ಮುಂಬಯಿ, ಮಾ. 22: ಕರ್ನಾಟಕ ಮಹಾಮಂಡಲ ಮೀರಾ- ಭಾಯಂದರ್ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮತ್ತು ಜಾನಪದ ನೃತ್ಯ ಸ್ಪರ್ಧೆಯು ಮಾ. 14ರಂದು ಭಾಯಂದರ್ ಪೂರ್ವದ ನವಘರ್ ರೋಡ್ ಸಭಾಗೃಹದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ-ಭಾಯಂದರ್ ಪ್ರಥಮ, ಯುವ ಮಿತ್ರ ಮಂಡಳಿ ಭಾರತಿಪಾರ್ಕ್ ದ್ವಿತೀಯ, ಬಂಟ್ಸ್ ಫೋರಂ ಮೀರಾ-ಭಾಯಂದರ್ ತೃತೀಯ ಬಹುಮಾನ ಪಡೆದವು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ತೀರ್ಪುಗಾರರಾಗಿ ಸಹಕರಿಸಿದ ರೇಖಾ ರಾವ್ ಮತ್ತು ನಿಕಿತಾ ಸದಾನಂದ ಅಮೀನ್ ಅವರು ಸಲಹೆ ಸೂಚನೆ ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ, ವಿವಿಧ ವಿನೋದಾವಳಿಗಳು ನಡೆದವು.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬಂಟ್ಸ್ ಫೋರಂ ಮೀರಾ- ಭಾಯಂದರ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ- ಭಾಯಂದರ್, ತುಳುನಾಡ ಸಮಾಜ ಮೀರಾ-ಭಾಯಂದರ್, ಯುವ ಮಿತ್ರ ಮಂಡಳಿ ಭಾರತಿ ಪಾರ್ಕ್, ಶ್ರೀ ಶನೀಶ್ವರ ಸೇವಾ ಸಮಿತಿ ಮೀರಾರೋಡ್, ಶ್ರೀ ಕಟೀಲೇಶ್ವರಿ ಭಜನಾ ಸಮಿತಿ ಭಾಯಂದರ್ ತಂಡಗಳು ಭಾಗವಹಿಸಿದ್ದವು.
ವೇದಿಕೆಯಲ್ಲಿ ಲೇಖಕಿ ಲತಾ ಸಂತೋಷ್ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗ ಭಜನಾ ಸಮಿತಿಯ ಸಂಚಾಲಕಿ ಶಶಿಕಲಾ ಆನಂದ ಮಾಡಾ, ತುಳು-ಕನ್ನಡ ವೆಲ್ಫೆರ್ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ವಸಂತಿ ಎಸ್. ಶೆಟ್ಟಿ, ಸಮಾಜ ಸೇವಕಿ ಸರೋಜಿನಿ ವಾಸುದೇವ ಪೂಜಾರಿ, ಸುಮಂಗಳಾ ಅಶೋಕ್ ಕಣಂಜಾರು, ಸಂಚಾಲಕಿ ಆಶಾ ಆರ್. ಶೆಟ್ಟಿ, ಕಾರ್ಯದರ್ಶಿ ನಯನಾ ಆರ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶೀಲಾ ಎಂ. ಶೆಟ್ಟಿ, ಕೋಶಾಧಿಕಾರಿ ಅನುಷಾ ಶೆಟ್ಟಿ, ಜತೆ ಕಾರ್ಯದರ್ಶಿ ಹೇಮಾವತಿ ಹೆಗ್ಡೆ, ಜತೆ ಕೋಶಾಧಿಕಾರಿ ಯಶವಂತಿ ಶೆಟ್ಟಿ, ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ಸುಮತಿ ಶೆಟ್ಟಿ, ಗೌರವಾಧ್ಯಕ್ಷ ಡಾ| ಅರುಣೋದಯ ಎಸ್. ರೈ, ಮಂಡಳದ ಅಧ್ಯಕ್ಷ ರವಿಕಾಂತ್ ಶೆಟ್ಟಿ ಇನ್ನ ಮೊದಲಾದವರು ಉಪಸ್ಥಿತರಿದ್ದರು. ಸುರೇಖಾ ಶೆಟ್ಟಿ, ಶಶಿಕಲಾ ಶೆಟ್ಟಿ, ದಯಾ ಶೆಟ್ಟಿ ಪ್ರಾರ್ಥನೆಗೈದರು. ಸ್ವಾತಿ ಶೆಟ್ಟಿ, ಸೌಮ್ಯಾ ಶೆಟ್ಟಿ, ಆಶಾ ಎ. ಕೋಟ್ಯಾನ್, ಭವಾನಿ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯದರ್ಶಿ ನಯನಾ ಆರ್. ಶೆಟ್ಟಿ ಸ್ವಾಗತಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸ್ಥಾಪಕ ಚಂದ್ರಶೇಖರ್ ವಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.