Advertisement

ಪದ್ಮ ಶ್ರೀ ಪಂ|ವೆಂಕಟೇಶಕುಮಾರಗೆರಾಮಚಂದ್ರ ಸ್ವರಶ್ರೀ ಪ್ರಶಸ್ತಿಪ್ರದಾನ

05:33 PM May 04, 2018 | Team Udayavani |

ಹುಬ್ಬಳ್ಳಿ: ಹಣಕ್ಕಾಗಿ ಸಂಗೀತ ಕಚೇರಿ ನಡೆಸದೆ ಸಂಗೀತ ಬೆಳೆಸುವುದಕ್ಕಾಗಿ ಸಂಗೀತ ಪ್ರಸ್ತುತ ಪಡಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಡಾ|ಪಂ. ವೆಂಕಟೇಶಕುಮಾರ ಹೇಳಿದರು. ಇಲ್ಲಿನ ಡಾ| ಡಿ.ಎಸ್‌.ಕರ್ಕಿ ಕನ್ನಡ ಭವನದಲ್ಲಿ ಗುರುವಾರ ದಿ.ಆರ್‌.ಜಿ. ದೇಸಾಯಿ ಗವಾಯಿಗಳ 98ನೇ ಜಯಂತಿ ಹಾಗೂ ಶಾಂತಾರಾಮ ಸಂಗೀತ ಶಾಲೆಯ 28ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ರಾಮಚಂದ್ರ ಸ್ವರಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

Advertisement

ಮಕ್ಕಳು ಘರಾಣಾಗಳಲ್ಲಿ ಒಂದು ಹಂತದವರಿಗೆ ಸಂಗೀತ ಕಲಿಯಬೇಕು. ನಂತರ ಮರೆಯಬೇಕು. ಘರಾಣಾದಿಂದ ಶಿಸ್ತು, ಬದ್ಧತೆ ಬರುತ್ತದೆ. ಸಂಗೀತ ಕಲಿಯುವುದರಲ್ಲಿ ಸರಿಯಾದ ದಾರಿಯಲ್ಲಿ ಹೋಗಬೇಕಾದರೆ ಘರಾಣಾ ಅವಶ್ಯ ಎಂದರು. ಗದುಗಿನ ಆಶ್ರಮ ಗುರುಗಳ ಆಶೀರ್ವಾದ ಹಾಗೂ ಜನ್ಮಜನ್ಮದ ಸಂಸ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಬಂದಿದ್ದು, ಅದರಿಂದ ನಾನು ದೊಡ್ಡವನಾಗಿಲ್ಲ. ಬದಲಾಗಿ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.

ಗುರು ಶಿಷ್ಯರ ಪರಂಪರೆ ಬೆಳೆಸಿದವರು ಪಂ| ಪಂಚಾಕ್ಷರಿ ಹಾಗೂ ಪಂ| ಪುಟ್ಟರಾಜ ಗವಾಯಿಗಳು. ಅವರು ಎಂದಿಗೂ ತಾವು ಬೆಳೆಯುವ ಕುರಿತು ಚಿಂತೆ ಮಾಡದೆ ತಮ್ಮ ಶಿಷ್ಯರನ್ನು ಬೆಳೆಸಿದರು. ಅದೇ ರೀತಿ ಗುರುಗಳಿಂದ ಸಂಗೀತ ಕಲಿಯುವವರು ಶ್ರದ್ಧೆ-ಆಸಕ್ತಿಯಿಂದ ಕಲಿಯಬೇಕು. ಮಕ್ಕಳು ಮೊದಲು ತಂಬೂರಿ ನುಡಿಸುವುದು, ತಬಲಾ ಬಾರಿಸುವುದು ಕಲಿಯಬೇಕು.ಅಂದಾಗ ಮಾತ್ರ ಅವರು ಮುಂದೆ ಸಾಗಲು ಸಾಧ್ಯ ಎಂದರು.

ಸಿದ್ಧಾರೂಢಸ್ವಾಮಿ ಮಠದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ವೇದಿಕೆಗಾಗಿ ಕಾಯಬೇಕು. ಅವಕಾಶ ಸಿಕ್ಕಾಗ ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ನಂತರ ಸರಳಾ ಮಧುಸೂಧನ ಹಾಗೂ ಪಂ| ವೆಂಕಟೇಶಕುಮಾರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ| ಎಸ್‌.ಪಿ.ಬಳಿಗಾರ, ಸಿದ್ದಣ್ಣಾ ಮೆಣಸಿನಕಾಯಿ, ಜಯಲಕ್ಷ್ಮೀ ಕಾಮತ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next