Advertisement

ಅಸಂಘಟಿತ ಕಾರ್ಮಿಕರಿಗೆ ಶ್ರಮ ಸನ್ಮಾನ ಪ್ರಶಸ್ತಿ

09:27 PM Mar 08, 2020 | Lakshmi GovindaRaj |

ಮೈಸೂರು: ರಾಜ್ಯದಲ್ಲಿ ಸಂಘಟಿತ ಕಾರ್ಮಿಕರು ಶೇ.20 ರಷ್ಟು ಇದ್ದರೆ, ಅಸಂಘಟಿತರು ಶೇ.80ರಷ್ಟಿದ್ದಾರೆ. ಇವರಿಗಾಗಿ ನಾವು ಯಾವುದೇ ಕಾನೂನು, ಕಾಯಿದೆಗಳನ್ನು ರೂಪಿಸಿಲ್ಲ ಎಂದು ಬೆಂಗಳೂರಿನ ಕಾರ್ಮಿಕ ಇಲಾಖೆ ಉಪ ಆಯುಕ್ತ ರವಿಕುಮಾರ್‌ ಹತಾಶೆ ವ್ಯಕ್ತಪಡಿಸಿದರು.

Advertisement

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಹಾಗೂ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದಲ್ಲಿ ಭಾನುವಾರ ನಗರದ ಶಾರದ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಮಿಕ ಸನ್ಮಾನ ದಿನ ಆಚರಣೆಯಲ್ಲಿ ಮಾತನಾಡಿದರು.

ಎರಡು ಯೋಜನೆ ಜಾರಿಗೆ: ದೇಶದಲ್ಲಿ ಸಂಘಟಿತ ಕಾರ್ಮಿಕರು ಶೇ.20ರಷ್ಟಿದ್ದರೆ, ಅಸಂಘಟಿತರು ಶೇ.80 ರಷ್ಟಿದ್ದಾರೆ. ಸರ್ಕಾರದ ಯೋಜನೆಗಳು ಶೇ.20 ರಷ್ಟು ಸಂಘಟಿತ ಕಾರ್ಮಿಕರಿಗೆ ದೊರೆಯುತ್ತಿದೆ. ಹೆಚ್ಚಿನ ಕೆಲಸ ಮಾಡುವ ಅಸಂಘಟಿತ ವಲಯದ ಶೇ.80 ರಷ್ಟು ಮಂದಿಗೆ ಯಾವುದೇ ಯೋಜನೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ಕಾರ್ಮಿಕ ಸನ್ಮಾನ ದಿನಾಚರಣೆ: ಸಂಘಟಿತ ವಲಯದ ಕಾರ್ಮಿಕರು ಮೇ 1 ರಂದು ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತದೆ. ಅದೇ ರೀತಿ ಅಂಘಟಿಯ ವಲಯದ ಕಾರ್ಮಿಕರಿಗೂ ದಿನಾಚರಣೆ ಮಾಡಬೇಕೆಂದು ಸರ್ಕಾರ ಕಾರ್ಮಿಕ ಸನ್ಮಾನ ದಿನಾಚರಣೆ ಆಯೋಜಿಸಿದೆ ಎಂದರು.

ಯೋಜನೆ ಸದುಪಯೋಗಿಸಿಕೊಳ್ಳಿ: ಕಾರ್ಮಿಕ ಸಹಾಯಕ ಆಯುಕ್ತರಾದ ಎ.ಸಿ.ತಮ್ಮಣ್ಣ ಮಾತನಾಡಿ, ಕಾರ್ಮಿಕ ಸಂಘಟನೆಯಲ್ಲೇ ಅಸಂಘಟಿತ ಕಾರ್ಮಿಕರು ಬಹುಸಂಖ್ಯಾತರು. 13 ವಲಯದಿಂದ 5468 ಮಂದಿ ಅಸಂಘಟಿತರಿಂದ ಅರ್ಜಿ ಸ್ವೀಕರಿಸಿ 3367 ಮಂದಿಗೆ ಅಸಂಘಟಿತ ಕಾರ್ಡ್‌ ನೀಡಲಾಗಿದೆ. ರಾಜ್ಯ ಖಾಸಗಿ ವಾಣಿಜ್ಯ ವಲಯ ಅಪಘಾತ ಜೀವ ರಕ್ಷಕದಡಿಯಲ್ಲಿ ಉಚಿತವಾಗಿ 1460 ಮಂದಿಗೆ ಮೆಡಿಕಲ್‌ ಕಿಟ್‌ ನೀಡಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮದಾನ ಮನಧನ್‌ ಯೋಜನೆಗೂ ಹಲವು ಮಂದಿಯನ್ನು ಉತ್ತೇಜಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿಯನ್ನು ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

