Advertisement

“ಯೋಗ ಪ್ರವೀಣ-2017′ಪ್ರಶಸ್ತಿ ಪ್ರದಾನ

01:01 PM Jun 21, 2017 | Team Udayavani |

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಕೆಎಂಪಿಕೆ ಚಾರಿಟಬಲ್‌ ಟ್ರಸ್ಟ್‌ನಿಂದ ಯೋಗ ಪ್ರವೀಣ ಪ್ರಶಸ್ತಿ-2017 ಪ್ರದಾನ ಮಾಡಲಾಯಿತು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಮೈಸೂರು ಯೋಗ ಅಸೋಸಿಯೇಷನ್‌ ಅಧ್ಯಕ್ಷ ಯೋಗ ಪ್ರಕಾಶ್‌, ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ನ ಯೋಗ ಶಿಕ್ಷಕ ನಾಗಭೂಷಣ, ಹಿಮಾಲಯ ಫೌಂಡೇಷನ್‌ ಸಂಸ್ಥಾಪಕ ಎನ್‌.ಅನಂತ್‌, ಚಿನ್ಮಯಿ ಯೋಗ ಶಾಲೆ ಶಿಕ್ಷಕಿ ಕೆ.ಆರ್‌.ಪಾರ್ವತಮ್ಮ ಹಾಗೂ ನಿರ್ವಾಣ ಯೋಗ ಶಾಲೆಯ ಬಿ. ಶ್ರೀನಾಥ್‌ ಅವರುಗಳಿಗೆ ಯೋಗ ಪ್ರವೀಣ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

Advertisement

ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್‌.ನಟರಾಜು ಮಾತನಾಡಿ, ಯೋಗದ ಆಚರಣೆಯಲ್ಲಿ ಇಡೀ ವಿಶ್ವಕ್ಕೆ ಭಾರತ ಮಾದರಿಯಾಗಿದ್ದು, ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ವಿಶ್ವದ 192 ರಾಷ್ಟ್ರಗಳು ಜೂ.21 ರಂದು ವಿಶ್ವ ಯೋಗ ದಿನವನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಅದರಂತೆ ಈ ಬಾರಿಯ ವಿಶ್ವ ಯೋಗ ದಿನದಂದು ಇಡೀ ವಿಶ್ವವೇ ಮೈಸೂರು ನಗರವನ್ನು ಬೆರಗುಗಣ್ಣಿನಿಂದ ನೋಡುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಶ್ವದಾಖಲೆ ಮಾಡುವ ನಿರೀಕ್ಷೆಯಲ್ಲಿ ನಡೆಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಜೂ.19ರಂದು ಆರಮನೆ ಆವರಣದಲ್ಲಿ ಸಾವಿರಾರು ಯೋಗಾಸಕ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ವಿಶ್ವದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಇದರೊಂದಿಗೆ ಮತ್ತೂಂದು ಗಿನ್ನಿಸ್‌ ದಾಖಲೆ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆಸಿರುವ ಜಿಲ್ಲಾಡಳಿತದೊಂದಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.

ಮುಡಾ ಮಾಜಿ ಅಧ್ಯಕ್ಷ ಕೆ.ಆರ್‌.ಮೋಹನ್‌ ಕುಮಾರ್‌, ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್‌, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸಮಾಜ ಸೇವಕ ರಘುರಾಮಯ್ಯ ವಾಜಪೇಯಿ, ಬಸವರಾಜು, ಎಚ್‌.ಎನ್‌. ಶ್ರೀಧರ್‌ಮೂರ್ತಿ, ಸುಮಂತ್‌ಶಾಸಿ, ವಿಕ್ರಂ ಅಯ್ಯಂಗಾರ್‌ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next