Advertisement

Magadi:ದೇಶದ್ರೋಹಿ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಪ್ರಶಸ್ತಿಗೆ ಮಾಡಿದ ಅವಮಾನ

01:10 PM Feb 10, 2024 | Team Udayavani |

ಮಾಗಡಿ: ಬಾಬ್ರಿ ಮಸೀದಿ ದ್ವಂಸ ಮಾಡಿಸಿದ ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ ನೀಡಿ ಕೇಂದ್ರ ಸರಕಾರ ಅದರ ಗೌರವವನ್ನು ಕಡಿಮೆ ಮಾಡಿದೆ ಎಂದು ದಲಿತ ಮುಖಂಡ, ಹಾಪ್ ಕಾಮ್ ಮಾಜಿ ನಿರ್ದಶಕ ಮಂಜೇಶ್ ಕುಮಾರ್ ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಹುಲಿಕಲ್ಲು ಗ್ರಾಮದಲ್ಲಿ ಫೆ. 10ರ ಶನಿವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಕ್ಷಾಂತರ ಮಂದಿಗೆ ಅಕ್ಷರ, ಅನ್ನ ದಾಸೋಹ ನೀಡಿ ಶಿಕ್ಷಣದ ಕ್ರಾಂತಿ ಮೂಡಿಸಿದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡದೆ ಅಡ್ವಾಣಿಗೆ ನೀಡಿರುವುದು ಆ ಪ್ರಶಸ್ತಿಗೆ ಗೌರವ ಕಡಿಮೆಯಾಗಿದೆ ಎಂದರು.

ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದರೆ ಅದರ ಗೌರವ ಮತಷ್ಟು ಹೆಚ್ಚುತಿತ್ತು. ಆದರೆ ಕೇಂದ್ರ ಸರಕಾರ ಅವಿವೇಕಿ, ಅಜ್ಞಾನಿ, ದೇಶದ್ರೋಹಿ, ಮತಾಂದ ಅಡ್ವಾನಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ದೇಶದ ದುರಂತ. ಇದರ ವಿರುದ್ದ ವಿಚಾರವಾಧಿ, ಮಠ ಮಂದಿರಗಳ ಸಂತರು, ಚಿಂತಕರು, ಸಾಹಿತಿಗಳು, ಹೋರಾಟಗಾರರು ಧ್ವನಿ ಎತ್ತಬೇಕು ಎಂದು ಹೇಳಿದರು.

ಎಲ್ ಕೆ.ಅಡ್ವಾನಿಯಿಂದ ಸಮಾಜಕ್ಕಾಗಲಿ, ಶೈಕ್ಷಣಿಕ ರಂಗಕ್ಕಾಗಲಿ ಯಾವ ಕೊಡುಗೆಯೂ ಇಲ್ಲ. ಕೊಮುಗಲಭೆಗೆ ಮಾತ್ರ ಅನುಕೂಲವಾಗಿದೆ. ಅಂಬೇಡ್ಕರ್ ತಿಥಿಯಂದೆ ಬಾಬ್ರಿ ಮಸೀದಿ ಧ್ವಂಸ ಪಡಿಸಿದ ಲಾಲ್ ಕೃಷ್ಣ ಅಡ್ವಾನಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿರುವುದು ಪ್ರಶಸ್ತಿಗೆ ಅವಮಾನವಾಗಿದೆ ಎಂದು ಲಾಲ್ ಕೃಷ್ಣ ಅಡ್ವಾಣಿಯವರನ್ನು ಏಕವಚನದಲ್ಲೇ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next