Advertisement

ಶ್ರಮ ಸನ್ಮಾನ ಪ್ರಶಸ್ತಿ ಪ್ರದಾನ: ಅಸಂಘಟಿತ ವಲಯದಲ್ಲಿ ಎಲೆ ಮರೆಯ ಕಾಯಿಯಂತೆ ದುಡಿಯುವ ಕಾರ್ಮಿಕರನ್ನು ಶ್ರಮ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಂಬಾರರು, ಚಿಂದಿ ಆಯುವವರು, ಭಟ್ಟಿ ಕಾರ್ಮಿಕರು, ಹಮಾಲಿಗಳು, ಕಮ್ಮಾರರು, ಮನೆ ಕೆಲಸದವರು, ಅಕ್ಕಸಾಲಿಗರು, ಕ್ಷೌರಿಕರು, ಮೆಕ್ಯಾನಿಕ್‌ಗಳು, ಅಗಸರು, ಟೈಲರ್‌ ವೃತ್ತಿಯಲ್ಲಿ ಸೇವೆ ಸಲ್ಲಿಸುವ 136 ಮಂದಿಗೆ ವಿಶಿಷ್ಟ ಸಾಧಕರನ್ನು ಎಂದು ಗುರುತಿಸಿ ಸನ್ಮಾನಿಸಲಾಯಿತು.

ನಗದು, ಪ್ರಶಸ್ತಿ ಪ್ರದಾನ: ಮೈಸೂರು ಮಹಾ ನಗರ ಪಾಲಿಕೆ ಮೇಯರ್‌ ತಸ್ನಿಂ ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ವಿತರಣೆ ಮಾಡಿದರು. ಪ್ರಥಮ ಪ್ರಶಸ್ತಿ 15 ಸಾವಿರ ರೂ. ಮೌಲ್ಯದ ಚಿನ್ನದ ಪದಕವನ್ನು 12 ಜನ ಕಾರ್ಮಿಕರಿಗೆ ನೀಡಿದರು. ದ್ವಿತೀಯ ಪ್ರಶಸ್ತಿ 10 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕವನ್ನು 12 ಜನ ಕಾರ್ಮಿಕರಿಗೆ ನೀಡಿದರು. ತೃತೀಯ ಪ್ರಶಸ್ತಿ 8 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕವನ್ನು 12 ಕಾರ್ಮಿಕರಿಗೆ ಪ್ರಶಸ್ತಿಯಾಗಿ ನೀಡಲಾಯಿತು.

ಕಾರ್ಮಿಕ ಅಧಿಕಾರಿ ಎಸ್‌.ಎಂ.ಮಂಜುಳಾದೇವಿ, ಟ್ಯಾಕ್ಸಿ ಚಾಲಕ ಮಾಲೀಕ ಸಂಘದ ಅಧ್ಯಕ್ಷ ಆಯುಬ್‌ ಪಾಷಾ, ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಪ್ರಮೋದ್‌ ಚಿಕ್ಕಮಗಳೂರು, ಸವಿತಾ ಸಮಾಜ ಅಧ್ಯಕ್ಷ ನಾಗೇಂದ್ರ, ದಿನಗೂಲಿ ಮತ್ತು ಗೌರವ ಧನ ನೌಕರರ ಮಹಮಂಡಳಿ ಅಧ್ಯಕ್ಷ ಚಿಕ್ಕಮನ್ನೂರು, ಅಕ್ಕ ಸಾಲಿಗ ಸಂಘದ ಪದಾಧಿಕಾರಿ ಸುರೇಶ್‌ ಆಚಾರಿ, ಮಂಡ್ಯ ಕಾರ್ಮಿಕ ಅಧಿಕಾರಿ ನಾಗೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next