ಮೈಸೂರು: ನಾಡಪ್ರಭು ಕೆಂಪೇಗೌಡರ ಮನೆತನದಿಂದ ಬಂದಿರುವ ನಾವು ಒಕ್ಕಲಿಗ ಸಮುದಾಯಕ್ಕೆಸೇರಿದವರಾಗಿದ್ದು, ಒಕ್ಕಲುತನ ನಮ್ಮ ಕುಲಕಸುಬುಎಂದು ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷಹೇಮಂತ್‌ಕುಮಾರ್ ಗೌಡ ಹೇಳಿದರು.
ಒಕ್ಕಲಿಗರ ಯುವ ಶಕ್ತಿ ವೇದಿಕೆ ವತಿಯಿಂದದೇವರಾಜುಅರಸು ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ, ನಾಡಪ್ರಭು ಕೆಂಪೇಗೌಡರ512ನೇಜಯಂತಿಯಪ್ರಯುಕ್ತವಿವಿಧಕ್ಷೇತ್ರಗಳಲ್ಲಿಸೇವೆ ಸಲ್ಲಿಸಿ ಸಾಧನೆಯ ಕೈಂಕರ್ಯದಲ್ಲಿ ಸಾಗುತ್ತಿರುವ ಸಮಾಜದ ಪ್ರಮುಖರಿಗೆ ಕೆಂಪೇಗೌಡ ಭೀಷ್ಮಸೇವಾ ಪ್ರಶಸ್ತಿಯನ್ನು ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ನಾವು ಅವತಿನಾಡಪ್ರಭು ಕೆಂಪೇಗೌಡ ವಂಶಸ್ಥರಾಗಿದ್ದು, ಅನೇಕಪ್ರಾಂತ್ಯಗಳಲ್ಲಿ ನಮ್ಮ ಗೌಡ ಸಮುದಾಯವು ವಿವಿಧರೀತಿಯಲ್ಲಿ ತನ್ನದೇ ಆದ ಸಾಮಾಜಿಕ ಕೊಡುಗೆ ನೀಡಿದೆ.
ವಿಶ್ವದಲ್ಲಿಯೇಗುರುತಿನ ಚುಕ್ಕಿಯಾಗಿರುವ ಬೆಂಗಳೂರು ನಗರವನ್ನು ಕಟ್ಟಿದ ಮಹಾಪುರುಷಕೆಂಪೇಗೌಡ ಹೆಸರು ಅಜರಾಮರವಾಗಿ ಉಳಿಯುವ ಕೆಲಸಕ್ಕೆ ಸರಕಾರ ಮುಂದಾಗಿದ್ದು, ಕೆಐಎಎಲ್‌ನಲ್ಲಿ 108 ಅಡಿಗಳ ಪ್ರತಿಮೆ ಸ್ಥಾಪನೆಗೆಮುಂದಾಗಿರುವುದು ಹರ್ಷದ ವಿಚಾರ ಎಂದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಇ.ಸಿ.ನಿಂಗರಾಜುಗೌಡ, ಮಾಜಿ ಮಹಾಪೌರರವಿಕುಮಾರ್, ಮುಡಾ ಸದಸ್ಯ ನವೀನ್‌ಕುಮಾರ್, ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಚಂದ್ರಮೌಳಿಪ್ರಾರ್ಥನಾ ಮಂದಿರದ ಅಧ್ಯಕ್ಷ ನಾರಾಯಣ್‌ಮತ್ತಿತರರು ಹಾಜರಿದ್ದರು.