ಚೆನ್ನೈ: ತಮಿಳುನಾಡು ಸರ್ಕಾರ ಕೊಡಮಾಡುವ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿಯನ್ನು ಇಸ್ರೋ ಮುಖ್ಯಸ್ಥ ಕೆ.ಶಿವನ್‌ಗೆ ಗುರುವಾರ ಪುರಸ್ಕರಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಿವನ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ. ಇದನ್ನು ಅವರು ಆ.15ರಂದೇ ಸ್ವೀಕರಿಸಬೇಕಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಚೆನ್ನೈನಲ್ಲಿರುವ ಸಚಿವಾಲಯಕ್ಕೆ ಭೇಟಿ ನೀಡಿದ ಶಿವನ್, ಪ್ರಶಸ್ತಿ ಸ್ವೀಕರಿಸಿದರು. ಚಿನ್ನದ ಪದಕ, 5 ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರವನ್ನು ಪ್ರಶಸ್ತಿ ಒಳಗೊಂಡಿದೆ. ಕಲಾಂ ನಿಧನ ನಂತರ 2015ರಲ್ಲಿ ತಮಿಳುನಾಡು ಸರ್ಕಾರ ಕಲಾಂ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿತ್ತು. ಈಗಾಗಲೇ ಹಲವು ಗಣ್ಯರಿಗೆ ಕಲಾಂ ಪುರಸ್ಕಾರ ನೀಡಲಾಗಿದೆ. ಶಿವನ್ ನೇತೃತ್ವದಲ್ಲಿ ಚಂದ್ರಯಾನ 2 ಯಶಸ್ವಿಯಾಗಿ ನಡೆದಿದ್ದು, ಇವರು ರಾಕೆಟ್ ವಿಜ್ಞಾನದಲ್ಲಿ ಪರಿಣಿತಿ ಹೊಂದಿರುವ ಅವರನ್ನು ರಾಕೆಟ್ ಮ್ಯಾನ್ ಎಂದೂ ಕರೆಯಲಾಗುತ್ತದೆ.