ಮಹಾಲಿಂಗಪುರ: ವರಗುಣದಿಂದ ಮನುಷ್ಯನ ಕೀರ್ತಿ ಬೆಳೆಯುತ್ತದೆ ಎಂದು ಕೋಲೂರಿನ ಶರಣ ಕೃಷ್ಣಗೌಡ ಪಾಟೀಲ ಹೇಳಿದರು.ರನ್ನಬೆಳಗಲಿ ಸಿದ್ದಾರೂಢ-ಶಂಭುಲಿಂಗಾಶ್ರಮದ ತಿಂಗಳ ಹುಣ್ಣಿಮೆ ಕಾರ್ಯಕ್ರಮ ಮತ್ತು ದಿ| ಎಲ್.ಕೆ.ಕಂಬಾರ ಪ್ರತಿಷ್ಠಾನದ ಪ್ರಶಸ್ತಿ ಸಮಾರಂಭದದಲ್ಲಿ ಮಾತನಾಡಿದ ಅವರು, ವರ ಗುಣವೆಂವದರೆ ಉದಾರ ಗುಣವಾಗಿದೆ. ನೀತಿ ತಪ್ಪದೇ, ಪ್ರೀತಿಯಿಂದ ಸತ್‌ಪಾತ್ರರಿಗೆ ದಾನ ಮಾಡುವುದೇ ಶ್ರೇಷ್ಠದಾನವಾಗಿದೆ ಎಂದರು. ಮುಧೋಳ ತಾಲೂಕು ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ, ಹಿರಿಯ ಜಾನಪದ ಸಾಹಿತಿ ಸಿದ್ದು ದಿವಾನ, ಸಾಹಿತಿಗಳಾದ ಎನ್.ವಿ.ತುಳಸಿಗೇರಿ, ಅಣ್ಣಾಜಿ ಫಡತಾರೆ ಮಾತನಾಡಿದರು.
ಪ್ರಶಸ್ತಿ ಪ್ರದಾನ: ಸಿದ್ದಾರೂಢ ಶಂಭುಲಿಂಗಾಶ್ರಮ ಟ್ರಸ್ಟ್ ಕಮಿಟಿ, ದಿ.ಎಲ್.ಕೆ.ಕಂಬಾರ ಪ್ರತಿಷ್ಠಾನಗಳ ಆಶ್ರಯದಲ್ಲಿ
ಎಸ್.ಎಸ್.ಬಳೂರಗಿ (ಶಿಕ್ಷಕ ರತ್ನ), ಸದಪ್ಪ ಮಾ.ಕಂಪು (ಜಾನಪದ ರತ್ನ), ರಬಕವಿಯ ಎಸ್.ಎಂ.ದಾಶಾಳ (ಸಾಹಿತ್ಯ ರತ್ನ), ಕೋಲೂರಿನ ಶರಣ ಕೃಷ್ಣಗೌಡ ಪಾಟೀಲ (ಅಧ್ಯಾತ್ಮ ರತ್ನಾಕರ) ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಮಲ್ಲಯ್ಯ ಸ್ವಾಮಿ ಮಧುರಖಂಡಿ, ವೆಂಕಣ್ಣ ಲೋಕಾಪೂರ, ಮಹಾದೇವ ಸಿಂಧೂರ, ನದಿ ಇಂಗಳಗಾಂವಿಯ ಗುರುಮೂರ್ತಿಸ್ವಾಮಿ, ಕೆ.ಬಿ. ಪೂಜಾರಿ ಶರಣರು ವರಗುಣವಾವುದು ವಿಷಯದ ಕುರಿತು ಉಪನ್ಯಾಸ ನೀಡಿದರು. ಬಸವರಾಜ ಮೂಗಳಖೋಡ, ಮಲ್ಲಯ್ಯ ಮಧುರಖಂಡಿ, ಬಸವರಾಜ ಲಕ್ಷ್ಮೇಶ್ವರ, ಗುರುಪಾದ ಬಳಗಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಬಸವರಾಜ ಪುರಾಣಿಕ, ಸದಾಶಿವ ಕಂಬಾರ, ಕೆ.ಬಿ.ಕುಂಬಾಳೆ, ಎಸ್. ಎಲ್.ಕುಂಬಾರ, ಪುರಾಣಿಕ, ಬಸವರಾಜ ಪಾಲಭಾಂವಿ ಇತರರು ಇದ್ದರು.