Advertisement

ನಮ್ಮೊಳಗಿನ ಚೈತನ್ಯ ಜಾಗೃತಗೊಳಿಸಿ ಸವಾಲು ಸ್ವೀಕರಿಸಿ 

02:15 AM Jul 13, 2017 | |

ಬೆಳ್ತಂಗಡಿ: ಕಣ್ಣುಬಿಟ್ಟ ಲೋಕದಲ್ಲಿ ಅಜ್ಞಾನದ ಹಿಂಸೆಯ ಮಬ್ಬು ಕವಿದಿದೆ. ನಾವು ಬೆಳಕಾಗಬೇಕು. ನಮ್ಮೊಳಗಿನ ಚೈತನ್ಯವನ್ನು ಜಾಗೃತಗೊಳಿಸಿ ಸವಾಲನ್ನು ಸ್ವೀಕರಿಸಿ ಗೆಲ್ಲಬೇಕು ಎಂದು ಮಂಗಳೂರು ವಿವಿ ಎಸ್‌.ವಿ.ಪಿ. ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಹೇಳಿದರು.

Advertisement

ಅವರು ಮಂಗಳವಾರ ಇಲ್ಲಿನ ಸಿವಿಸಿ ಹಾಲ್‌ನಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ಈ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆ  ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್‌ ಬಿ. ಸುವರ್ಣ, ಪ್ರತಿಯೊಬ್ಬರೂ ನಾಯಕತ್ವ 
ಗುಣ ಬೆಳೆಸಿಕೊಳ್ಳಬೇಕು. ಈ ಗುಣ ಕಾಲೇಜಿನಲ್ಲಿ ಮರೆಯಾಗದೇ ಅನಂತರವೂ ಮುಂದುವರಿಯಬೇಕು. ಆಧುನಿಕವಾಗಿ ನಾವು ಮುಂದುವರಿದಿದ್ದರೂ ಆಚ ರಣೆ, ಕಾರ್ಯದಲ್ಲಿ ಹಿಂದುಳಿದಂತೆ ಭಾಸವಾಗುವ ಚಟುವಟಿಕೆಗಳು ಬೇಡ. ಆಸಕ್ತಿಯ ಕ್ಷೇತ್ರದಲ್ಲಿ ಅಧ್ಯಯನ ಮಾಡಿ ಸಮಾಜದಲ್ಲಿ ನಮ್ಮ ಜವಾಬ್ದಾರಿಗಳನ್ನು ಮರೆಯದಿರೋಣ ಎಂದರು.
ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೋಮೇ ಗೌಡ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಮೋಹನ ಗೌಡ, ವಾಣಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಮಾಲಣ್ಣನವರ್‌, ಉಪಾಧ್ಯಕ್ಷೆ ಪ್ರಣಮ್ಯಾ, ಕಾರ್ಯದರ್ಶಿ ಯೋಗೀಶ್‌, ಜತೆ ಕಾರ್ಯದರ್ಶಿ ಹೇಮಂತ್‌, ಕ್ರೀಡಾ ಕಾರ್ಯದರ್ಶಿ ಗೋಪಾಲಕೃಷ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಜಿತಿನ್‌ ಜಿಜೋ, ವಿದ್ಯಾರ್ಥಿ ಕ್ಷೇಮಪಾಲನಾ ಕಾರ್ಯದರ್ಶಿ ಅಭಿಗೈಲ್‌ ರಿಚರ್ಡ್‌ ಪಿರೇರಾ   ಮತ್ತಿತರರು ಉಪಸ್ಥಿತರಿದ್ದರು.
 
ಪ್ರಾಂಶುಪಾಲ ಡಿ. ಯದುಪತಿ ಗೌಡ ಸ್ವಾಗತಿಸಿ, ಉಪಪ್ರಾಂಶುಪಾಲ ವಿಷ್ಣುಪ್ರಕಾಶ್‌ ಪದಾಧಿಕಾರಿಗಳ ಪರಿಚಯ ಮಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮಹಾಬಲ ಗೌಡ ಪ್ರಮಾಣವಚನ ಬೋಧಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಅನುರಾಧಾ ರಾವ್‌  ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next