ಮುಂಬಯಿ, ಮಾ. 21: ಸಿರಿಬೈಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸಿರಿಬೈಲು ಕಡ್ತಲ ಇದರ ಸಾಂಸ್ಕೃತಿಕ ಸಂಭ್ರಮ 2020 ಸಮಾರಂಭವು ಇತ್ತೀಚೆಗೆ ಶ್ರೀ ಭರ್ಬರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ ಸಿರಿಬೈಲು ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿ ಸಮ್ಮಾನಿಸಲಾಯಿತು. ಕಲಾ ಸಾಧಕ ಪ್ರಶಸ್ತಿಯನ್ನು ಮುಂಬಯಿ ರಂಗಭೂಮಿಯ ರಂಗನಟ, ಲೇಖಕ, ನಿರ್ದೇಶಕ ಅನಿಲ್ ಕುಮಾರ್ ಹೆಗ್ಡೆ ಪೆರ್ಡೂರು ಇವರಿಗೆ ನೀಡಿ ಸಮ್ಮಾನಿಸಲಾಯಿತು. ಯುವ ಉದ್ಯಮಿ ಪ್ರಶಸ್ತಿಯನ್ನೂ ಎನರ್ಜಿ ಗ್ರೀನ್ ಬಯೋಟೆಕ್ ಇದರ ಮಾಲಕ ಯುವ ಪ್ರತಿಭೆ ಅಶ್ವತ್ಥ್ ಹೆಗ್ಡೆಯವರಿಗೆ ನೀಡಲಾಯಿತು.
ವಸಂತ್ ಮುನಿಯಾಲ್, ಉಪೇಂದ್ರ ವಾಗ್ಲೆ, ಅಶ್ವಥ್ ಕುಮಾರ್ ಹೆಗ್ಡೆ, ಪುರುಷೋತ್ತಮ್ ನಾಯ್ಕ, ಸಚಿನ್ ರಾಜ್ ಶೆಟ್ಟಿ ಇವರುಗಳನ್ನು ಲೆಕ್ಕ ಪರಿಶೋಧಕರು ಎಂಬ ಸಾಧನೆಗೆ ಸಮ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧನೆಗೈದ ಕು| ಅನಿಷಾ ಪೂಜಾರಿ ಮತ್ತು ವಾದ್ಯ ಸಂಗೀತ ಕಲಾವಿದೆ ಡಾ| ಸುಧಾಕರ್ ಶೇರಿಗಾರ್ ಇವರುಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇವಸ್ಥಾನದ ಆಡಳಿತ ಮೋಕ್ತೇಸರ ವಸಂತ ಬೆಳಿರಾಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸದಾಶಿವ ಪ್ರಭು ಉಡುಪಿ ಜಿಲ್ಲಾ ಅಪಾರ ಜಿಲ್ಲಾಧಿಕಾರಿ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಧರ್ಮರಾಜ ಕುದ್ರೆ, ರಾಷ್ಟ್ರೀಯ ರೈಲ್ವೇ ಚಿತ್ರ ಪುರಸ್ಕೃತ ಪೃಥ್ವಿ ಕೊಣ್ಣನೂರು, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶಂಕರ್ ಹೆಗ್ಡೆ, ಸಂತೋಷ್ ಹೆಗ್ಡೆ, ಸಾಹಿತಿ ಮೊಹಮದ್ ಬಡ್ಡೂರು, ಜಿಯಾನಂದ ಹೆಗ್ಡೆ ಬೈರಂಪಳ್ಳಿ ಮತ್ತು ಡಾ| ಪ್ರಮೋದ್ ಕುಮಾರ್ ಹೆಗ್ಡೆ ಕಡ್ತಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಸಿರಿಬೈಲು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳ್ನಾಡಿದರು. ಕಾರ್ಯದರ್ಶಿ ಮನೋಹರ್ ಪೂಜಾರಿ ವಂದಿಸಿದರು.
ಅಂಗನವಾಡಿ ಮಕ್ಕಳಿಂದ ನೃತ್ಯ ಮತ್ತು ಮುಂಬಯಿ ಹೆಸರಾಂತ ನಾಟಕ ತಂಡ ರಂಗಮಿಲನ ಇವರಿಂದ ನಯನಾ ಸಚಿನ್ ಇವರು ರಚಿಸಿ, ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶನದ ಕುತೂಹಲ ಬರಿತ ತುಳು ಹಾಸ್ಯ ನಾಟಕ ದಾದನ ಉಂಡುಗೆ ಪ್ರದರ್ಶನಗೊಂಡಿತು. ಕಾರ್ಯಕ್ರಮ ಸಂಯೋಜನೆಯನ್ನು ಹೆಸರಾಂತ ಕಲಾವಿದ ಉಮೇಶ್ ಹೆಗ್ಡೆ ಕಡ್ತಲ ಮತ್ತು ಹರೀಶ್ ಪೂಜಾರಿ ಸಿರಿಬೈಲು ಮಾಡಿದರು.