Advertisement

“The Elephant Whisperers”ಗೆ ಪ್ರಶಸ್ತಿ

12:14 AM Jul 02, 2023 | Team Udayavani |

ಲಂಡನ್‌: ದಿ ಎಲಿಫ್ಯಾಂಟ್‌ ವಿಸ್ಪರರ್ ಸಾಕ್ಷ್ಯಚಿತ್ರದ ಮೂಲಕ ಆನೆಗಳು ಮತ್ತು ಮನುಷ್ಯರ ನಡುವಿನ ಬಾಂಧವ್ಯ ತೆರೆದಿಟ್ಟಿದ್ದ ನಿರ್ದೇಶಕಿ ಕಾರ್ತಿಕಿ ಗೋನ್ಸಲ್ವೇಸ್‌ ಅವರಿಗೆ ಬ್ರಿಟನ್‌ನ ಪ್ರತಿಷ್ಠಿತ ಎಲಿಫ್ಯಾಂಟ್‌ ಫ್ಯಾಮಿಲಿ ಎನ್ವಿರಾನಮೆಂಟಲ್‌ ಪ್ರಶಸ್ತಿ ನೀಡಲಾಗಿದೆ.

Advertisement

ವಿಶೇಷವೆಂದರೆ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಹಾಗೂ ಅವರ ಪತ್ನಿ ರಾಣಿ ಕ್ಯಾಮಿಲಾ ಅವರೇ ಈ ಪ್ರಶಸ್ತಿ ನೀಡಿದ್ದಾರೆ. ವನ್ಯಜೀವಿ ಸಂರಕ್ಷಣ ಚಾರಿಟಿ ವತಿಯಿಂದ ಕೊಡಮಾಡುವ ಈ ಪ್ರಶಸ್ತಿಯನ್ನು ಲ್ಯಾಂಕ್‌ಸ್ಟಾರ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜಮನೆತನವು ಕಾರ್ತಿಕಿ ಅವರಿಗೆ ನೀಡಿದೆ. ಸಾಕ್ಷ್ಯಚಿತ್ರದಲ್ಲಿ ತೋರಿಸಲಾದ ಅನಾಥ ಆನೆ ರಘು ಹಾಗೂ ಅದರ ಪೋಷಕರಾದ ಅರಣ್ಯ ಆದಿವಾಸಿಗಳ ನಡುವಿನ ಬಾಂಧವ್ಯವನ್ನೇ ಪ್ರಶಸ್ತಿ ರೂಪದಲ್ಲಿ ನೀಡಲಾದ ಆನೆಯ ಪ್ರತಿಮೆಯಲ್ಲೂ ಚಿತ್ರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next