  -ಸಂ

Advertisement

Udayavani is now on Telegram. Click here to join our channel and stay updated with the latest news.

Next